ಆತ್ಮನಿರ್ಭರ ಬೀದಿಬದಿ ವ್ಯಾಪಾರಸ್ಥರ ಸಂಭ್ರಮ ಆಚರಣೆ ಬೀದಿಬದಿ ವ್ಯಾಪಾರಿಗಳು ಬೃಹತ್ ಉದ್ಯಮಿಗಳಾಗಲು ಶ್ರಮ ವಹಿಸಿ: ಶಾಸಕ ಅನೀಲ ಬೆನಕೆ

ಬೆಳಗಾವಿ, ಜ.09 : ಬೀದಿಬದಿ ವ್ಯಾಪಾರಿಗಳು ಮುಂಬರುವ ದಿನಗಳಿಲ್ಲಿ ದೊಡ್ಡ ವ್ಯಾಪಾರಿಗಳಾಗುವ ಯೋಜನೆ ರೂಪಿಸಿ, ಬೃಹತ್ ವ್ಯಾಪಾರದಲ್ಲಿ ತೊಡಗಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಮೂಲಕ ಜೀವನದಲ್ಲಿ ಬದಲಾವಣೆ ಕಂಡುಕೋಳ್ಳಬೇಕು ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಬೀದಿಬದಿ ವ್ಯಾಪಾರಸ್ಥರಿಗೆ ಸಲಹೆ ನೀಡಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸೋಮವಾರ (ಜ9) ನಡೆದ ಆತ್ಮನಿರ್ಭರ ಬೀದಿಬದಿ ವ್ಯಾಪಾರಸ್ಥರ ಸಂಭ್ರಮ ಆಚರಣೆ 2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುಟ್ಟಿನಿಂದಲೂ ಯಾರು ದೊಡ್ಡ ವ್ಯಕ್ತಿಗಳಾಗಿರುವುದಿಲ್ಲ ಚಹಾ ಮಾರುವಂತ ವ್ಯಕ್ತಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ, ಹಾಗೇ ನೀವು ಏಕೆ ದೊಡ್ಡ ವ್ಯಾಪಾರಿಗಳಾಗಬಾರದು? ನೀಮ್ಮಲ್ಲಿ ಆತ್ಮ ಸ್ಥರ್ಯ, ಇಚ್ಚಾಶಕ್ತಿ ಇಟ್ಟುಕೊಂಡು ನೀವು ಸಹ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳುವುದು ಖಚಿತ ಎಂದು ಶಾಸಕ ಅನೀಲ ಬೆನಕೆ ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ಅನೇಕ ಸಮಸ್ಯೆಗಳಿಗೆ ತುತ್ತಾದಾಗ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ 10 ಸಾವಿರ ರೂ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುವುದು ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ, ರುದ್ರೇಶ ಘಾಳಿ ಅವರು ತಿಳಿಸಿದರು.
ಬೀದಿಬದಿ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಸೌಲಭ್ಯಗಳು ಇವೆ. ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಹಾಗೂ ಇತರರಿಗು ಈ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಎಂದು ಸಂಸದರು ಮಂಗಳಾ ಅಂಗಡಿ ಅವರು ತಿಳಿಸಿದರು.
ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಕನ್ನಡ ಮತ್ತು ಸಾಂಸ್ಕøತಿ ಇಲಾಖೆಯ ಉಪನಿರ್ದೇಕರಾದ ವಿದ್ಯಾವತಿ ಭಜಂತ್ರಿ, ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರಾದ ಪ್ರಸಾದ ಕವಳೇಕರ, ಇಮಾನ ಹುಸೇನ ನದಾಫ, ಸಂಗೀತಾ ಕೋತ, ವಿಜಯ ಚೌವ್ಹಾನ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.