Belagavi News In Kannada | News Belgaum

ಹೆತ್ತ ತಾಯಿಯನ್ನ ನಂಬಿಸಿ ಮೋಸ ಮಾಡಿ ಟ್ರ್ಯಾಕ್ಟರಗೆ ಸಹಿ ಬೇಕಾಗಿದೆ ಎಂದು ಅಜ್ಜಿಯ ಜಮೀನು ಬರೆಸಿಕೊಂಡ ನೀಚ ಮಕ್ಕಳು

ನಂದಿಕುರಳಿ:ಹೆತ್ತ ತಾಯಿಯನ್ನ ನಂಬಿಸಿ ಮೋಸ ಮಾಡಿ ಟ್ರ್ಯಾಕ್ಟರಗೆ ಸಹಿ ಬೇಕಾಗಿದೆ ಎಂದು ಅಜ್ಜಿಯ ಜಮೀನು ಬರೆಸಿಕೊಂಡ ನೀಚ ಮಕ್ಕಳು.

ರಜಿಸ್ಟರ್ ರದ್ದು ಮಾಡಲು ಚಿಕ್ಕೊಡಿ ಉಪವಿಭಾಗಾಧಿಕಾರಿಗಳ ಮೊರೆ ಹೊದ ಕಸ್ತೂರಿ ಅಜ್ಜಿ ಹೌದು ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ಕಸ್ತೂರಿ ಕೆಂಚಪ್ಪ ಉಪ್ಪಾರ ವಯಸ್ಸು (೬೯) ಮೂಲತಃ ನಂದಿಕುರಳಿ ಗ್ರಾಮದಲ್ಲಿ ಖಾಯಂ ರಹವಾಸಿಯಾಗಿದ್ದು.

ಹಿರಿಯ ನಾಗರಿಕರಿದ್ದು ಪ್ರಕರಣದಲ್ಲಿ ಮೂಲತಃ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಪವಾಡಿ, ಉಪ್ಪಾರ ಇವರ ಮಗಳಾದ ನನ್ನನು 55 ವರ್ಷಗಳ ಹಿಂದೆ ಗೋಕಾಕ ತಾಲೂಕಿನ ದುರದುಂಡಿಯ ಕೆಂಚಪ್ಪ ಉಪ್ಪಾರ ಇವನಿಗೆ ವಿವಾಹ ಮಾಡಿ ಕೊಡಲಾಗಿತ್ತು.

ವಿವಾಹದ ಫಲವಾಗಿ ನಮಗೆ 1) ಪವಾಡಿ ಕೆಂಚಪ್ಪ, ಉಪ್ಪಾರ ಮತ್ತು 2) ಬಸವರಾಜ ಕೆಂಚಪ್ಪಾ ಉಪ್ಪಾರ ಮತ್ತು 3) ಹೆಣ್ಣು ಮಗಳು ಶೋಭಾ ಭೀಮಪ್ಪಾ ಉಪ್ಪಾದ ಕಂಕಣವಾಡಿ ಈ ರೀತಿಯಾಗಿ ನನ್ನ ಸ್ವಂತ ಮಕ್ಕಳು ಇರುತ್ತಾರೆ. ಎಲ್ಲರೂ ಸಾಕಷ್ಟು ಅನೂಕೂಲವಂತರು ಉಳ್ಳವರಾಗಿದ್ದಾರೆ. ಎಲ್ಲರೂ ಮತ್ತು ಕೃಷಿಯ ಮೂಲಕ ಆರ್ಥಿಕವಾಗಿ ಸದೃಢರಾಗಿದ್ದಾರೆ.

