ಮೋಸತನದಿಂದ ಕಾರು ಕಳ್ಳತನ ಮಾಡುವವರನ್ನ ಜೈಲಿಗಟ್ಟಿದ ಹುಕ್ಕೇರಿ ಪೋಲಿಸರು

ಹುಕ್ಕೇರಿ: ಮೋಸತನದಿಂದ ಕಾರು ಕಳ್ಳತನ ಮಾಡುವವರನ್ನ ಜೈಲಿಗಟ್ಟಿದ ಹುಕ್ಕೇರಿ ಪೋಲಿಸರು ರೂ.7,30,000/- ಲಕ್ಷ ಮೌಲ್ಯದ ಕಾರ ಹಾಗೂ ಮೋಟರ್ ಸೈಕಲ್‌ಗಳ ವಶ
ಕಳೆದ 2022 ನೇ ಸಾಲಿನ ಜುಲೈ ತಿಂಗಳಲ್ಲಿ ಹುಕ್ಕೇರಿ ತಾಲ್ಲೂಕಿನ ಹಂಜ್ಯಾನಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಕಳ್ಳತನವಾದ ಟೊಯೊಟಾ ಕಂಪನಿಯ ಇಟಿಯೋಸ್’ ಅವಾ ಕಾರು ಕಳ್ಳತನ ಪ್ರಕರಣಕ್ಕೆ ಬೆನ್ನಟ್ಟದ ಹುಕ್ಕೇರಿ ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿ ಕಳುವಾದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಪ್ರಕರಣದಲ್ಲಿನ ಪ್ರಮುಖ ಆರೋಪಿಯು ಮೂಲತಃ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ನಿವಾಸಿಯಾಗಿದ್ದು ಅವನು ಗಡಹಿಂಗ್ಲಜ್ ಎಂ.ಎಸ್.ಆರ್.ಟಿ.ಸಿಯಲ್ಲಿ ಕ್ಲರ್ಕ ಅಂತಾ ಕೆಲಸ ಮಾಡುತ್ತಿದ್ದನು. ಸದರಿ ಕೆಲಸ ಕಳೆದುಕೊಂಡ ಆರೋಪಿತನು ಸೆಕಂಡ ಹ್ಯಾಂಡ ಕಾರಗಾಡಿಗಳ ಕೊಂಡುಕೊಳ್ಳುವಿಕೆಯ ವ್ಯವಹಾರ ಪ್ರಾರಂಭಿಸಿ ಬೇರೆಯವರ ವಾಹನಗಳನ್ನು ತಾನು ನಡೆಸುವುದಾಗಿ ಹೇಳಿ ಪಡೆದುಕೊಂಡು ಸದರಿ ವಾಹನಗಳ ನಂಬರಗಳನ್ನು ಬದಲಾಯಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದನು.
ಸದರಿ ವಾಹನದಲ್ಲಿ ಅಳವಡಿಸಿದ್ದ ಜಿಪಿಎಸ್ ಮುಖಾಂತರ ಆ ವಾಹನ ಎಲ್ಲಿದೆ ಅಂತಾ ಪತ್ತೆ ಮಾಡಿ ಕಾರ ಇದ್ದ ಸ್ಥಳವನ್ನು ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಗಡಹಿಂಗ್ಲಜ್ ತಾಲ್ಲೂಕಿನಲ್ಲಿರುವ ತನ್ನ ಪರಿಚಯದ ಮೂರು ಜನರಿಗೆ ಹೇಳಿ ಅವರಿಂದ ಸದರಿ ವಾಹನವನ್ನು ಕಳ್ಳತನ ಮಾಡಿಸಿರುತ್ತಾನೆ. ಅದೇ ವಾಹನವನ್ನು ಮತ್ತೆ ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದನು.
