ಆಟೋ ಎಕ್ಸ್ಪೋದಲ್ಲಿ ಕಿಯಾ ಕಾನ್ಸೆಪ್ಟ್ ಇವಿ9

Hubballi : ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕ ಕಂಪನಿ ಕಿಯಾ ಇಂಡಿಯಾ ಸುಸ್ಥಿರ, ಅನ್ವೇಷಣೀಯ ಮತ್ತು ನಿಜವಾಗಿ ಸಂಪರ್ಕಿತ ಸಂಚಾರದ ಭವಿಷ್ಯದ ಒಳನೋಟವನ್ನು ಪ್ರದರ್ಶಿಸಿದೆ. ಬ್ರ್ಯಾಂಡ್ ತನ್ನ ಸಮಗ್ರ ಎಲೆಕ್ಟ್ರಿಕ್ ಎಸ್ಯುವಿ ಕಾನ್ಸೆಪ್ಟ್ ಕಿಯಾ ಕಾನ್ಸೆಪ್ಟ್ ಇವಿ9 ಅನ್ನು ಆಟೋ ಎಕ್ಸ್ಪೋದ 16ನೇ ಆವೃತ್ತಿಯಲ್ಲಿ ಪ್ರದರ್ಶಿಸಿದೆ. ಸುಸ್ಥಿರ ಸಂಚಾರ ಸೌಲಭ್ಯದ ಪೂರೈಕೆದಾರನಾಗುವುದರ ತನ್ನ ಧ್ಯೇಯವನ್ನು ಇದು ಎತ್ತಿ ತೋರಿಸುತ್ತದೆ.
ಅನ್ವೇಷಣೀಯ ಭವಿಷ್ಯವನ್ನು ರೂಪಿಸಿದ ಬ್ರ್ಯಾಂಡ್ ಲಕ್ಷುರಿ ಆರ್ವಿ ಕಿಯಾ ಕೆಎ4 ಪ್ರದರ್ಶಿಸಿದೆ. ಅತಿ ಸುಂದರ ವಿನ್ಯಾಸ, ವಿಶ್ವದರ್ಜೆಯ ಸುರಕ್ಷತೆ,
ಒಟ್ಟಾರೆಯಾಗಿ, ಸಂಚಾರದ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಬದಲಿಸುವ ನಿಟ್ಟಿನಲ್ಲಿ ಬ್ರ್ಯಾಂಡ್ನ ಅನುಸಂಧಾನವನ್ನು ಆಟೋ ಎಕ್ಸ್ಪೋದಲ್ಲಿ ಕಿಯಾ ಇಂಡಿಯಾ ಪ್ರಚುರಪಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತಾಯೆ ಜಿನ್ ಪಾರ್ಕ್ “ಕಿಯಾ ಡೈನಾಮಿಕ್ ಬ್ರ್ಯಾಂಡ್ ಆಗಿದ್ದು, ಇಂದು ನಾವು ಎದುರಿಸುತ್ತಿರುವ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದೇ ರೀತಿ ವರ್ತನೆಯನ್ನು ವಿಶ್ವವು ತೋರಿಸುತ್ತಿದೆ. ಅಲ್ಲದೆ, ನಾವು ಪರಿಸರ ಸ್ನೇಹಿ ಮತ್ತು ಸ್ವಚ್ಛವಾದ ಭವಿಷ್ಯಕ್ಕೆ ಕೊಡುಗೆ ನೀಡುವ ಧ್ಯೇಯವನ್ನು ಹೊಂದಿದ್ದು, ಸ್ಫೂರ್ತಿದಾಯಕ ಭವಿಷ್ಯದ ಗುರಿಯನ್ನೂ ನಾವು ಈ ಮೂಲಕ ವ್ಯಾಖ್ಯಾನಿಸುತ್ತಿದ್ದೇವೆ” ಎಂದಿದ್ದಾರೆ.”
ಕಿಯಾ ಕೆಎ4 ಬಗ್ಗೆ
ಆಟೋ ಎಕ್ಸ್ಪೋದಲ್ಲಿ ಬಿಡುಗಡೆ ಮಾಡಿದ ಇನ್ನೊಂದು ಉತ್ಪನ್ನ ಕಿಯಾ ಕೆಎ4 ಆಗಿದ್ದು, ಇದು ಐಷಾರಾಮಿ ಮತ್ತು ದೊಡ್ಡ ಆರ್ವಿ ಆಗಿದೆ. ವಾಹನವು ಬೋಲ್ಡ್ ಎಸ್ಯುವಿ ರೀತಿಯ ವಿನ್ಯಾಸವನ್ನು ಹೊಂದಿದ್ದು, ಉತ್ತಮ ರೋಡ್ ಪ್ರೆಸೆನ್ಸ್ ಹೊಂದಿದೆ. ಒಟ್ಟಾರೆಯಾಗಿ, ಕಿಯಾ ಕೆಎ4 ವಿಶಿಷ್ಟವಾದ ಯುವಿ ಆಗಿದ್ದು, ಹೊರಭಾಗಕ್ಕೆ ಸಂಪೂರ್ಣವಾದ ಹೊಸತನ ಮತ್ತು ಗಟ್ಟಿಮುಟ್ಟಾದ ಲುಕ್ ನೀಡುತ್ತದೆ. ವಾಹನದ ಒಳಭಾಗವನ್ನು ಕಿಯಾದ ಕ್ಯಾಲಿಫೋರ್ನಿಯಾ ಡಿಸೈನ್ ಸ್ಟೂಡಿಯೋದಲ್ಲಿ ವಿನ್ಯಾಸ ಮಾಡಲಾಗಿದೆ.