ಸಾಕಷ್ಟು ಆದಾಯ
ನನ್ನ ಪತಿಯ ಊರು ದುರದುಂಡಿಯಲ್ಲಿ ಯಾವುದೇ ರೀತಿಯ ಉಪಜೀವನಕ್ಕೆ ಅನೂಕೂಲ ಇಲ್ಲದ ಕಾರಣ ನಾನು ನನ್ನ ತವರುಮನೆ ನಂದಿಕುರಳಿ ಗ್ರಾಮಕ್ಕೆ ನನ್ನ ಗಂಡ ಮಕ್ಕಳು ಸಮೇತ ಮದುವೆಯಾದ ಲಾಗಾಯಿತಿನಿಂದ ಪಂಚಲಿಂಗೇಶ್ವರ ನಗರದಲ್ಲಿ ಗಂಡ ಮಕ್ಕಳು ಸಮೇತ ವಾಸಿಸುತ್ತಿದ್ದೆ. ಹೀಗಿರುವಾಗ ನಾನು ನನ್ನ ಸ್ವಂತ ಅಣ್ಣ ಕಲ್ಲಪ್ಪ ಪವಾಡಿ ಉಪ್ಪಾರ ಇವರಿಂದ ಹಳೆ ರಿ.ಸ.ನಂ 349/2/2, 17 ಎ 28 ಗುಂ ಇದರ ಪೈಕಿ 10 ಎ 26 ಗುಂ ಇದರ ಪೈಕಿ ಮಧ್ಯ ಭಾಗದ ಜಮೀನು 2 ಎ ನಾನು ಖರೀದಿ ತೆಗೆದುಕೊಂಡಿದ್ದು ಇಲ್ಲಿಯ ವರೆಗೆ ನಾನೇ ಕಬ್ಬಾ ವಹಿವಾಟಿಯಲ್ಲಿದ್ದು ಸುಮಾರು ಸದರೀ ಆಸ್ತಿಯು ನಂದಿಕುರಳಿ ಗ್ರಾಮದ ಹೊಸ ಸರ್ವೆ ನಂಬರ 264/1ಕ 2 ಎ ಈ ಜಮೀನು 16/09/2021 ರಂದು ನನ್ನ ಸ್ವಂತ ಮಕ್ಕಳಾದ ಪವಾಡಿ ಕೆಂಚಪ್ಪ ಉಪ್ಪಾರ ಮತ್ತು ಬಸವರಾಜ ಕಂಚವ ಉಪಾರ. ಇವರು ರಾಯಬಾಗ ಸಬ್ ರಜಿಸ್ಟರ ಕಛೇರಿಯಲ್ಲಿ ದಸ್ತ ನಂಬರ 39/12: ಪಾನ್ 18 ದಿನಾಂಕ : 31/07/2021 ರಂದು ಮೊಸದಿಂದ ಮತ್ತು ಕುಟೀಲತೆಯಿಂದ ನನ್ನನ್ನು ಉಪನೊಂದಣಿ ಅಧಿಕಾರಿಗೆ ಕರೆಸಿಕೊಂಡು ನನ್ನ ಜಮೀನು ಕಬಳಿಸುವ ಉದ್ದೇಶದಿಂದ ಮೋಸದಿಂದ ವಂಚನೆಯ ಮೂಲಕ ಸದರೀ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮತ್ತು ನನ್ನನ್ನು ಆಸ್ತಿಯಿಂದ ವಂಚಿತಳಾಗಿ ಮಾಡುವ ಸಲುವಾಗಿ ಮತ್ತು ನನ್ನ ಜಮೀನನ್ನು ಖಬ್ಬಾ ವಹಿವಾಟಿ ಕಸಿದುಕೊಂಡಿದ್ದಾರೆ.

ಮತ್ತು ಸರಕಾರಿ ಮನೆ ಮಂಜೂರು ಮಾಡಿಸಿಕೊಳ್ಳುತ್ತೇವೆ ಎಂದು ನೊಂದಣಿ ಅಧಿಕಾರಿಗಳ ಕಛೇರಿಗೆ ಕರೆದುಕೊಂಡು ಹೊಗಿ ಸುಳ್ಳು ಹೇಳಿ ದಾನಪತ್ರ ಮಾಡಿಸಿಕೊಂಡಿರುತ್ತಾರೆ, ವಯಸ್ಸಾದರೂ ಸಹ ನಾನು ದೈಹಿಕವಾಗಿ ಕಿವಿಕಣ್ಣು, ಸರಿಯಾಗಿ ಕೇಳಿಸುತ್ತವೆ.

