Belagavi News In Kannada | News Belgaum

ಪ್ರಕಟಣೆ

ಅದಾಲತ್‍ನಲ್ಲಿ ಪಿಂಚಣಿದಾರರ ಅಹವಾಲುಗಳ ಚರ್ಚೆ

 

ಬೆಳಗಾವಿ, ಜ.17: ಬೆಳಗಾವಿ ಅಂಚೆ ವಿಭಾಗದ ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತ್‍ಅನ್ನು ಅಂಚೆ ಅಧಿಕ್ಷಕರ ಕಾರ್ಯಾಲಯ ಬೆಳಗಾವಿ ಇಲ್ಲಿ ಜನವರಿ 19, 2023 ರಂದು ಸಾಯಂಕಾಲ 4. ಗಂಟೆಗೆ ನಡೆಸಲಾಗುವುದು.
ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಹಾಗೂ ಕುಟುಂಬದ ಪಿಂಚಣಿದಾರರ ಅಹವಾಲುಗಳೆನಾದರು ಇದ್ದಲ್ಲಿ ಅವುಗಳನ್ನು ಅದಾಲತ್‍ನಲ್ಲಿ ಆಲಿಸಲಾಗುವುದು. ನಿವೃತ್ತಿ ಹೊಂದಿದ ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಅದಾಲತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶವಿರುದಿಲ್ಲ.
ಪಿಂಚಣಿ ಅದಾಲತ್‍ನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಅದಾಲತ್‍ನಲ್ಲಿ ಚರ್ಚಿಸುವ ಅಹವಾಲುಗಳಿದ್ದಲ್ಲಿ, ಅಂಚೆ ಅಛೇರಿ ಅಧೀಕ್ಷಕರ ಕಾರ್ಯಾಲಯ, ಪೊಸ್ಟ್‍ಮ್ಯಾನ್ ವೃತ್ತದ ಹತ್ತಿರ, ಪ್ರಧಾನ ಕಛೇರಿ ಕಟ್ಟಡ, ಬೆಳಗಾವಿ-590001 ಇವರಿಗೆ 17, ಜನವರಿ 2023 ರ ಒಳಗಾಗಿ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಕಳುಹಿಸಬೇಕೆಂದು ಅಂಚೆ ಅಧೀಕ್ಷಕರು, ಬೆಳಗಾವಿ ವಿಭಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಜಿಲ್ಲಾ ಕೌಶಲ್ಯಾಭಿವೃಧ್ಧಿ ಕಛೇರಿವತಿಯಿಂದ ಉದ್ಯೋಗ ಮೇಳ

 

ಬೆಳಗಾವಿ, ಜ.17 : ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಬೆಳಗಾವಿ ಇವರ ಸಹಯೋಗದೊಂದಿಗೆ ಜನವರಿ 19 2023 ರಂದು ಮುಂಜಾನೆ 10.30 ರಿಂದ ಸಾಯಂಕಾಲ 4.30 ರವರೆಗೆ ಮರಾಠಾ ಮಂಡಲ ಕಲಾ, ವಿಜ್ಞಾನ ಹಾಗೂ ಗೃಹ ವಿಜ್ಞಾನ ಮಹಾವಿದ್ಯಾಲಯ, ನೆಹರು ನಗರ, ಬೆಳಗಾವಿ ಇಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ., ಡಿಪ್ಲೋಮಾ, ಬಿ.ಎಡ್., ಡಿ.ಎಡ್, ತಾಂತ್ರಿಕ ಪದವಿ (ಬಿ.ಇ.), ಹಾಗೂ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ “ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು    https://skillconnect.kaushalkar.com/candidatereg     ಈ ವೆಬ್‍ಸೈಟ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೋಂದಣಿಯು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಸದರಿ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ  https://sites.google.com/view/dsdobelagavi   ವೈಬ್‍ಸೈಟಿಗೆ ಭೇಟಿ ನೀಡಬಹುದು ಎಂದು ಬೆಳಗಾವಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

(ಜ. 19) ಶ್ರೀ ಮಹಾಯೋಗಿ ವೇಮನ ಜಯಂತಿ ಮಹೋತ್ಸವ

 

ಬೆಳಗಾವಿ, ಜ.17 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿ ಮಹೋತ್ಸವ ಗುರುವಾರ(ಜ. 19) ಏರ್ಪಡಿಸಲಾಗಿದೆ.
ಅಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಸದಾಶಿವನಗರದ ರೆಡ್ಡಿ ಭವನದವರೆಗೆ ಮಹಾಯೋಗಿ ವೇಮನರ‌ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಸಂಜೆ 5.30 ಗಂಟೆಗೆ ರೆಡ್ಡಿ ಸಭಾಭವನದಲ್ಲಿ ನಡೆಯಲಿದೆ.

ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ. ಅ. ಜೊಲ್ಲೆ ಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ ಬೆನಿಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ .
ಸಾಹಿತಿಗಳಾದ ಬಸವರಾಜ ಜಗಜಂಪಿ ಅವರು ಉಪನ್ಯಾಸ ನೀಡಲಿದ್ದಾರೆ. ಮಹೇಶ ಅಬ್ಬಿಹಾಳ ಮತ್ತು ತಂಡದವರು ವಚನಸಂಗೀತ ಪ್ರಸ್ತುತಪಡಿಸಲಿದ್ದಾರೆ.

