Belagavi News In Kannada | News Belgaum

ಕಾಂಗ್ರೆಸ್‌ ಪಕ್ಷ ಕೊಟ್ಟ ಮಾತು ತಪ್ಪಲ್ಲ, ಬೇಕಾದರೆ ಅಭಿವೃದ್ಧಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು

ಹೊಸಪೇಟೆ: ಕಾಂಗ್ರೆಸ್‌ ಪಕ್ಷ ಕೊಟ್ಟ ಮಾತು ತಪ್ಪಲ್ಲ, ಬೇಕಾದರೆ ಅಭಿವೃದ್ಧಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಸವಾಲು ಹಾಕಿದರು.

ಮಂಗಳವಾರ ನಡೆದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಬಸ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾವತ್ತಿಗೂ ಕೊಟ್ಟ ಮಾತನ್ನು ತಪ್ಪುವ ಕೆಲಸ ಮಾಡಲ್ಲ. 2013 -18 ರಲ್ಲಿ ಕೊಟ್ಟ ಎಲ್ಲಾ ಭರವಸೆಯನ್ನು ಈಡೇರಿಸಿದ್ದೇವೆ. ಬೇಕಾದರೆ ದಾಖಲೆ ಪರಿಶೀಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ರಾಜ್ಯದ ಜನರ ಧ್ವನಿ ಆಲಿಸಲು ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಜನಾಭಿಪ್ರಾಯ, ಜನರ ಸಲಹೆ ಪಡೆಯಲು ಈ ಯಾತ್ರೆ ಮಾಡುತ್ತಿದ್ದೇವೆ. ಅಧಿಕಾರಕ್ಕೆ ಬಂದರೆ ಜನರ ಸಲಹೆಯಂತೆ ಸರ್ಕಾರ ನಡೆಸುತ್ತೇವೆ ಎಂದರು. ಬಿಜೆಪಿ 2018ರಲ್ಲಿ‌ ಕೊಟ್ಟ 600 ಭರವಸೆಯಲ್ಲಿ ಎಷ್ಟು ಭರವಸೆ ಈಡೇರಿಸಿದೆ ಬೊಮ್ಮಯಿ ಅವರೇ.?, ಸಾರ್ವಜನಿಕ ಚರ್ಚೆಗೆ ಬೊಮ್ಮಾಯಿಗೆ ಅಹ್ವಾನ ನೀಡಿದ್ದೇವೆ. ತಾಕತ್ತು, ಧಮ್ಮಿನ ಬಗ್ಗೆ ಮಾತನಾಡುವ ಬೊಮ್ಮಯಿ ಅವರೇ, ನಿಮಗೆ ಧಮ್ಮು ಇದ್ದರೆ ಅಭಿವೃದ್ಧಿ ಕುರಿತು ಚರ್ಚೆಗೆ ಬನ್ನಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.


ಸಿಎಂ ಬಸವರಾಜ ಬೊಮ್ಮಾಯಿ ಜನರ ಮುಂದೆ ಸುಳ್ಳು ಹೇಳುತ್ತಾರೆ. ಬಿಜೆಪಿ ಪಕ್ಷ ಸುಳ್ಳಿನ ಫ್ಯಾಕ್ಟರಿ, ಟಿಬಿ ಡ್ಯಾಂನಲ್ಲಿ 37 ಟಿಎಂಸಿ ಹೂಳು ತುಂಬಿದೆ. ಈ ವರ್ಷ ಆಂಧ್ರಪ್ರದೇಶಕ್ಕೆ 200 ಟಿಎಂಸಿ ನೀರು ಹರಿದು ಹೋಗಿದೆ. ಪರ್ಯಾಯ ಡ್ಯಾಂ ಕಟ್ಟುತ್ತೇವೆ ಅಂದಿದ್ರಿ ಏನಾಯ್ತು..? ನಾವು ಅಧಿಕಾಕ್ಕೆ ಬಂದರೆ ಸಮಾನಾಂತರ ಜಲಾಶಯ ಕಟ್ಟುತ್ತೇವೆ.‌ ನೀರಾವರಿಗೆ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಾ? ಉಳಿದದ್ದು ಯಾಕೆ ಖರ್ಚು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನೀರಾವರಿಗೆ ನಮ್ಮ ಅವಧಿಯಲ್ಲಿ ಐವತ್ತು ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ನೀರಾವರಿಗೆ ಎರಡು ಲಕ್ಷ ಕೋಟಿ ಹಣ ಖರ್ಚು ಮಾಡೋದಾಗಿ ಭರವಸೆ ನೀಡಿದ ಸಿದ್ದರಾಮಯ್ಯ ಅವರು, ಹೊಸಪೇಟೆ ಶುಗರ್ ಫ್ಯಾಕ್ಟರಿ, ಕಂಪ್ಲಿ ಶುಗರ್ ಫ್ಯಾಕ್ಟರಿ ಬಂದ್ ಮಾಡಿಸಿದರು. ಆನಂದ್ ಸಿಂಗ್ ಯಾಕೆ ಫ್ಯಾಕ್ಟರಿಯನ್ನು ತೆಗೆಸೋಕೆ ಆಗಲಿಲ್ಲ..?, ಫ್ಯಾಕ್ಟರಿ ಕ್ಲೋಸ್ ಮಾಡಿದ ಬಗ್ಗೆ ಬೊಮ್ಮಯಿ, ಆನಂದ ಸಿಂಗ್ ಬಗ್ಗೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯ. ಅಧಿಕಾರಕ್ಕೆ ಬಂದರೆ ಕಂಪ್ಲಿ‌ ಮತ್ತು ಹೊಸಪೇಟೆ ಶುಗರ್ ಫ್ಯಾಕ್ಟರಿ ಓಪನ್ ಮಾಡಿಸುತ್ತೇವೆ ಎಂದರು.

 

ಈ ವೇಳೆ  ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತನಾಡಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಬಿ ರಿಪೋರ್ಟ್ ಹಾಕಿದ ಎಲ್ಲಾ ಪ್ರಕರಣಗಳನ್ನು ಮರು ತನಿಖೆ ನಡೆಸುತ್ತೇವೆ. ರಾಜ್ಯ ಸರ್ಕಾರ ಪ್ರತಿಯೊಂದು ಪ್ರಕರಣಕ್ಕೂ ಬಿ ರಿಪೋರ್ಟ್ ಹಾಕುತ್ತಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿ ರಿಪೋರ್ಟ್ ಹಾಕಿದ ಎಲ್ಲಾ ಪ್ರಕರಣವನ್ನು ಮರು ತನಿಖೆ ನಡೆಸಲಾಗುತ್ತದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಪ್ರಜಾಧ್ವನಿ ಯಾತ್ರೆ ಜನರ ಧ್ವನಿಯಾಗಿ ಮುಂಬರುವ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆ ಆಗಬೇಕು. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಪರ ಇರುವ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿ ಸೇರಿದಂತೆ  ಜನರ ಕಷ್ಟಕ್ಕೆ ಸ್ಪಂದಿಸುವ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ರಾಜ್ಯದ ಜನತೆ ಸ್ವಚ್ಛ ಅಡಳಿತ ನೀಡುವ ಪಕ್ಷ ಅಧಿಕಾರಕ್ಕೆ ಬಂದರೆ ನಾಡಿನಲ್ಲಿ ಬದಲಾವಣೆ ಕಾಣಬಹುದು  ಎಂದು ಹೇಳಿದರು.


ಈ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾದ ಬಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ‌ಸೇರಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಪ್ರಮುಖ‌‌ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.