ಕಾರಣ ನೊಂದಣಿ ಅಧಿಕಾರಿಗಳಾಗಲಿ ಫಲಾನುಭವಿಗಳಾಗಲಿ ಮತ್ತು ನೊಂದಣಿ ಮಾಡಿಸಿಕೊಳ್ಳುವ ಅನಕ್ಷರಸ್ತಳಾದ ನನಗೆ ದಾನಪತ್ರ ಮಾಡಿಕೊಳ್ಳುತ್ತವೆಂದು ಯಾರೂ ಹೇಳಿರಲಿಲ್ಲ. ಕೇವಲ ದಾನಪತ್ರದಲ್ಲಿ ತಿಳಿಸಿದ ಪಂಚರಾಗಲಿ ಸಾಕ್ಷೀದಾರಾರಗಲಿ ಮನೆ ಮಂಜೂರಾತಿಗಾಗಿ ಸಾಕಾಗು ವಷ್ಟು ಜಾಗವನ್ನು ನೊಂದಣಿ ಮಾಡಿಕೊಳ್ಳುತ್ತೇವೆಂದು ಸುಳ್ಳು ಹೇಳಿ ನನ್ನಿಂದ ಕೊಟ್ಟ ದಾನಪತ್ರವನ್ನು ಮಾಡಿಸಿಕೊಂಡು ನನ್ನನ್ನು ಮನೆಯಿಂದ ಹೊರಹಾಕಿ ಮತ್ತು ಆಸ್ತಿಯಿಂದ ವಂಚಿತಳನ್ನಾಗಿಸಿ ಹಿರಿಯ ನಾಗರೀಕಳಾದ ನನಗೆ ಈ ಇ ವಯಸ್ಸಿನಲ್ಲಿ ನೆಲೆಸಲು ಸೂರು ಹೊತ್ತಿಗೆ ಬಿಸಿಯೂಟ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಹಣ ಅಶ್ಯಕತೆಯಿದ್ದು ಮೊದಲನೆ ಮಗ ಪ್ರವಾದಿ ಇತನು ಸಾಕಷ್ಟು ಆರ್ಥಿಕವಾಗಿ ಟಾಕ್ಟರ ದ್ವೀಚಕ ವಾಹನ ಎಲ್ಲವನ್ನು ಹೊಂದಿದರೂ ನನ್ನ ಉಪಜೀವನಕ್ಕೆ ಯಾವುದೇ ರೀತಿಯ ಹಣಕಾಸಿನ ನೇರವು ನೀಡುತ್ತಿಲ್ಲ ಮತ್ತೊಬ್ಬ ಮಗ ಬಸವರಾಜ ಈತನು ಮಧ್ಯ ವ್ಯಸನಿಯಾಗಿ ಸಾರಾಯಿ ಕುಡಿಯುತ್ತಾ ಇವನು ಸಹ ನನಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ ಮತ್ತೊಬ್ಬ ಮಗಳು ಇಲ್ಲಿಯೇ ವಾಸಿಸುತ್ತಿದ್ದು, ಅವಳೂ ಸಹ ಆರ್ಥಿಕವಾಗಿ ಸಬಲಳಿಲ್ಲದೆ ಕಾರಣ ನನಗೂ ಸಹ ಅವಳಿಂದ ಸಹಾಯ ನೀರಿಕ್ಷಿಸುವ ಸಾಧ್ಯತೆ ಇಲ್ಲ ಯಾವಾಗಲಾದರೂ ಒಮ್ಮೆ ಒಂದು ಹೊತ್ತಿನ ಊಟ ಮಗಳು ಎಂಬ ಮಮಕಾರದಿಂದ ನೀಡುತ್ತಾಳೆ ಅವಳೂ ಸಹ ಕೂಲಿ ಮಾಡುತ್ತಾಳೆ. ಕಾರಣ ಅವಳೂ ಸಹ ಆರ್ಥಿಕವಾಗಿ ಅಸಹಾಯಕಳಿದ್ದಾಳೆ ಮತ್ತು ನಾನು ನನ್ನ ಮಗಳ ಗಂಡನ ಸಹಾಯದಿಂದ ಸದರಿ ಜಮೀನಿನಲ್ಲಿ ಸಾಲ ಸೂಲ ಮಾಡಿ ಅರಿಶಿಣ ಬೆಳೆ ಬೆಳೆಯುತ್ತಿದ್ದು, ಅದನ್ನು ಸಹ ದಾದಾಗಿರಿ ಗುಂಡಾಗಿರಿ ಮೂಲಕ ಬಂದ ಬೆಳೆಯನ್ನು ಕಬಳಿಸುವ ಹವಣಕೆಯಲ್ಲಿದ್ದಾರೆ.

