Belagavi News In Kannada | News Belgaum

ಭಾರತೀಯ ಯುವಕರು ಅಮೆರಿಕ ಯುವಕರಿಗೆ ಮಾದರಿಯಾಗಿದ್ದಾರೆ

ಬೆಳಗಾವಿ : ಭಾರತೀಯ ಯುವಕರು ಅಮೆರಿಕ ಯುವಕರಿಗೆ ಮಾದರಿಯಾಗಿದ್ದಾರೆಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅವರೇ ಒಂದು ಸಂದರ್ಭದಲ್ಲಿ ಹೇಳಿರುವುದು. ಪ್ರತಿಯೊಬ್ಬ ಭಾರತಿಯನು ಅಭಿಮಾನ ಪಡಬೇಕಾದ ಸಂಗತಿ ಎಂದು ಖ್ಯಾತ ವಾಗ್ಮಿ ಡಾ. ಬಸವರಾಜ ಜಗಜಂಪಿ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಲಿಯವರು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ವಿದೇಶ ವಿನೋದ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿದೇಶ ಪ್ರಸಂಗಗಳನ್ನು ಹಂಚಿಕೊಳ್ಳುತ್ತ ಡಾ. ಜಗಜಂಪಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಭಾರತೀಯ ವಿದ್ಯಾರ್ಥಿಗಳ ಗಂಭೀರವಾದ ಓದು, ಚಿಂತನೆ, ಪ್ರತಿಯೊಂದು ಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವ ರೀತಿಯನ್ನು ಅಮೆರಿಕ ಯುವಕರು ಭಾರತೀಯರಿಂದ ಕಲಿಬೇಕಿದೆ ಎಂಬ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅವರೇ ಹೇಳಿದುದನ್ನು ಡಾ. ಬಸವರಾಜಯವರು ನೆನಪಿಸಿಕೊಂಡರು
ಎಲ್ಲ ವಿದೇಶಿಯರೂ ಪ್ರವಾಸಿ ತಾಣಗಳನ್ನಾಗಿ ಮಾಡಿದ್ದಾರೆ. ಉದಾಹರಣೆಗೆಂದರೆ ರೊಮ್ ದೇಶದಲ್ಲಿ ಬಿಳುವಂತಹ ಗೊಡೆಯನ್ನು ನಿಲ್ಲಿಸಿದ್ದಾರೆ. ಯುನೆಸ್ಕೊದಿಂದ ಮಾನ್ಯತೆ ಪಡೆದಿರುವ ಅದ್ಭುತವಾದಂತಹ ತಾಣಗಳು ನಮ್ಮಲ್ಲಿದ್ದರೂ ಭಾರತೀಯರಿಗೆ ಪ್ರವಾಸಿ ತಾಣಗಳನ್ನಾಗಿ ಮಾಡಲಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆ ಎಂದು ಅವರು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಸುನಂದಾ ಎಮ್ಮಿಯವರು ಮಾತನಾಡಿ ತಿಂಗಳ ಪೂರ್ತಿ ಏಕತಾನತೆಯಿಂದ ಬೇಸತ್ತ ಮನಸ್ಸನ್ನು ಹಾಸ್ಯಕೂಟ ಹಗುರಗೊಳಿಸುವ ಕೆಲಸವನ್ನು ಮಾಡುತ್ತ ಬಂದಿದೆ. ಹಾಸ್ಯಕೂಟ ಎರಡನೇ ಶನಿವಾರವನ್ನು ಹಾಸ್ಯ ಶನಿವಾರವೆಂದು ಕರೆಯುವಂತೆ ಮಾಡಿದೆ ಎಂದು ಹೇಳಿ ತಾವು ಬರೆದ ‘ಅಜ್ಜಿ ಮತ್ತು ಪತ್ರಿಕೆ’ ಎಂಬ ವಿನೋದ ಕವಿತೆಯನ್ನು ಓದಿ ತೋರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಿ. ಬಿ. ಸ್ವಾಮಿಯವರು ಮಾತನಾಡುತ್ತ ಹಾಸ್ಯಕೂಟ ಗುಂಡೇನಟ್ಟಿ ಮಧುಕರ ಅವರ ಸಾರಥ್ಯದಲ್ಲಿ ಕೊರೊನಾ ಸಮಯವನ್ನು ಬಿಟ್ಟರೆ ಪ್ರತಿ ಎರಡನೇ ಶನಿವಾರ ಒಂದು ಶನಿವಾರವೂ ತಪ್ಪದೇ ಒಂಬತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಹೀಗೆ ಇದರ ಪಯಣ ಮುಂದೆವರೆದುಕೊಂಡು ಹೋಗಲಿ ಎಂದು ಹಾರೈಸಿದರು.
ಖ್ಯಾತ ನಗೆಮಾತುಗಾರರಾದ ಪ್ರೊ. ಜಿ. ಕೆ. ಕುಲಕರ್ಣಿಯವರು ವಿದೇಶದಲ್ಲಾದ ನಗೆ ಪ್ರಸಂಗಗಳನ್ನು ಹೇಳಿ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿಗಳಾದ ಡಾ. ಜಿನದತ್ತ ದೇಸಾಯಿಯವರು, ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿ ಮಾತನಾಡಿದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ. ಎಸ್. ಸೋನಾರ ನಿರೂಪಿಸದರು.///////