ಅವರಗೋಳ ಗ್ರಾಮದಲ್ಲಿ ಸರಾಯಿ ಮುಕ್ತ ಗ್ರಾಮ ಸಭೆ

ಅವರಗೋಳ: ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಸರಾಯಿ ಮುಕ್ತ ಗ್ರಾಮ ಮಾಡಲು ಗ್ರಾಮಸ್ಥರಿಂದ ಗ್ರಾಮ ಸಭೆ.ಅಕ್ರಮ ಮಧ್ಯ ಮಾರಾಟ ತಡೆಯುವ ಕುರಿತು.
ಮೇಲ್ಕಾಣಿಸಿದ ವಿಷಯದಡಿಯಲ್ಲಿ ಮಾನ್ಯ ತಹಸೀಲ್ದಾರರ ಸಾಹೇಬ್ರಿಗೆ ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೇನೆಂದರೆ ಅವರಗೋಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತಿದ್ದು ಅಕ್ರಮ ಮಧ್ಯ ಮಾರಾಟ ನಿಷೇಧಿಸಬೇಕು ಕುಡಕ ಗಂಡಸರಿಂದಾಗಿ ಮಹಿಳೆಯರು ಮತ್ತು ಕುಟುಂಬಗಳು ಸಾಕಷ್ಟು ಸಂಕಷ್ಟಗಳನ್ನು ಎದರಿಸುತ್ತಿದ್ದಾರೆ. ಸುಲಭದಲ್ಲಿ ಮಧ್ಯ ಕೈಗೆ ಸಿಗುವದರಿಂದ ಮಕ್ಕಳು ಕೂಡಾ ಮಧ್ಯಸೇವನೆ, ಕೆಟ್ಟ ಚಟಕ್ಕೆ ತುತ್ತಾಗುತ್ತಿದ್ದಾರೆ.
ಹೀಗಾಗಿ ಸಂಪೂರ್ಣ ಅವರಗೋಳ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೆಕೆಂದು ಗ್ರಾಮಸ್ಥರು ಹಾಗೂ ಎಲ್ಲ ಗ್ರಾಮ ಪಂಚಾಯತ ಸದಸ್ಯರು ಮತ್ತು ಸಾಮಾಜಿಕ ನ್ಯಾಯ ಸಮೀತಿಯ ಸದಸ್ಯರು ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ. ಆದ ಕಾರಣ ದಿನಾಂಕ : 18-01-2023 ರಂದು ಬುಧವಾರ ಬೆಳಿಗ್ಗೆ 11-00 ಗಂಟೆಗೆ ತಹಶಿಲ್ದಾರ ಸಾಹೇಬರ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರ ಗ್ರಾಮಸಭೆಯನ್ನು ಕರೆಯಲಾಗಿದ್ದು ತಾವುಗಳು ಈ ಸಭೆಗೆ ಹಾಜರಿರಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಸ್ಥಳ : ಅವರಗೋಳ (ಲಕ್ಷ್ಮೀದೇವಿ ದೇವಸ್ಥಾನ) 505 16-01-2023
ತಮ್ಮ ವಿಶ್ವಾಸಿಕರು
ಮಾರುತಿ ದೇವುಗೋಳ
ಸಾಮಾಜಿಕ ನ್ಯಾಯ ಸಮೀತಿ ಅಧ್ಯಕ್ಷರು
ಪ್ರತಿಯನ್ನು
1) ಮಾನ್ಯ ಸಿ.ಪಿ.ಐ. ಸಾಹೇಬರು ಹುಕ್ಕೇರಿ, ಇವರಿಗೆ 2) ಮಾನ್ಯ ಅಬಕಾರಿ ಇಲಾಖೆ ಸಂಕೇಶ್ವರ ಇವರಿಗೆ
16/01/2023 20:24