Belagavi News In Kannada | News Belgaum

ನನ್ನ ರಕ್ತನೇ ಕಾಂಗ್ರೆಸ್, ನಾನು ‘ಕೈ’ ಪಕ್ಷ ಸೇರುತ್ತೇನೆ: ಹೆಚ್‌. ವಿಶ್ವನಾಥ್

ರಾಯಚೂರು: ನನ್ನ ರಕ್ತನೇ ಕಾಂಗ್ರೆಸ, ಹೌದು ನಾನು ಕಾಂಗ್ರೆಸ್ ಸೇರುತ್ತೇನೆ. ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಅಂತ ವಿಧಾನಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್  ಹೇಳಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳೆದವರು. ಲಾ ಕೂಡ ಒಟ್ಟಿಗೆ ಮಾಡಿದ್ದೇವೆ. ರಾಜಕೀಯದಲ್ಲಿ ಸಿದ್ದರಾಮಯ್ಯಗಿಂತ ನಾನು ಹಿರಿಯ. ರಾಜಕಾರಣ ಒಂದು ಕುಟುಂಬ. ಅಣ್ಣ, ತಮ್ಮ ಮುನಿಸಿಕೊಂಡು ಹೊರಹೋಗ್ತಾರೆ ವಾಪಸ್ ಬರ್ತಾರೆ. ಪ್ರತಾಪ್‌ ಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೆ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಅಂತ ಕಿಡಿಕಾರಿದ್ದಾರೆ.
ನಾನು ಸಾಹಿತ್ಯ ಕ್ಷೇತ್ರದ ಎಂಎಲ್‍ಸಿ ಬಿಜೆಪಿ ಎಂಎಲ್‍ಸಿ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದ ಬಳಿಕ ನಾಮಿನೆಟ್ ಮಾಡಿದ್ದಾರೆ. ಬಹಳ ಜನರಿಗೆ ಇದು ಗೊತ್ತಿಲ್ಲ ನಾನು ಯಾವ ಪಕ್ಷದಲ್ಲಿಲ್ಲ ಸ್ವತಂತ್ರ ವ್ಯಕ್ತಿ  ಎಂದು ವಿಶ್ವನಾಥ್ ಹೇಳಿದ್ದಾರೆ.//////