ಜನಪ್ರತಿನಿಧಿಗಳ ನಿರ್ಲಕ್ಷ್ಯ ಸೇವೆ ನಿಲ್ಲಿಸಿದ 12 ವಿಮಾನಗಳು : ರಾಜಕುಮಾರ ಟೋಪಣ್ಣವರ ಕಿಡಿ

ಬೆಳಗಾವಿ: ಒಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಚಾರ ಸಂಪರ್ಕ ಅತ್ಯವಶ್ಯಕವಾಗಿದೆ. ಆದರೆ ಬೆಳಗಾವಿಯಿಂದ ಬರೋಬರಿ 12 ವಿಮಾನಗಳು ತಮ್ಮ ಸೇವೆ ನಿಲ್ಲಿಸಿದ್ದರೂ ಅದನ್ನು ಪುನರ್ ಪ್ರಾರಂಭಿಸುವ ಗೋಜಿಗೆ ಜಿಲ್ಲೆಯ ಜನಪ್ರತಿನಿಧಿಗಳು ಮಾಡದೆ ಇರುವುದು ದುರ್ದೈವದ ಸಂಗತಿ ಎಂದು ಆಮ್ ಆದ್ಮಿ ಮುಖಂಡ ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.
ರೈಲು ಸಂಚಾರ, ಸಾರಿಗೆ ಸಂಚಾರ, ವಿಮಾನ ಸಂಚಾರ ಸಂಪರ್ಕ ಸುಸಜ್ಜಿತವಾಗಿದ್ದರೇ, ಜಿಲ್ಲೆಯ ಶಿಕ್ಷಣ, ವ್ಯಾಪಾರ, ಉದ್ಯಮ, ಪ್ರವಾಸೋದ್ಯಮ, ವೈದ್ಯಕೀಯ ಸೇರಿದಂತೆ ಇನ್ನಿತರರ ಸೌಲಭ್ಯಗಳು ಬೆಳೆಯುವಲ್ಲಿ ಅನಕೂಲವಾಗುತ್ತದೆ. ಇವುಗಳ ಪೈಕಿ ಬೆಳಗಾವಿಯಿಂದ ಸುಮಾರು 12 ವಿಮಾನ ಸೇವೆಗಳು ಬಂದಾಗಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುತ್ತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಮಾರ್ಗ ಹಾಗೂ ಬಸ್‌ಗಳು ಕಡಿಮೆಯಾಗಿವೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರೆ, ನೆರೆಯ ಜಿಲ್ಲೆಯವರು ಬೆಳಗಾವಿಗೆ ಬರಬೇಕಾಗಿದ್ದ ಸಾರಿಗೆ ಸಂಸ್ಥೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ತೆಗೆದುಕೊಂಡು ಹೊರಟ್ಟಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಚುನಾವಣೆಯ ಸಿದ್ಧತೆಯಲ್ಲಿ ತೋಡಗಿಕೊಂಡಿರುವುದು ಅಭಿವೃದ್ಧಿಯ ನಿರ್ಲಕ್ಷಯಕ್ಕೆ ಕಾರಣವಾಗಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಸಂಚರಿಸಿದ ವಿಮಾನಗಳು ಎರಡ್ಮೂರು ಬಾರಿ ಲ್ಯಾಂಡ್ ಆಗಿದೆ. ದಕ್ಷಿಣ ಮತ್ತು ಉತ್ತರ ಭಾರತದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ನಡೆಯುತ್ತಿತ್ತು. ಬೆಳಗಾವಿ ದೆಹಲಿಗೆ ನಿತ್ಯ ವಿಮಾನ ಸೇವೆಯೂ ಆರಂಭವಾಗಿತ್ತು. ನಿತ್ಯ ಬೆಳಗಾವಿಯಿಂದ ನೂರಾರು ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇದರ ನಡುವೆ ವಿಮಾನ ಸೇವೆ ಬಂದಾಗಿದ್ದರೂ ಸರಕಾರವಾಗಲಿ, ಜಿಲ್ಲೆಯ ಜನಪ್ರತಿನಿಧಿಗಳಾಗಲಿ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿ ಎಂದು ಟೋಪಣ್ಣವರ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ./////