ಪ್ರಾದೇಶಿಕ ಆಯುಕ್ತರಾದ ಎಂ. ಜಿ. ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಾದ ಸಂಜೀವ ಎಂ. ಪಾಟೀಲ, ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕರಾದ ಏನ್. ಸತೀಶ್ ಕುಮಾರ್, ಜಿಲ್ಲೆಯ ಪೊಲೀಸ್ ಆಯುಕ್ತರಾದ ಎಂ ಬಿ. ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್ ವಿ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ತಿಳಿಸಿದ್ದಾರೆ.///

ಸಿರಿಧಾನ್ಯ ಮೇಳ: ಧಾನ್ಯದಿಂದ ರಂಗೋಲಿ ಹಾಗೂ ಸಿರಿಧಾನ್ಯದ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನ ಗೆಲ್ಲಿ

 

ಬೆಳಗಾವಿ, ಜ.17 : ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಜನೇವರಿ 26 & 27 ರಂದು ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಸಿರಿ ಮೇಳದ ಅಂಗವಾಗಿ ಮಹಿಳೆಯರಿಗೆ ಸಿರಿಧಾನ್ಯದ ರಂಗೋಲಿ, ಸಿರಿಧಾನ್ಯದ ಅಡುಗೆ ಪ್ರದರ್ಶನ ಸ್ಪರ್ಧೆಗಳು ಸರ್ದಾರ ಮೈದಾನ(ಕಾಲೇಜ ರೋಡ)ನಲ್ಲಿ ನಡೆಯಲಿವೆ.
ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಮುಕ್ತವಾಗಿ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವವರು ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಆಥವಾ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ತಮ್ಮ ಹೆಸರನ್ನು ಜನೇವರಿ 23 ರಂದು ಬೆಳಿಗ್ಗೆ 12.00 ಗಂಟೆಯ ಒಳಗಾಗಿ ಹೆಸರು ನೊಂದಾಯಿಸುವಂತೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಎಸ್.ಎಸ್.ಪಾಟೀಲರವರು ಹಾಗೂ ಉಪ ಕೃಷಿ ನಿರ್ದೇಶಕರಾದ ಪ್ರತಿಭಾ ಜಿ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಜಿಲ್ಲಾ ಕೌಶಲ್ಯಾಭಿವೃಧ್ಧಿ ಕಛೇರಿವತಿಯಿಂದ ಉಚಿತ ತರಬೇತಿ

 

ಬೆಳಗಾವಿ, ಜ.17 : ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ(ಆರ್) ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ಟ್ರೈನಿಂಗ್ ನೀಡಲಾಗುವುದು.
18 ರಿಂದ 45 ವರ್ಷ ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೆÇೀಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ತರಬೇತಿ ಅವಶ್ಯಕತೆ ಹಾಗೂ ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಜನವರಿ 25 ರ ಒಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ ಕೆನರಾ ಬ್ಯಾಂಕ್, ದೇಶಪಾಂಡೆ ಆರ್‍ಸೆಟಿ(ಆರ್) ವಿಸ್ತರಣಾ ಕೇಂದ್ರ ಹಸನ್‍ಮಾಳ್, ದಾಂಡೇಲಿ-581325. ಅಥವಾ 08284-298547, 9449782425, 9731842849, 9731842849 ಈ ವಾಟ್ಸಪ್ ನಂಬರಿಗು ಅರ್ಜಿ ಸಲ್ಲಿಸಬಹುದು.
ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿಯ ನಂತರ ಉದ್ಯೋಗ ನಿಯೋಜನೆಯ ಮಾರ್ಗದರ್ಶನವನ್ನು ನೀಡಲಾಗುತ್ತದೆ.//

ಜಿಲ್ಲಾ ಕೌಶಲ್ಯಾಭಿವೃಧ್ಧಿ ಕಛೇರಿವತಿಯಿಂದ ಉಚಿತ ತರಬೇತಿ

 

ಬೆಳಗಾವಿ, ಜ.17 : ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ): ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ(ಆರ್) ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಉಚಿತ ರೆಪ್ರೀಜಿರೇಶನ್ & ಎರ್ ಕಂಡಿಶನ್ ರಿಪೇರ್ ತರಬೇತಿ ನೀಡಲಾಗುವುದು.
18 ರಿಂದ 45 ವರ್ಷ ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೆÇೀಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ತರಬೇತಿ ಅವಶ್ಯಕತೆ ಹಾಗೂ ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಜನವರಿ 31 ರ ಒಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ ಕೆನರಾ ಬ್ಯಾಂಕ್, ದೇಶಪಾಂಡೆ ಆರ್‍ಸೆಟಿ(ಆರ್) ವಿಸ್ತರಣಾ ಕೇಂದ್ರ ಹಸನ್‍ಮಾಳ್, ದಾಂಡೇಲಿ-581325. ಅಥವಾ 08284-298547, 9449782425, 9731842849, 9731842849 ಈ ವಾಟ್ಸಪ್ ನಂಬರಿಗು ಅರ್ಜಿ ಸಲ್ಲಿಸಬಹುದು.
ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿಯ ನಂತರ ಉದ್ಯೋಗ ನಿಯೋಜನೆಯ ಮಾರ್ಗದರ್ಶನವನ್ನು ನೀಡಲಾಗುತ್ತದೆ.//