ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರ ಕೊಲೆ

ಕೊಡಗು: ಯುವತಿಯೊಬ್ಬಳನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಬುಟ್ಟಿಯಂಡ ಆರತಿ(24) ಎಂಬ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಅದೇ ಊರಿನ ತಿಮ್ಮಯ್ಯ ಎಂಬಾತನೆ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೃತ್ಯ ನಡೆದ ಸ್ಥಳದಿಂದ ಕೆಲವೇ ದೂರದಲ್ಲಿರುವ ಕೆರೆಯ ಬಳಿ ಆತನ ಚಪ್ಪಲಿ, ಹೆಲ್ಮೆಟ್ ಪತ್ತೆಯಾಗಿದ್ದು ತಿಮ್ಮಯ್ಯನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇನ್ನು ಈ ಕುರಿತು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೆರೆಯ ಬಳಿ ಪತ್ತೆಯಾಗಿರುವ ತಿಮ್ಮಯ್ಯನ ಚಪ್ಪಲಿ, ಮದ್ಯದ ಬಾಟಲಿ ವಿಷದ ಡಬ್ಬಿಯನ್ನ ನೋಡಿದರೆ ಆರೋಪಿ ತಿಮ್ಮಯ್ಯ ವಿಷ ಕುಡಿದು ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಡಿಜೇರಿ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು, ಕೆರೆಯಲ್ಲಿ ತಿಮ್ಮಯ್ಯನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.////