Belagavi News In Kannada | News Belgaum

ಬೆಂಗಳೂರು–ಹುಬ್ಬಳ್ಳಿ–ಬೆಳಗಾವಿ ನಡುವೆ ‘ವಂದೇ ಭಾರತ್’ ರೈಲು ಶೀಘ್ರದಲ್ಲೇ ಸಂಚಾರ

ಬೆಂಗಳೂರು:‌ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ನೂತನ ವಂದೇ ಭಾರತ್ ರೈಲು ಬೆಂಗಳೂರು- ಹುಬ್ಬಳ್ಳಿ- ಬೆಳಗಾವಿಗೆ ಶೀಘ್ರದಲ್ಲಿ ಸಂಚಾರ ಆರಂಭಿಸಲಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಹೊಸ ವಂದೇ ಭಾರತ್ ರೈಲು ಧಾರವಾಡಕ್ಕೂ ವಿಸ್ತರಣೆಯಾಗಲಿದೆ. ಈಗಾಗಲೇ ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಶೀಘ್ರವೇ ಬೆಂಗಳೂರು- ಹುಬ್ಬಳ್ಳಿ- ಬೆಳಗಾವಿಗೆ ಕರ್ನಾಟಕದ 2 ನೇ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿದುಬಂದಿದೆ.
ಈ ಕುರಿತು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಮಾಹಿತಿ ನೀಡಿದ್ದು, ಬೆಂಗಳೂರು ಧಾರವಾಡ ನಡುವಿನ ವಂದೇ ಭಾರತ್ ರೈಲು ಬೆಳಗಾವಿಯವರೆಗೂ ವಿಸ್ತರಣೆಗೊಳ್ಳುವ ಸಾದ್ಯತೆ ಇದೆ ಎಂದು ತಿಳಿಸಿದ್ದಾರೆ.//////