Belagavi News In Kannada | News Belgaum

ಜ.12ರೊಳಗೆ ಮೀಸಲಾತಿ ಘೋಷಣೆಯಾಗದಿದ್ರೆ ಜ.13ರಂದು ಮತ್ತೆ ಹೋರಾಟ: ಜಯ ಮೃತ್ಯುಂಜಯ ಶ್ರೀ

ಹುಬ್ಬಳ್ಳಿ: ಜ. 12ರ ಮೊದಲು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲೇಬೇಕು. ಒಂದು ವೇಳೆ ಮೀಸಲಾತಿ ಘೋಷಣೆ ಆಗದೇ ಇದ್ದಲ್ಲಿ ಜ.13 ರಂದು ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿ ಮನೆಯ ಎದುರು ಮತ್ತೊಮ್ಮೆ ಹೋರಾಟ ಮಾಡುತ್ತೇವೆ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮೀಸಲಾತಿಗಾಗಿ ನಾವು ಎರಡೂ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಡಿಸೆಂಬರ್ 22ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡಲಾಗಿತ್ತು. ನಂತರ ಡಿಸೆಂಬರ್ 29ರವರೆಗೆ ಪರಿಪರಿಯಾಗಿ ಬೇಡಿಕೊಂಡು ಸಿಎಂ ಬೊಮ್ಮಾಯಿ ಸಮಯ ತೆಗೆದುಕೊಂಡಿದ್ದರು. ಈ ವೇಳೆ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದೇ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಸಚಿವ ಸಂಪುಟವನ್ನು ನಡೆಸಿ ಹೊಸದಾಗಿ 2ಡಿ ರಚನೆ ಮಾಡುವುದಾಗಿ ಬೊಮ್ಮಾಯಿ ಕಾನೂನು ಸಚಿವರಿಂದ ಹೇಳಿಸಿದ್ದರು.
ಅಂದು ಡಿ. 29ರಂದು ಮೀಸಲಾತಿ ವಿಚಾರವಾಗಿ ಹೊರಡಿಸಿದ ನಿರ್ಣಯದಲ್ಲಿ ಅಸ್ಪಷ್ಟತೆ ಇದೆ. ಡಿ ಗ್ರೂಪನ್ನು ಹೊಸದಾಗಿ ರಚನೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಯವಾಗ ನೀತಿ ಚುನಾವಣಾ ಸಂಹಿತೆ ಬರುತ್ತದೆಯೋ ಗೊತ್ತಿಲ್ಲ. ಹೀಗಾಗಿ ಜನವರಿ 12ರ ಮೊದಲು ನಮ್ಮ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಆಗ್ರಹಿಸಿದರು.
2ಡಿ’ಯಲ್ಲಿ ಏನಿದು ಎಂಬುದನ್ನು ಸರ್ಕಾರ ನಮಗೆ ತಿಳಿಸುವ ಕೆಲಸ ಮಾಡಲಿ. 2ಎ ಮೀಸಲಾತಿಯಲ್ಲಿ ಮೀಸಲಾತಿ ಸಿಗುತ್ತದೆಯೋ, ಅದೇ ಮೀಸಲಾತಿ ನಮ್ಮ ಸಮುದಾಯಕ್ಕೆ ನೀಡಬೇಕು. ಕಾನೂನು ತಜ್ಞರೇ 2ಡಿ ಮೀಸಲಾತಿ ಕೊಡಲು ಬರುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ಲಿಂಗಾಯತ ಸಮುದಾಯದ ಒಳಜಾತಿಗಳ ಎಲ್ಲರನ್ನೂಗೊಂಡ ಮೀಸಲಾತಿ ನೀಡುತ್ತೀರೋ? ಅಥವಾ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುತ್ತಿದಿಯೋ ಎಂದು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಸದ್ಯ ಸಮಗೆ ಘೋಷಣೆ ಮಾಡಲಾಗಿರುವ ಮೀಸಲಾತಿಯಿಂದ ಗೊಂದಲ ಆಗಿದೆ. ಹೀಗಾಗಿ ಆದಷ್ಟು ಬೇಗ ಮೀಸಲಾತಿ ಘೋಷಣೆಯ ಆದೇಶ ಪತ್ರವನ್ನು ನೀಡಿ. ನಂತರ ಮೀಸಲಾತಿಯನ್ನು ಸ್ವಾಗತಿಸಬೇಕೋ, ತಿರಸ್ಕರಿಸಬೇಕೋ ತೀರ್ಮಾನ ಮಾಡುತ್ತೇವೆ ಎಂದು ಸ್ವಾಮೀಜಿ‌ ಆಗ್ರಹಿಸಿದರು.//////