Belagavi News In Kannada | News Belgaum

ಸರಾಯಿ ಮುಕ್ತ ಗ್ರಾಮಕ್ಕೆ ಸಾಥ ನೀಡಿದ ಸ್ಥಳಿಯರು

ಅವರಗೋಳ:ಸರಾಯಿ ಮುಕ್ತ ಗ್ರಾಮಕ್ಕೆ ಸಾಥ ನೀಡಿದ ಸ್ಥಳಿಯರು ಹಾಗೂ ಅಧಿಕಾರಿಗಳು ಮುಖಂಡರು ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಎಗ್ಗಿಲ್ಲದೆ ಅಕ್ರಮ ಸರಾಯಿ ಮಾರಾಟಗಾರರ ಹಾವಳಿಯಿಂದ ಬೇಸತ್ತ ಜನಕ್ಕೆ ದಾರಿ ತಿಳಿಯದೇ ಸರಾಯಿ ಮಾರಾಟ ಹಾಗೂ ಕುಡಿತದ ಚಟಕ್ಕೆ ಬಲಿಪಶು ಆಗುತ್ತಿರುವ ಕುಟುಂಬಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.

ಎಷ್ಟೋ ಕುಟುಂಬಗಳು ಹಾಳಾಗಿವೆ ಪ್ರತಿ ವರ್ಷವೂ ಕುಡಿತದ ಚಟಕ್ಕೆ ಎಷ್ಟೋ ಯುವಕರ ಸಾವುಗಳು ಕೂಡಾ ನೊಡಿದ್ದೆವೆ ಎಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು.ಗ್ರಾಮದಲ್ಲಿ ಸರಾಯಿ ಮಾರಾಟ ಸರಳವಾಗಿ ಸಿಗುವದರಿಂದ ಜನ ಹಾಗೂ ಯುವಕರು ಕುಡಿದ ಅಮಲಿನಲ್ಲಿ ಮಹಿಳೆಯರಿಗೆ ದಾರಿ ಕೊಡದೇ ಸಮಾಜದಲ್ಲಿ ಪ್ರಜಾಪ್ರಭುತ್ವ ಕಳೆದುಕೊಂಡಂತೆ ಆಗಿದೆ ಎಂದು ಡಿಎಸ್ಎಸ್ ಮುಖಂಡ ವಿಠ್ಠಲ ಮಾದರ ಇವರು ಸಭೆಯಲ್ಲಿ ಮಾತನಾಡಿದರು.ಬಸ್ ಸ್ಟ್ಯಾಂಡನಲ್ಲಿ ಬರೇ ಕುಡುಕರ ಹಾವಳಿ ಮಶಿದಿ ಮಂದಿರಗಳ ಮುಂದೆ ಸರಾಯಿ ಮಾರಾಟ ಶಾಲೆಯಲ್ಲಿ ಒನಿಗಳಲ್ಲಿ ಪ್ರತಿ ಹಾದಿಯಲ್ಲಿ ಬರಿ ಗ್ಲಾಸ್ ಸರಾಯಿ ಪಾಕೀಟಗಳ ಹಾವಳಿ ಶಾಲೆಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಕೂಡಾ ರಾಜಾರೋಷವಾಗಿ ಶಾಲಾ ಕಟ್ಟೆಯ ಆವರಣದಲ್ಲಿ ಕುಳಿತು ಸರಾಯಿ ಕುಡಿಯುವದು ಬಸ್ ಸ್ಟ್ಯಾಂಡ್ ನಲ್ಲೆ ನಿಂತು ಸಾರ್ವಜನಿಕರ ಮುಂದೆ ಸರಾಯಿ ಕುಡಿಯುವದು ನಡೆಸಿದ್ದಾರೆ.ಮಾರುವವರೇ ಬಂದ ಮಾಡಿದರೇ ಕುಡಿಯುವವರ ಸಂಖ್ಯೆ ಸ್ವಲ್ಪ ಮಟ್ಟಿಗೆಯಾದರೂ ಕಡಿಮೆಯಾಗುತ್ತದೆ ಎಂದು ಸುರೇಶ ಸರನಾಯಿಕ ಇವರು ಸಭೆಯನ್ನ ಉದ್ದೇಶಿಸಿ ಮಾತನಾಡಿದರು.

