Belagavi News In Kannada | News Belgaum

ಧಾರ್ಮಿಕ ಅಚಾರ ಹೇಳುವದು ಮುಖ್ಯವಲ್ಲ, ಧಾರ್ಮಿಕ‌ ಸಂಸ್ಕಾರದಲ್ಲಿ ನಮ್ಮನ್ನ ನಾವು ಅಳವಡಿಸಿಕೊಳ್ಳುವದು ಈಗಿನ ಜಯಮಾನ

ಬೈಲಹೊಂಗಲ: ಧಾರ್ಮಿಕ ಅಚಾರ ಹೇಳುವದು ಮುಖ್ಯವಲ್ಲ, ಧಾರ್ಮಿಕ‌ ಸಂಸ್ಕಾರದಲ್ಲಿ ನಮ್ಮನ್ನ ನಾವು ಅಳವಡಿಸಿಕೊಳ್ಳುವದು ಈಗಿನ ಜಯಮಾನದಲ್ಲಿ ಅತ್ಯವಶ್ಯಕವಾಗಿದೆ ಎಂದು ಮುರಗೋಡ ದುರದುಂಡೇಶ್ವರ ಮಠದ ಪೀಠಾಧಿಪತಿ ಪೂಜ್ಯ ನೀಲಕಂಠ ಸ್ವಾಮೀಜಿ ಹೇಳಿದರು.
ಸಮೀಪದ ಕಾರಿಮನಿ ಗ್ರಾಮದಲ್ಲಿರುವ ಮಠದ ಪಂಚವಟಿಯಲ್ಲಿರುವ ಗೋಶಾಲೆಯ 14 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಮಕರ ಸಂಕ್ರಮಣದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, 25ಕ್ಕೂ ಹೆಚ್ಚು ಮಠಾಧೀಶರಿಗೆ ಪಟ್ಟಾಧಿಕಾರ ದಿಕ್ಷೇ ನೀಡಿ ಸಮಾಜದಲ್ಲಿ ಧಾರ್ಮಿಕ ವಿಚಾರ ಬಿತ್ತರಿಸಿ ಭಕ್ತರನ್ನ ಜಾಗೃತಿಗೊಳಿಸಲು ಕಾರ್ಯಪ್ರವರ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸನ್ಯಾಂಸತ್ವಕ್ಕೆ ಬರುವ ನಿಷ್ಠುರವಾದಿಗಳ ಸಂಖ್ಯೆ ಕಡಿಮೆಯಾಗಲಿದ್ದು ಬಹಳ ಕಳವಳಕಾರಿ ಸಂಗತಿಯಾಗಿದೆ. ನೂರಾರು ಭಕ್ತರು ನೀಡಿರುವ ಗೋವುಗಳು ಹಾಗೂ ಕಾಣಿಕೆಯ ಹಣವನ್ನೆಲ್ಲ ಗೋಶಾಲೆಗೆ ಸದ್ಬಳಿಕೆ ಮಾಡಲಾಗಿದೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ ಯಾವುದು ನಮ್ಮ ಜೋತೆ ಬರುವದಿಲ್ಲ ನಾವು ಮಾಡಿದ ಸತ್ಕಾರ್ಯಮಾತ್ರ ನಾವು ಹೊದಮೇಲೆಯು ಜೀವಂತವಾಗಿರುತ್ತವೆ ಆ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಕೇವಲ ಹಣ ಗಳಿಸುವದೆ ಜೀವನವೆಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ದೇಶಿಯ ಗೋವುಗಳ ರಕ್ಷಣೆಯಿಂದ ದೇಶದ ಸಂಪತ್ತು ಹೆಚ್ಚಿಸುತ್ತದೆ ಏಕೆಂದರೆ ಎಲ್ಲ ಆಯುವೇದ ಗುಣಗಳನ್ನು ಹೊಂದಿರುವ ದೇಶಿಯ ಗೋಗಳು ಅವುಗಳಿಂದ ಬರುವ ಆಮ್ಲಜನಕ, ಮೂತ್ರದಲ್ಲಿರುವ ಕ್ಯಾನ್ಸರ್ ರೋಗ ನಿವಾರಕ ಅಂಶಗಳು ಇದ್ದು ಸಗಣಿಯಲ್ಲಿಯು ಉಪಯುಕ್ತ ಅಂಶಗಳಿದ್ದು ಇಂತಹ ಸಂತತಿ ಉಳಿಸಿ ಬೆಳೆಸಲು ಪಣತೊಟ್ಟಿರುವ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದ್ದು ಶ್ರೀಗಳ ಅಮೃತ ಮಹೋತ್ಸವ ಅಂಗವಾಗಿ ನಾಡಿನಲ್ಲಿ ಧರ್ಮಜಾಗೃತಿ, ಸೈನಿಕರ ಕೃಷಿಕರ ಸತ್ಕಾರ ಸಮಾರಂಭ ಹಾಗೂ ಬಸವ ಪುರಾಣ ಕಾರ್ಯಕ್ರಮ ಹಮ್ಮಿಕೊಂಡಿರುವದು ಈ ನಾಡಿಗೆ ಸಂದ ಗೌರವ ಎಂದರು.
ಕಾರ್ಯಕ್ರಮದಲ್ಲಿ ಭಗಳಾಂಬಿಕಾ ಅರಾಧಕ ವೀರಯ್ಯ ಹೀರೆಮಠ, ಭೀಮಗೌಡ ಪಾಟೀಲ, ಕಾಶಿನಾಥ ಬೀರಾದಾರ ಪಾಟೀಲ, ಗುರುದೇವ ಪಾಟೀಲ, ಶೋಭಕ್ಕ ಛಬ್ಬಿ, ನಿರ್ಮಲಾ ಮಲ್ಲನಗೌಡ ಗೌಡತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುರಗೋಡ ಮಹಾಮನೆ ಹಾಗೂ ಅಕ್ಕನ ಬಳಗದಿಂದ ಮಂತ್ರಘೋಷ ಹಾಗೂ ಗೋಪೂಜೆ ನೆಡೆಯಿತು. ಕಾರ್ಯಕ್ರಮದ ನಂತರ ಮಹಾಪ್ರಸಾದ ನೇರವೆರಿತು.
ಕಾರ್ಯಕ್ರಮದಲ್ಲಿ ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ವಿಜಯ ಸಾಣಿಕೊಪ್ಪ, ಶಿವನಗೌಡ ಪಾಟೀಲ, ರಾಮಣ್ಣ ಸುಂಬಳಿ, ಮಹಾಂತೇಶ ಮತ್ತಿಕೊಪ್ಪ, ಉಮೇಶ ಹಿರೇಮಠ, ವಿಜಯ ಚರಲಿಂಗಮಠ
ವೇದಿಕೆ ಮೇಲೆ ಇದ್ದರು.
ಸಂತೋಷ ಹಿರೆಮಠ ಸ್ವಾಗತಿಸಿ ನಿರುಪಿಸಿದರು. ಸಚಿನ ಹೀರೆಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಸಂತೋಷ ಕೋಠಾರಿ, ಸುದರ್ಶನ ಉಪಾಧ್ಯಾಯ, ಅಶೋಕ ಪಟೇಲ, ಎಮ್.ಎಸ್.ನಂದಿಮಠ, ಸೋಗಲ, ಕಾರಿಮನಿ, ಹೊಸೂರ, ಮುರಗೋಡ ಹಾಗೂ ಮುಂತಾದ ಗ್ರಾಮದ ಭಕ್ತರು ಇದ್ದರು ಇದೆ ಸಂದರ್ಭದಲ್ಲಿ ದಾನಿಗಳನ್ನು ಸತ್ಕರಿಸಲಾಯಿತು.