Belagavi News In Kannada | News Belgaum

ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ

ಹುಕ್ಕೇರಿ: ದೂರದೃಷ್ಟಿಯಿಂದ ನೂರು ವರ್ಷಗಳ ಹಿಂದೆ ಹಿರಿಯರು ನೇರ್ಲಿ ಗ್ರಾಮದಲ್ಲಿ ಸಹಕಾರಿ ಸಂಸ್ಥೆಯು ಹುಟ್ಟು ಹಾಕಿ ಇಂದು ಹೆಮ್ಮರವಾಗಿ ಬೆಳೆದು ಇಂದಿನ ರೈತರಿಗೆ ಫಲ ನೀಡುತ್ತಿರುವ ಹಿರಿಯರ ಶ್ರಮ ಸಾರ್ಥಕವೆಂದು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಅವರು ತಾಲೂಕಿನ ನೇರ್ಲಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. 1919 ರಲ್ಲಿ ಪರಸ್ಪರ ಸಹಕಾರ ಮಂಡಳ ಹಸರಿನಲ್ಲಿ ಪ್ರಾರಂಭಗೊಂಡ 105 ವರ್ಷದ ಸಂಸ್ಥೆಯು ಬಿಡಿಸಿಸಿ ಹಾಗೂ ಪಿಕೆಪಿಎಸ್ ಮೂಲಕ ರೈತರ ಮನೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ 1300 ಸದಸ್ಯರಿಗೆ 4ಕೋಟಿ 60 ಲಕ್ಷ ರೂ ಸರಕಾರದಿಂದ ಸಾಲ ಪಡೆಯುವದರ ಜೊತೆ ಸಾಲ ಮನ್ನಾ ಮಾಡಿಕೊಂಡಿದೆಂದರು. ಗ್ರಾಮದಲ್ಲಿ ಇರುವ ಎರಡು ಪ್ರಾಥಮಿಕ ಸಹಕಾರಿಗಳು ರೈತರ ಎರಡು ಕಣ್ಣುಗಳು ಅವುಗಳ ರಕ್ಷಣೆ ಮುಖ್ಯವೆಂದರು.

ಸರಕಾರಗಳು ಉಚಿತ ಬಾಗ್ಯ ನೀಡಿ ರೈತರನ್ನು ಪರಾವಂಬಿ ಮಾಡದೆ. ಅವರಿಗೆ ಗುಣಮಟ್ಟದ ಆರೋಗ್ಯಚಿಕಿತ್ಸೆ,ಶಿಕ್ಷಣ.ನೀರು. ವಿದ್ಯುತ ,ವೈಜ್ಞಾನಿಕ ಬೆಳೆಗೆ ಬೆಂಬಲ ಬೆಲೆ ನೀಡಿದ್ದಲ್ಲಿ ರೈತರು ಸ್ವಾವಲಂಬಿಯಾಗಿ ಬದುಕಲು ಸಾದ್ಯ ಸರಕಾರ ಹೆಚ್ಚಿನ ಗಮನನೀಡಬೇಕು ಎಂದರು.

ಅಧ್ಯಕ್ಷ ಈಶ್ವರ ಖೋತ ಮಾತನಾಡಿ ಹಿರಿಯರ ಮಾರ್ಗದರ್ಶನ ದಲ್ಲಿ ಸಹಕಾರಿ ಸಂಸ್ಥೆಯು ರೈತರ ಹಿತದೃಷ್ಟಿಯಿಂದ ಇಂದು ಹಾಲಿನ ಡೇರಿ,ಪಡಿತರ ,ಗೊಬ್ಬರ,ಸಾಲ ವಿತರಣೆ ಮಾಡಿ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ.
ನೀಡಸೋಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಘೋಡಗೇರಿಯ ಕಾಶಿನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ಹಿರಾಶುಗರ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ. ಪಿಕಾರ್ಡ ಅದ್ಯಕ್ಷ ಸುಬಾಷ ಪಾಟೀಲ.ಶಕೀಲ ಮುಲ್ಲಾ,ಬಸವರಾಜ ಲಬ್ಬಿ,ಅಮರ ಪತಾಟೆ ,ರವಿ ಪಾಟೀಲ,ಸುಚಿತ ಪಾಟೀಲ. ಬಾಬಾಗೌಡ ಪಾಟೀಲ, ಗಂಗವ್ವಾ ಕರೋಶಿಮಠ, ಗ್ರಾ.ಪಂ ಅಧ್ಯಕ್ಷೇ ಲಕ್ಷ್ಮೀ ಮಾಳಗೆ,,ಅಪ್ಪಾಸಾಹೆವ ಪಾಟೀಲ ಸೋಮೇಶ ಶೇಡಬಾಳೆ ಭೀಮರಾವ ಜಾಧವ . ತಾಲುಕಾ ನಿಯಂತ್ರಣಾಧಿಕಾರಿರಿ ಎಸ್.ಬಿ ಸನದಿ,ಬ್ಯಾಂಕ ನಿರೀಕ್ಷಕ ಮಂಜುನಾಥ ಹಡಾಡಿ,ಕಾರ್ಯನಿರ್ವಾಹಕಧಿಕಾರಿ ರಾಮಪ್ಪ ಶಿಂದೆ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸಾವಿತ್ರಿ ಶೆಂಡೂರಿ,ಆಡಳಿತ ಮಂಡಳಿಯ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಸೇಲೆ ಸಲ್ಲಿಸಿದ ಎಲ್ಲ ಹಿಂದಿನ ಆಡಳಿತ ಸದಸ್ಯರನ್ನು ಸನ್ಮಾನಿಸಿದರು.
ಶಿಕ್ಷಕ ಎ.ಎಸ್ ಪದ್ಮಣವರ ಹಾಗೂ ಸುನೀಲ ಖೋತ ನಿರೂಪಿಸಿದರು.