ಸಂಕ್ರಾಂತಿಯ ಸಡಗರ..

ಸಂಕ್ರಾಂತಿಯ ಸಡಗರ..
ದಕ್ಷಿಣ ಭಾರತದ ಹೆಮ್ಮೆಯ ಹಬ್ಬ
ಕರ್ನಾಟಕದ ನಲ್ಮೆಯ ಸಂಕ್ರಾಂತಿ ಹಬ್ಬ
ಪೈರು ತೆಗೆಯುವ ಸಂದರ್ಭದ ಈ ಹಬ್ಬ
ಸನಾತನ ಹಿಂದೂ ಧರ್ಮದ ಬುನಾದಿಯ ಹಬ್ಬ.
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ
ಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭದ ದಿನ
ಎಳ್ಳು ಬೆಲ್ಲವನ್ನು ಹಂಚುವ ಖುಷಿಯ ದಿನ
ಹಣ್ಣು,ಸಕ್ಕರೆ, ಕಬ್ಬಿನ ರಸವ ಸವಿಯುವ ದಿನ.
ಸುಗ್ಗಿಯ ಹಬ್ಬ ಕರುನಾಡ ರೈತರಿಗೆ
ಗಾಳಿಪಟವ ಹಾರಿಸುವ ಎತ್ತರದ ಬಾನಿಗೆ
ಗುಂಪು ಗುಂಪಾಗಿ ರಂಗೋಲಿ ಬಿಡಿಸಿ ದಾರಿಗೆ
ಸಕ್ಕರೆಯ ತಿಂದು ಅಕ್ಕರೆಯ ಬೀರುವ ನಾಡಿಗೆ.
ತಮಿಳುನಾಡಿನಲ್ಲಿ ಈ ಸಂಕ್ರಾಂತಿಯು ಪೊಂಗಲ್
ಲಂಗಾ ದಾವಣಿಯ ಹುಡುಗಿಯರು ಆ ದಿನ ಕಾಜಲ್
ಕೆಲವು ಕಡೆ ಜೆಲ್ಲಿ ಕಟ್ಟಿನ ಗಜಲ್
ಹಳ್ಳಿಯ ಹಬ್ಬ ನೋಡಲು ಸಾಲದು ದಿಲ್.
ಪಂಜಾಬ್ ಹರಿಯಾಣದಲ್ಲಿ ಈ ಹಬ್ಬ ಲೋಹರಿ
ಎಳ್ಳಿನ ಉಂಡೆ ಲಡ್ಡು ತಿನ್ನುವುದು ಹಬ್ಬದ ಸಿರಿ
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನದ ಗಿರಿ
ಹುರಿಗಡಲೆ ಕಡಲೇಕಾಯಿ ಬೀಜ ತಿನ್ನಿರಿ ಒಣ ಕೊಬ್ಬರಿ.
ರಚನೆ:ಶ್ರೀ ಮುತ್ತು.ಯ.ವಡ್ಡರ ( ಶಿಕ್ಷಕರು)