ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಗುದ್ದಲಿ ಪೂಜೆ

ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಗುದ್ದಲಿ ಪೂಜೆ ಮಾಡಿದ ಶಾಸಕ ಡಿ ಎಂ ಐಹೊಳೆ
ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ಜಲ ಜೀವನ ಮಷೀನ್ ಯೊಜನೆಯಡಿ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಹಾಗೂ ಹುಬ್ಬರವಾಡಿ ಗ್ರಾಮದ ಗಾಂಧಿ ನಗರ ತೋಟದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಶ್ರೀ ಡಿ ಎಂ ಐಹೊಳೆ ಗುದ್ದಲಿ ಪೂಜೆ ಮಾಡಿದರು
ನಂತರ ಮಾತನಾಡಿದ ಅವರು ನಮ್ಮ ನೆಚ್ಚಿನ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಕನಸಿನ ಯೋಜನೆ ಮನೆ ಮನೆಗೆ ಗಂಗೆ ಜಲಜೀವನ ಮಷೀನ್ ಯೊಜನೆಯಡಿ ಶುದ್ಧ ಕುಡಿಯುವ ನೀರು ಬಡವರು ಶ್ರೀಮಂತರು ಹಾಗೂ ಯಾವುದೇ ಜಾತಿ ಭೇದವಿಲ್ಲದ ಯೊಜನೆ ಇದಾಗಿದ್ದು ಎಲ್ಲರೂ ಇದರ ಉಪಯೋಗ ಪಡೆಯಬೇಕು ಎಂದು ತಿಳಿಸಿದರು.
ಮತ್ತು ರವಿವಾರ ದಿನಾಂಕ 22 ರಂದು ನನ್ನ ಹುಟ್ಟು ಹಬ್ಬ ಇದ್ದು ಶ್ರೀ ಆನಂದ ಗುರೂಜಿ ಬರುತ್ತಿದ್ದಾರೆ ನಿವೇಲ್ಲರೂ ಬಂದು ನನಗೆ ಆಶಿರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಡೊಳ್ಳಿ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು