21 ಸಾಹಿತ್ಯ ಕೃತಿಗಳ ಬಿಡುಗಡೆ

ಗೋಕಾಕ 16: ಭೌತಿಕವಾಗಿ ಹಣವನ್ನು ಹೊಂದಿದವರನ್ನು ಸಿರಿವಂತ ಎಂದು ಕರೆಯದೆ ವಿದ್ಯೆ, ಸರಳ ಸಜ್ಜನಿಕೆಯನ್ನು ರೂಢಿಸಿಕೊಂಡ ವ್ಯಕ್ತಿತ್ವಕ್ಕೆ ಸಿರಿವಂತ ಎಂದು ಕರೆದರೆ ಆ ಶಬ್ದಕ್ಕೆ ನಾಡಿನ ಹಿರಿಯ ಕಾದಂಬರಿಕಾರ ಮಹಾಲಿಂಗ ಮಂಗಿ ಅತ್ಯಂತ ಪ್ರಸ್ತುತರು ಎಂದು ಕೆ.ಎಲ್.ಇ ಸಂಸ್ಥೆ ನಿರ್ದೇಶಕ ಜಯಾನಂದ ಮುಳವಳ್ಳಿ ಬಣ್ಣಿಸಿದರು.
ಭಾನುವಾರ ಕೆ.ಎಲ್.ಇ ಸಂಸ್ಥೆಯ ಇಲ್ಲಿನ ಸಂಸ್ಕøತಿ ವಿದ್ಯಾಲಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಗೋಕಾಕ ಪ್ರಗತಿಶೀಲ ಲೇಖಕರ ಬಳಗ, ಜ್ಯೋತಿ ಕಲಾವಿದರ ಹವ್ಯಾಸಿ ಕಲಾ ಸಂಸ್ಥೆ ಮತ್ತು ಡಾ. ರಾಜಕುಮಾರ ಅಭಿಮಾನಿಗಳ ಸಂಘ, ಗೋಕಾಕ ಫಾಲ್ಸ್ನ ಜಲಪಾತ ವನಿತೆಯರ ಬಳಗ ಹಾಗೂ ತಡಸಲ ಮಹಾಲಿಂಗೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಮಹಾಪ್ರಸ್ಥಾನ, ಮುತ್ತಿಮ ತೇರು, ಮುಸ್ಸಂಜೆಯ ಕಾವ್ಯ ದರ್ಶನ ಸೇರಿದಂತೆ ಒಟ್ಟು 21 ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವೋತ್ತಮ ಜಾರಕಿಹೊಳಿ ಗ್ರಂಥ ಬಿಡುಗಡೆ ಮಾಡಿದರು. ಕೃತಿಗಳ ಕುರಿತು ಡಾ.ಅಶೋಕ ನರೋಡೆ, ಡಾ.ವೈ.ಎಂ. ಯಾಕೊಳ್ಳಿ, ಪ್ರೋ. ಸಂಗಮೇಶ ಗುಜಗೊಂಡ ಮತ್ತು ಶಿಕ್ಷಕ ಆರ್.ಎಲ್. ಮಿರ್ಜಿ ಮಾತನಾಡಿದರು.
ವೇದಿಕೆಯಲ್ಲಿ 18 ಕೃತಿಗಳನ್ನು ರಚಿಸಿದ ಹಿರಿಯ ಸಾಹಿತಿ ಮಹಾಲಿಂಗ ಮ/ಂಗಿ, ಕಾಂಗೆಏಸ್ ಮುಖಂಡ ಅಶೋಕ ಪೂಜಾರಿ, ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಯ ಸಾಹಿತಿ ಅಶೋಕ ಬಾಬು ನಿಲಗಾರ, ಸಿರಿಗನ್ನಡ ರಾಜ್ಯಧ್ಯಕ್ಷ ರಜನಿ ಜಿರಗ್ಯಾಳ, ಲೇಖಕ ಮತ್ತು ಹಿರಿಯ ಪತ್ರಕರ್ತ ಸಲೀಮ ಧಾರವಾಡಕರ, ರಾಜೇಶ್ವರಿ ಇಡೆಯರ, ಪ್ರಕಾಶ ಆರ್. ಶ್ರೀನಿವಾಸ ಮತ್ತು ವೈ.ಎಂ. ಭಜಮ್ಮನವರ, ಕೆಂಚಪ್ಪ ಪೂಜಾರಿ, ಡಾ. ಉದಯಕುಮಾರ ಒಡೆಯರ ಉಪಸ್ಥಿತರಿದ್ದರು.
ವೇದಿಕೆಯಲ್ಲಿ 18 ಕೃತಿಗಳನ್ನು ರಚಿಸಿದ ಹಿರಿಯ ಸಾಹಿತಿ ಮಹಾಲಿಂಗ ಮಂಗಿ, ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ, ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಉ ಸಾಹಿತಿ ಅಶೋಕ ಬಾಬು ನಿಲಗಾರ, ಸಿರಿಗನ್ನಡ ರಾಜ್ಯಧ್ಯಕ್ಷ ರಜನಿ ಜಿರಗ್ಯಾಳ, ಲೇಖಕ ಮತ್ತು ಹಿರಿಯ ಪತ್ರಕರ್ತ ಸಲೀಮ ಧಾರವಾಡಕರ, ರಾಜೇಶ್ವರಿ ಇಡೆಯರ, ಪ್ರಕಾಶ ಆರ್.ಶ್ರೀನಿವಾಸ ಮತ್ತು ವೈ.ಎಂ. ಭಜಮ್ಮನವರ, ಕೆಂಚಪ್ಪ ಪೂಜಾರಿ, ಡಾ. ಉದಯಕುಮಾರ ಒಡೆಯರ ಉಪಸ್ಥಿತರಿದ್ದರು.