ದಿನಾಲೂ ನನ್ನನ್ನು ಜಮೀನಿಂದ ಹೊರಹಾಕುವುದಗಾಗಿ ಬಂದ ಬೆಳೆಯನ್ನು ಕಸಿದುಕೊಳ್ಳುವುದಾಗಿ ಹೆದರಿಸುತ್ತಿದ್ದಾರೆ. ಇದರಿಂದ ನಾನು ಕಂಗಾಲಾಗಿ ರಾಯಭಾಗ ಪ್ರಧಾನ ಸಿವಿಲ್ ನ್ಯಾಯಾಲಯಲ್ಲಿ 0.5 219/2022 ರ ಮೂಲಕ ಸದರೀ ದಾನಪತ್ರವನ್ನು ಪ್ರಶ್ನಿಸಿ ದಾವೆ ದಾಖಲಿಸಿದರೂ ಸಹ ಈ ಇಳಿಗಾಲದಲ್ಲಿ ನ್ಯಾಯಾಲಯದ ವಿಳಂಬ ನೀತಿಯಿಂದ ಮತ್ತು ನಾಗರೀಕ ನ್ಯಾಯಾಲಯವ ವಿಧಾನದಿಂದ ನ್ಯಾಯದಾನ ಸಿಗುವ ಸಾಧ್ಯತೆಗಳೂ ತುಂಬಾ ಕಡಿಮೆಯಾಗಿದೆ.

ಇದಲ್ಲದೇ ಮಗಳೂ ಸಹ ಶ್ರೀಮತಿ ಭೀಮಪ್ಪಾ ಉಪ್ಪಾರ ಇವಳು ನನ್ನ ಮೇಲೆ ದಾವೆ ಹಾಕಿ ಪ್ರಧಾನ ಸಿವಿಲ್ ನ್ಯಾಯಾಲಯ ಇಲ್ಲಿ 0.5 1182/22 ಇದರ ಮೂಲಕ ಪಾಲು ಬೇಡಿ ಮತ್ತು ಸೆಪೆರೇಟ ವಹಿವಾಟ ಕಲ್ಪಾ ಬೆಡಿ ನನ್ನನ್ನು ನ್ಯಾಯಾಲಯಕ್ಕೆ ಎಡತಾಕುವ ಹಾಗೆ ಮಾಡಿದ್ದಾಳೆ.

ಕಾರಣ ಸದರೀಯವರು ಮಾಡಿಕೊಂಡು ದಾನಪತ್ರ ರದ್ದು ಮತ್ತು ನನ್ನ ಮೇಲೆ ಹೊಡಿರುವ ದಾವೆಯನ್ನು ವಜಾಮಾಡಲು ಸೂಕ್ತ ಪತ್ರವನ್ನು ಕಳುಹಿಸಬೇಕು ಮತ್ತು ಸಾಲ ಸೂಲಮಾಡಿ ನಾನು ಬೆಳೆದ ಅರಿಶಿಣ ಬೆಳೆಯನ್ನು ರಾಶಿ ಮಾಡಿಕೊಳ್ಳಲು ಕಾಯ್ದೆಯ ಮೂಲಕ ವ್ಯವಸ್ಥೆ ಮಾಡಬೇಕು ಎಂದು ವಿನಂತಿ. ಪ್ರಾರ್ಥನೆಯ ಮೂಲಕ ನಾನು ಬೇಡುವ ಪರಿಹಾರ
1) ಪ್ರಕರಣಕ್ಕೆ ಸಂಬಂಧಿಸಿದ ರಾಯಬಾಗ ತಾಲೂಕ ನಂದಿಕುರಳಿ ಗ್ರಾಮದ ರಿ.ಸ.ನಂ 264/1 ಇದರ ಎಮ್ ಆರ್ ಸಂಖ್ಯೆ ಎಮ್ ಆರ್ ಎಚ್ 41 ಇದನ್ನು ರದ್ದುಪಡಿಸಿ ಜಮೀನು ನನ್ನ ಹೆಸರಿಗೆ ಪುನಃ ಪಹಣಿಯಲ್ಲಿ ಹೆಸರೂ ದಾಖಲಿಸಿಕೊಡಬೇಕು. 2) ನಾನು ಬೆಳೆದ ಅರಿಶಿಣ ಫಸಲನ್ನು ಕಟಾವು ಮಾಡಿಸಿ ಹೀಗೆ ಹಲವು ಬೇಡಿಕೆಗಳನ್ನ ಅಜ್ಜಿ ಮಾದ್ಯಮದ ಮುಂದೆ ಅಳಲು ತೊಡಿಕೊಂಡಿದ್ದಾಳೆ.

ಇನ್ನೂ ಅಜ್ಜಿಯ ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿಗಳು ಅಜ್ಜಿಗೆ ನಿನ್ನ ಪಹಣಿ ಮೊದಲಿನ ಹಾಗೇ ಸರಿ ಪಡಿಸುತ್ತೆವೆಂದು ಭರವಸೆ ನೀಡಿದ್ದಾರೆ.