ಇನ್ನೂ ಸರಾಯಿ ಮುಕ್ತ ಕಾರ್ಯಕ್ರಮದ ಸಭೆಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಹುಕ್ಕೇರಿ ಪೊಲಿಸ್ ಇಲಾಖೆ ಗ್ರಾಮದ ಪಂಚಾಯತ ಸದಸ್ಯರು ಗ್ರಾಮ ಪಂಚಾಯತಿ ಪಿಡಿಒ ಶಾಲಾ ಶಿಕ್ಷಕರು ಮಕ್ಕಳು ಮಹಿಳೆಯರು ಭಾಗವಹಿಸಿದ್ದರು. ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಮಾತನಾಡಿ ಗ್ರಾಮಸ್ಥರು ಸಾಥ ಕೊಟ್ಟರೆ ನಾವು ಸರಾಯಿ ಮಾರುವವರ ಮೇಲೆ ನಿಗಾ ಇಟ್ಟು ಸರಾಯಿ ಬಂದ ಮಾಡಿಸುತ್ತೆವೆಂದು ಹೇಳಿದರು

ನಂತರ ಚಟಕ್ಕೆ ಬಲಿಯಾದವರು ಕೂಡಾ ಸರಾಯಿ ಬಿಟ್ಟು ಕುಟುಂಬದ ಕಡೆ ಗಮನ ಹರಿಸಬೇಕು ಎಂದು ತಿಳಿಹೇಳಿದರು ಮಾರಾಟದ ಬಗ್ಗೆ ಇನ್ನೂ ಮಾಹಿತಿ ಬಂದರೆ ನಮಗೆ ಕೂಡಲೇ ಮಾಹಿತಿ ನೀಡಿ ನಾವೂ ನಿರ್ದಾಕ್ಷಿಣ್ಯವಾಗಿ ಕಾನೂನಿನಡಯಲ್ಲಿ ಕ್ರಮ ತೆಗೆದುಕೊಳ್ಳುತ್ತೆವೆಂದು ಗ್ರಾಮಸ್ಥರಿಗೆ ಹೇಳಿದರು.ಸಂದರ್ಭದಲ್ಲಿ ಸರಾಯಿ ಮಾರಾಟ ಹಾಗೂ ಕುಡಿತದ ಚಟಕ್ಕೆ ಬಲಿಯಾದವರ ಬಗ್ಗೆ ಸವಿಸ್ತಾರವಾಗಿ ಶಾಲೆಯ ಶಿಕ್ಷಕರು ಹಾಗೂ ಅಧಿಕಾರಿಗಳು ಗ್ರಾಮದ ಮುಖಂಡರು ಮಾತನಾಡಿದರು.

ಒಟ್ಟಿನಲ್ಲಿ ಸಭೆಯ ಪ್ರಭಾವದಿಂದ ಸರಾಯಿ ಬಂದ ಸರಾಯಿ ಮುಕ್ತ ಗ್ರಾಮ ಮಾಡಿದ್ದಕ್ಕೆ ಜಿಲ್ಲಾಡಳಿತ ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತ ಪಡಿಸಿದ್ದಾರೆ.ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳಾದ ಸುರೇಶ ಸರನಾಯ್ಕ್ (ಮಾಜಿ ಗ್ರಾಮ ಪಂಚಾಯತ್ ಸದಸ್ಯರು )ವಿಠ್ಠಲ ಮಾದರ್ ಸಹದೇವ್ ಮೈಲಾಕೆ ಮುತ್ತು ಸರನಾಯ್ಕ್ ಶಿವಲಿಂಗಯ್ಯ ಮಠಪತಿ ಭೀಮಶಿ ಕರಗುಪ್ಪಿ ಅಡಿವೆಪ್ಪ ಅಂಕಲಗಿ ಮೊನೇಶ್ ಬಡಿಗೇರ್ ಯoಕಣ್ಣ ಸರನಾಯ್ಕ್ ಶಂಕರ್ ಕರಗುಪ್ಪಿ ಅಪ್ಪಸಾಹೇಬ್ ಅಂಕಲಿ ಬಸವರಾಜ್ ಅಂಕಲಿ ಪರಪ್ಪ ರಾಮಗೊಂಡಿ ಕೆಂಪಣ್ಣ ಗೋಂಜಾಳಿ ಈರಣ್ಣ ಪಾಟೀಲ್ ಅಧ್ಯಕ್ಷರು ಸಾಮಾಜಿಕ ನ್ಯಾಯ ಸಮಿತಿ ಮಾರುತಿ ದೇವುಗೊಳ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮ ಹಿರಿಯರು ಹಾಗೂ ಮಹಿಳಾ ಸಂಘಟನೆಯವರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿಪಾಟೀಲ್ ಬಸವರಾಜ ಪಾಟೀಲ ನಾಗೇಶ ಪಾಟೀಲ ಪ್ರವೀಣ ದೇಶಪಾಂಡೆ ಹಲವು ಮುಖಂಡರು ಹಾಜರಿದ್ದರು.