ಹುಕ್ಕೇರಿ ಪೊಲೀಸ್ ಠಾಣೆಯ ಪಿಐ ಮಹಮ್ಮದ ರಫಿಕ ತಹಸೀಲ್ದಾರ ರವರ ತಂಡ ನೆರೆಯ ಮಹಾರಾಷ್ಟ್ರ ರಾಜ್ಯದ ಗಡಹಿಂಗ್ಲಜ್, ಕೊಲ್ಲಾಪೂರ, ಪೂಣೆ, ನಾಸಿಕ, ಔರಂಗಾಬಾದ ಹಾಗೂ ಪಂಡರಾಪೂರಗಳಲ್ಲಿ ಕಾರ್ಯಾಚರಣೆ ಮಾಡಿ ಆರೋಪಿತರನ್ನು ಹಾಗೂ ಕಳುವಾದ ಕಾರನ್ನು ಪತ್ತೆ ಮಾಡಿ ಕಳುವಾದ ಕಾರ ಹಾಗೂ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಮೋಟರ್ ಸೈಕಲ್‌ನ್ನು ಜಪ್ತ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಾನ್ಯ ಎಸ್.ಪಿ. ಸಂಜೀವ ಪಾಟೀಲರ ನೆತ್ರತ್ವದಲ್ಲಿ ಬೆಳಗಾವಿ ಹಾಗೂ ಹೆಚ್ಚುವರಿ ಎಸ್.ಪಿ. ಬೆಳಗಾವಿ, ಶ್ರೀ ಮನೋಜ ಕುಮಾರ ನಾಯಕ ಡಿ.ಎಸ್.ಪಿ. `ಗೋಕಾಕರವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರವರಾದ ಶ್ರೀ ಎಮ್. ಎಮ್. ತಹಶೀಲ್ದಾರ, ಶ್ರೀ ಎ.ಎಸ್.ಸನದಿ ಎ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಶ್ರೀ. ಸಿ.ಡಿ ಪಾಟೀಲ ಸಿ.ಎಚ್.ಸಿ 1361. ಶ್ರೀ ಆರ್. ಎಸ್. ಡಂಗ ಸಿ.ಎಚ.ಸಿ 2614 ಶ್ರೀ ಗಜಾನನ.ಎಸ್, ಕಾಂಬಳೆ ಸಿಪಿಸಿ 3255, ಶ್ರೀ ಮಂಜುನಾಥ ಎಸ್. ಕಬ್ಬೂರೆ ಸಿಪಿಸಿ 3042., ಶ್ರೀ ಎಸ್.ಆರ್. ರಾಮದುರ್ಗ ಸಿಪಿಸಿ 1512, ಶ್ರೀ ಅಜೀತ ಎಲ್ ನಾಯಿಕ ಸಿ.ಪಿ.ಸಿ. 3277 ಶ್ರೀ ಉಮೇಶ. ಅರಭಾಂವಿ ಸಿ.ಪಿ.ಸಿ 3769, ಶ್ರೀ ಬಿ.ವಿ ನಾವಿ ಸಿ.ಪಿ.ಸಿ 2781 ಶ್ರೀ ಬಿ. ಆರ್. ಶಿರಗಾಂವಿ ಸಿ.ಪಿ.ಸಿ 3251, ಮತ್ತು ಸಿಬ್ಬಂದಿ ಜನರ ಕಾರ್ಯವನ್ನು ಬೆಳಗಾವಿ ಜಿಲ್ಲೆಯ ಎಸ್.ಪಿ ರವರು ಹುಕ್ಕೇರಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿ, ಇದೇ ರೀತಿ, ಕರ್ತವ್ಯವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿರುತ್ತಾರೆ.
ಅಲ್ಲದೆ ಸಾರ್ವಜನಿಕರು ಸೆಕೆಂಡಹ್ಯಾಂಡ ವಾಹನಗಳನ್ನು ಕೊಳ್ಳುವಾಗ ವಾಹನದ ರೆಜಿಸ್ಟ್ರೇಷನ್ ನಂಬರ, ಎಂಜಿನ್ ನಂಬರ ಹಾಗೂ ಚಾನ್ಸಿಸ್ ನಂಬರಗಳನ್ನು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಯಲ್ಲಿ ವಿಚಾರಿಸಿ ಖಾತ್ರಿ ಪಡಿಸಿಕೊಂಡು ನಿಯಮಾನುಸಾರ ವಾಹನಗಳನ್ನು ಖರೀದಿ ಮಾಡಿಕೊಳ್ಳಬೇಕೆಂದು ಮಾನ್ಯ ಎಸ್.ಪಿ. ಸಾಹೇಬರು ತಿಳಿಸಿರುತ್ತಾರೆ.