Belagavi News In Kannada | News Belgaum

ಹಿಂಡಲಗಾ ಜೈಲಿಗೆ ಬಂದಿರುವ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬೆಳಗಾವಿ-ಹಿಂಡಲಗಾ ಜೈಲಿಗೆ ಬಂದಿರುವ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.ಬೆಳಗಾವಿಯಿಂದಲೇ ಕೇಂದ್ರ ‌ಹೆದ್ದಾರಿ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪೂರ ಪೋಲೀಸರು ಹಿಂಡಲಗಾ ಜೈಲಿಗೆ ದೌಡಾಯಿಸಿದ್ದಾರೆ.ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ‌ ಕೈದಿಯಿಂದಲೇ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಶನಿವಾರ ಬೆಳಗ್ಗೆ, ನಿತೀನ್ ಗಡ್ಕರಿ ಮೊಬೈಲ್‌ಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕಿರುವ ಕೈದಿಯ ವಿಚಾರಣೆಗೆ ನಾಗಪೂರ ಪೋಲೀಸರು ಬೆಳಗಾವಿಗೆ ಬಂದಿದ್ದಾರೆ.

ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗ್ಪುರ ಪೊಲೀಸರ ಗಮನಕ್ಕೆ ‌ನಿತೀನ್ ಗಡ್ಕರಿ ತಂದಿದ್ದು,ಆರೋಪಿ ಶೋಧಕ್ಕೆ ಹಿಂಡಲಗಾ ಜೈಲಿಗೆ ಬಂದಿರುವ ನಾಗ್ಪುರ ಪೊಲೀಸರು ನಿನ್ನೆ ಶನಿವಾರ ರಾತ್ರಿಯಿಂದ ವಿಚಾರಣೆ ನಡೆಸಿದ್ದಾರೆ.ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದಾರೆ.ನಿನ್ನೆ ಸಂಜೆ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧ ಕಾರ್ಯ ನಡೆಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.ಇವತ್ತೂ ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ ಇದೆ.

ಈ ಹಿಂದೆ ಉತ್ತರ ವಲಯ ಐಜಿಪಿ ಆಗಿದ್ದ ಅಲೋಕಕುಮಾರ್‌ಗೆ ಜೀವ ಬೆದರಿಕೆ ಹಾಕಿದ್ದ ಕೈದಿಗಳು,
ಹಲವು ಸಲ ಸರ್ಪೈಸ್ ದಾಳಿಯಾದರೂ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮೊಬೈಲ್ ಬಳಕೆ ನಿಲ್ಲುತ್ತಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಪರಶೀಲಿಸಿದ ಬಳಿಕ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಕೈದಿಯಿಂದಲೇ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.