ಗುಡಸ ಗ್ರಾಮ ಪಂಚಾಯತಿಯಲ್ಲಿ ಗೊಲ್ಮಾಲ್ ಫೇವರ್ ಬ್ಲಾಕ್ ಕಳಪೆ

ಗುಡಸ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮ ಪಂಚಾಯತಿಯಲ್ಲಿ ಗೊಲ್ಮಾಲ್ ಫೇವರ್ ಬ್ಲಾಕ್ ಕಳಪೆ ಗುಣಮಟ್ಟದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಗುಂಡಾವರ್ತನೆ ತೋರಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಹೌದು ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಸ ತೊಟವೊಂದರ ಶಾಲೆಯಲ್ಲಿ ಪೆವರ್ ಬ್ಲಾಕ್ ಕಾಂಪೌಂಡ ಹೈಟೆಕ್ ಶೌಚಾಲಯ ಕಟ್ಟಡ ಕಾಮಗಾರಿಗಳು ಕಳಪೆ ಮಟ್ಟದಿಂದ ಕಾರ್ಯಗಳು ನಡೆಯುತ್ತಿದ್ದಾವೆ ಎಂಬ ಮಾಹಿತಿ ಗ್ರಾಮಸ್ಥರಿಂದ ಕೇಳಿ ಬಂದಿತ್ತು. ಆದರೆ ಸುದ್ದಿ ಮಾಡಲು ಹೋದಾಗ ಕಳಪೆ ಮಟ್ಟದ ಬಗ್ಗೆ ಮಾಹಿತಿಯನ್ನ ಗುತ್ತಿಗೆದಾರನಿಗೆ ಕರೆ ಮುಖಾಂತರ ತಿಳಿಸಿದ್ದೆವೂ ಆದರೆ ಪೆವರ್ ಬ್ಲಾಕ್ ಬದಲಾಯಿಸಿ ಗುಣಮಟ್ಟದ ಬ್ಲಾಕಗಳನ್ನ ತರುತ್ತೆವೆಂದು ಹೇಳಿ ಮತ್ತೆ ಒಡೆದ ಮುರುಕು ಕಲ್ಲುಗಳನ್ನ ಜೋಡಿಸಿ ಬಿಲ್ಲಗೆ ದಾರಿ ನೊಡ್ತಿದ್ದಾರೆ. ಗುಡಸ್ ಪಂಚಾಯತ ಅಧ್ಯಕ್ಷ ಹಾಗೂ ಗುತ್ತಿಗೆದಾರ ಹೇಗಾದರೂ ಆಗಲಿ ಕಾಮಗಾರಿ ಹಾಳಾಗಲಿ ನನಗೆ ಕಮಿಷನ್ ಬಂದ್ರೆ ಸಾಕು ಎಂದು ಇಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಮಗಾರಿಗಳು ಕಳಪೆ ಮಟ್ಟದ್ದು ಇರುತ್ತವೆ ಆದರೆ ಅಧ್ಯಕ್ಷನ ಧಾಧಾಗಿರಿ ಗೂಂಡಾ ವರ್ತನೆಯ ಕುಮ್ಮಕ್ಕಿನಿಂದ ಗುತ್ತಿಗೆದಾರನಿಗೆ ಬಂತು ಬಂತು ಕುತ್ತು. ಸರ್ಕಾರದ ಕೆಲಸ ದೇವರ ಕೆಲಸ! ಆದರೆ ಇಲ್ಲಿ ಯಾರಾದ್ರು ಹಾಳಾಗಹೋಗ್ಲಿ ನಾವ ನೆಟ್ಟಗಿದ್ದರೆ ಸಾಕು ಎಂಬಂತೆ ಪತ್ರಕರ್ತರಿಗೆ ಉಢಾಫೆ ಉತ್ತರ ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಿರುವದು ನೇರವಾಗಿ ಕಂಡು ಬರುತ್ತಿದೆ. ಆದರೆ ಅಧಿಕಾರಿಗಳ ಕುಮ್ಮಕ್ಕು ಕಮಿಷನ್ ಗೆ ಬಾಲ ಎಬ್ಬಿಸುವ ಗಿರಾಕಿಗಳೇ ಹೆಚ್ಚಾಗಿದ್ದರಿಂದ ನಮ್ಮ ರಾಜ್ಯ ಅಭಿವ್ರದ್ದಿಯಲ್ಲಿ ಹತ್ತು ಹೆಜ್ಜೆ ಹಿಂದೆ ಇದೆ.ಇನ್ನೂ ಕಳಪೆ ಬಗ್ಗೆ ಸುದ್ದಿ ನೋಡಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಳಪೆ ಮಾಡಿದವರ ವಿರುದ್ಧ ಕಾನೂನಿನ ಕ್ರಮ ಕೈಗೋಳ್ಳಬೆಕೆಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.ಪತ್ರಕರ್ತರಿಗೆ ಇ ರೀತಿ ಧಮ್ಕಿ ಹಾಕುವದಾದರೆ ಸಾಮಾನ್ಯ ವರ್ಗದವರು ಗುಡಸ್ ಪಂಚಾಯತ ಗೆ ಮಾಹಿತಿ ಕೇಳಲು ಹೋಗುವದು ಮುಜುಗರವಾಗಿದೆ.ಒಟ್ಟಿನಲ್ಲಿ ಅಧ್ಯಕ್ಷ ಹಾಗೂ ಗುತ್ತಿಗೆದಾರರು ಸರ್ವಾಧಿಕಾರ ತೋರುತ್ತಿರುವುದು ಗ್ರಾಮಸ್ಥರಲ್ಲಿ ಬಯದ ವಾತಾವರಣ ಮೂಡುವಂತಾಗಿದೆ.