Belagavi News In Kannada | News Belgaum

ಇಂಡಿಗೋ ವಿಮಾನದಲ್ಲಿ ಇಬ್ಬರು ಮದ್ಯ ಸೇವಿಸಿದ್ದ ಪ್ರಯಾಣಿಕರನ್ನುಪಾಟ್ನಾ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ

ಪಾಟ್ನಾ: ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ- ಪಾಟ್ನಾ ಇಂಡಿಗೋ ವಿಮಾನದಲ್ಲಿ ಇಬ್ಬರು ಮದ್ಯ ಸೇವಿಸಿದ್ದ ಪ್ರಯಾಣಿಕರನ್ನುಪಾಟ್ನಾ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಿಂದ ವಿಮಾನ ಹತ್ತುವಾಗ ಇಬ್ಬರು ಪ್ರಯಾಣಿಕರು ಕುಡಿದಿದ್ದರು. ಅದಾದ ಬಳಿಕವೂ ವಿಮಾನದಲ್ಲಿ ಮದ್ಯ ಸೇವನೆ ಮಾಡಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ವಿಮಾನದಲ್ಲಿ ಆ ಇಬ್ಬರು ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್ಸ್ ಏರ್ ಟ್ರಾಫಿಕ್ ಕಾಂಟ್ರೊಲ್‍ಗೆ ಮಾಹಿತಿ ನೀಡಲಾಗಿತ್ತು.
ವಿಮಾನದಲ್ಲಿ ಮದ್ಯ ಸೇವನೆಯನ್ನು ನಿಷೇಧದ ಹಿನ್ನೆಲೆಯಲ್ಲಿ ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ವಿಮಾನದಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದು ಮೂಲಗಳು ತಿಳಿಸಿದೆ. ಇದೊಂದು ಗಂಭೀರ ಸಮಸ್ಯೆ ಆಗಿದ್ದು, ಆ ಇಬ್ಬರು ಆರೋಪಿಗಳಿಗೆ ವಿಮಾನದಲ್ಲಿ ಬಿಯರ್ ಎಲ್ಲಿಂದ ದೊರಕಿದೆ ಎನ್ನುವುದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.