Belagavi News In Kannada | News Belgaum

ವಿಶ್ವಕರ್ಮ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಶ್ರಮ

ಬೆಂಗಳೂರ: ಬೀದರ್ ಜಿಲ್ಲೆ ವಿಶ್ವಕರ್ಮ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಶ್ರಮವಹಿಸಿದ ವಿಶ್ವಕರ್ಮ ಸಮಾಜದ ಮಾಜಿ ನಿಗಮ ಮಂಡಳಿ ಅಧ್ಯಕ್ಷ ಬಾಬು ಪತ್ತಾರ ಇವರ ಮುಂದಾಳತ್ವದ ಸತತಪ್ರಯತ್ನದಿಂದ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಹಳ ದಿನಗಳ ಕಾಲ ನೆನೆಗುದಿಗೆ ಬಿದ್ದ ಅಭಿವ್ರದ್ದಿ ಕಾಮಗಾರಿ ಹಾಗೂ ಕಟ್ಟಡ ಸಭಾಭವನ ಹೀಗೆ ಹಲವಾರು ಕಾಮಗಾರಿಗೆ ಸರ್ಕಾರ ಗ್ರೀನ ಸಿಗ್ನಲ್ ಕೊಟ್ಟಿದೆ. ಇವರ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಉತ್ತರ ಕರ್ನಾಟಕ ವಿಶ್ವಕರ್ಮ ಅಧ್ಯಕ್ಷರಾದ ಉಮೇಶ ಪತ್ತಾರ ಹಾಗೂ ರಾಘವೇಂದ್ರ ಜಿ ಪತ್ತಾರ (ವೈದ್ಯರು) ಹಾಗೂ ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜದ ಕಮೀಟಿ ಹಾಗೂ ಮುಖಂಡರು ಸನ್ಮಾನ್ಯ ಶ್ರೀ ಯಡಿಯುರಪ್ಪಜಿ ಹಾಗೂ ವಿಜಯೇಂದ್ರ ಅವರಿಗೆ ಹಾಗೂ ನಿಗಮ ಮಂಡಳಿ ಬಾಬು ಪತ್ತಾರ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನೂ ವಿಶ್ವಕರ್ಮ ಸಮಾಜ ಅಭಿವ್ರದ್ದಿ ಪಥದತ್ತ ಸಾಗಲು ಪದಾಧಿಕಾರಿಗಳು ಹಾಗೂ ಬಿದರ್ ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಬಾಬು ಪತ್ತಾರ ಇವರ ಶ್ರಮ ಹೇಳತಿರಲಾರದಷ್ಟಿದೆ.

ಎಂದು ವಿಶ್ವಕರ್ಮ ಸಮಾಜದ ಭಾಂದವರು ಹಾಗೂ ಮುಖಂಡರು ಬಾಬು ಪತ್ತಾರ ಇವರಿಗೆ ಅಭಿನಂದನೆ ತಿಳಿಸಿದ್ದಾರೆ.ವಿಷಯ ಬೀದರ್ ಜಿಲ್ಲೆಯ ವಿಶ್ವಕರ್ಮ ಧರ್ಮವರ್ಧಿನಿ ಸಂಘದ ವತಿಯಿಂದ ಸಮುದಾಯ ಭವನ (ಶಿಲ್ಪಕಲಾ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು.

ಬೀದರ್ ಜಿಲ್ಲೆಯ ವಿಶ್ವಕರ್ಮ ಧರ್ಮವರ್ಧಿನಿ ಸಂಘದ ವತಿಯಿಂದ ಸಮುದಾಯ ಭವನ (ಶಿಲ್ಪಕಲಾ ಭವನ) ಕಟ್ಟಡನಿರ್ಮಾಣಕ್ಕೆ ರೂ.2 ಕೊಟಿ ರೂಪಾಯಿಗಳು ಬಿಡುಗಡೆ ಮಾಡಲಾಗಿದೆ.ಎಂದು ತಿಳಿಸಿದ್ದಾರೆ. ಈ ಕೆಳಕಂಡ ಮಂಜೂರಾತಿ ನೀಡಿ ಆದೇಶಿಸಿದೆ.