ಈ ಡಿಸೈನ್ ಸ್ಟೂಡಿಯೋ ಟೆಲುರೈಡ್ ಮತ್ತು 2021 ಸೊರೆಂಟೋ ಎಸ್ಯುವಿಯಂತಹ ಜಾಗತಿಕ ಪ್ರಶಸ್ತಿ ಪುರಸ್ಕೃತ ವಾಹನಗಳನ್ನು ವಿನ್ಯಾಸ ಮಾಡಿದೆ. ಕಾರ್ಗೋ ಮತ್ತು ಪ್ಯಾಸೆಂಜರ್ ಮತ್ತು ಸೀಟಿಂಗ್ ಲೇಔಟ್ಗಳಲ್ಲಿ ಕಿಯಾ ಕೆಎ4 ನಿಜವಾದ ಅನ್ವೇಷಣೆಯನ್ನು ಪ್ರದರ್ಶಿಸುತ್ತದೆ. ಈ ವರ್ಗದಲ್ಲೇ ಅತ್ಯುತ್ತಮ ಪ್ಯಾಸೆಂಜರ್ ಮತ್ತು ಕಾರ್ಗೋ ಸ್ಥಳವನ್ನು ವಾಹನ ಹೊಂದಿದ್ದು, ಸ್ಲೈಡ್ ಫ್ಲೆಕ್ಸ್ 2ನೇ ಸಾಲು ಸೀಟಿಂಗ್ ಮತ್ತು ವಿಐಪಿ ಲೌಂಜ್ ಸೀಟಿಂಗ್ ಸ್ಥಳವನ್ನು ಹೊಂದಿದೆ.
ರಿಮೋಟ್ ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್, ಲೇನ್ ಫಾಲೋವಿಂಗ್ ಅಸಿಸ್ಟ್, ಫಾರ್ವರ್ಡ್ ಕೊಲಿಶನ್ ಅವಾಯ್ಡೆನ್ಸ್ ಅಸಿಸ್ಟ್ (ಎಫ್ಸಿಎ) ಮತ್ತು ಬ್ಲೈಂಡ್ ಸ್ಪಾಟ್ ಅವಾಯ್ಡೆನ್ಸ್ ಅಸಿಸ್ಟ್ (ಬಿಸಿಎ) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಜೊತೆಗೆ, ವಾಹನದಲ್ಲಿ ಡ್ಯೂಯೆಲ್ ಸನ್ರೂಫ್. 12.3” ಎವಿಎನ್ಟಿ, ವೈರ್ಲೆಸ್ ಸ್ಮಾರ್ಟ್ ಚಾರ್ಜಿಂಗ್ ಮತ್ತು ಮಲ್ಟಿ ಬ್ಲ್ಯೂಟೂತ್ ಕನೆಕ್ಟಿವಿಟಿ ಸೌಲಭ್ಯವನ್ನು ಇದು ಹೊಂದಿದೆ.
ಕಿಯಾ ಕೆಎ4 ಹೊಂದಿರುವ ಅತ್ಯಂತ ನವೀನ ವೈಶಿಷ್ಟ್ಯಗಳಲ್ಲಿ ಒಂದೆಂದರೆ ರಿಯರ್ ಆಕ್ಯುಪಂಟ್ ಅಲರ್ಟ್ ಆಗಿದೆ. ಅಲ್ಟ್ರಾ ಸೋನಿಕ್ ವೇವ್ಸ್ನ ಸಹಾಯದಿಂದ ವಾಹನವು ಬಾಗಿಲನ್ನು ಲಾಕ್ ಮಾಡಿದ ನಂತರ ಹಿಂದಿನ ಸೀಟಿನಲ್ಲಿ ಪ್ರಯಾಣಿಕರ ಚಲನೆಯನ್ನು ಇದು ಪತ್ತೆ ಮಾಡಬಲ್ಲದು. ಸುಧಾರಿತ ಡ್ರೈವಿಂಗ್ ಡೈನಾಮಿಕ್ಸ್ ಹೊಂದಿರುವ ಕಿಯಾ ಕೆಎ4 ವಿನ್ಯಾಸ, ಸಾಮರ್ಥ್ಯ, ಸುರಕ್ಷತೆ ಮತ್ತು ಲಕ್ಷುರಿಯ ವಿಶಿಷ್ಟ ಸಂಯೋಜನೆ ಒಳಗೊಂಡಿದೆ.