Belagavi News In Kannada | News Belgaum

ಬಸವನಗೌಡ ಪಾಟೀಲ್‌ ಯತ್ನಾಳ್​ ಹಾಗೂ ಸಚಿವ ಮುರುಗೇಶ್​ ನಿರಾಣಿ ಮಧ್ಯೆ ಸಿಡಿ ಟಾಕ್ ಫೈಟ್

ವಿಜಯಪುರ: ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್​ ಹಾಗೂ ಸಚಿವ ಮುರುಗೇಶ್​ ನಿರಾಣಿ ಮಧ್ಯೆ ಸಿಡಿ ಟಾಕ್ ಫೈಟ್ ನಡೆಯುತ್ತಿದೆ. ಈ ಸಂಬಂಧ ಮುರುಗೇಶ್ ನಿರಾಣಿ ಹೇಳಿಕೆಗೆ ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್ ತಿರುಗೇಟು ಕೊಟ್ಟಿದ್ದು ಅವರಪ್ಪನಿಗೆ ಹುಟ್ಟಿದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

 

ಈ ಸಂಬಂಧ ಮತ್ತೆ ಮುರುಗೇಶಿ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದ ಯತ್ನಾಳ್​, ರಾಜ್ಯದಲ್ಲಿ 2 ಸಿಡಿ ಫ್ಯಾಕ್ಟರಿಗಳಿವೆ. ಒಂದು ಬಿಜೆಪಿಯಲ್ಲಿ ಇನ್ನೊಂದು ಕಾಂಗ್ರೆಸ್​ನಲ್ಲಿ. ಪಂಚಮಸಾಲಿ ಮೀಸಲಾತಿ ವಿಚಾರವನ್ನ ನಿರಾಣಿಯವರು ಅಧಿಕಾರಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ, ನಾವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಯತ್ನಾಳ್​ ಟೀಕಿಸಿದರು.

ವಿಜಯೇಂದ್ರ ವಿರುದ್ಧವೂ ಸಿಡಿಮಿಡಿ: ಇನ್ನು ಇದೇ ವೇಳೆ ಮಹಾನಗರ ಪಾಲಿಕೆ ಎಲೆಕ್ಷನ್​ನಲ್ಲಿ ನನ್ನ ವಿರುದ್ಧ ಬಿಜೆಪಿ ಸೋಲಿಸಲು ನಿರಾಣಿ ಹಾಗೂ ವಿಜಯೇಂದ್ರ ಹಣ ಹೂಡಿಕೆ ಮಾಡಿದ್ದರು. ಇಬ್ಬರು ಹಣ ಕಳಿಸಿಲ್ಲ ಅಂಥಾ ಧರ್ಮಸ್ಥಳದ‌‌ ಮಂಜುನಾಥ ಮೇಲೆ ಆಣೆ ಮಾಡ್ಲಿ ಎಂದು ಶಾಸಕ ಬಸನಗೌಡ ಯತ್ನಾಳ್​ ವಾಗ್ದಾಳಿ ನಡೆಸಿದರು.

ಇಬ್ಬರೂ ಸೇರಿ ಬಿಜೆಪಿ ಅಭ್ಯರ್ಥಿಗಳಿಗೆ ಹಣ ನೀಡಿಲ್ಲ. ಬದಲಿಗೆ ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ. ಆದರೆ ಕ್ಷೇತ್ರದ ಮತದಾರರು ಹಣ ತೆಗೆದುಕೊಳ್ಳದೇ ಮತ ಹಾಕಿದ್ದಾರೆ. ಇದರಲ್ಲಿ ನಿರಾಣಿ ಬೆಂಬಲಿಗರು ಹಣ ಹೊಡೆದುಕೊಂಡಿದ್ದಾರೆ. ಇನ್ನು ಬಸನಗೌಡ ಯತ್ನಾಳ್​ಗೆ ಟಿಕೆಟ್ ಸಿಗಲ್ಲ ಎಂದು ಸಚಿವ ಮುರುಗೇಶ್​ ನಿರಾಣಿ ಹೇಳಿದ್ದಕ್ಕೆ ಟಾಂಗ್​ ಕೊಟ್ಟ ಯತ್ನಾಳ್​, ಇವ ಯಾರೀ ನನಗೆ ಟಿಕೆಟ್ ಕೊಡಲು. ಇವನೇನು ಟಿಕೆಟ್​ ಕೊಡ್ತಾನಾ ಎಂದು ಯತ್ನಾಳ್​ ಪ್ರಶ್ನಿಸಿದರು.

ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತನಾಡಿದ ಯತ್ನಾಳ್, ನಾವು ಈ ಹಿಂದೆಯೇ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಪಂಚಮಸಾಲಿ ಹೋರಾಟ ಮಾಡಿದ್ದೇನೆಂದು ಹೇಳಿಲ್ಲ. ಅರ್ಧಕ್ಕೆ ಬಿಟ್ಟ ಹೋರಾಟವನ್ನ ಮುಂದುವರೆಸಿದ್ದೇವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ವಾಜಪೇಯಿ ಅವರ ಬಳಿ ಕರೆದುಕೊಂಡು ಹೋಗಿದ್ದು ನಾನೇ ಎಂದು ಯತ್ನಾಳ್​ ಹೇಳಿದರು.