ಕೆಪಿಸಿಸಿಯ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾಗಿ ಮಹ್ಮದರಸೂಲ್ ಮುಲ್ಲಾ ನೇಮಕ

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರ ಕಾಂಗ್ರೆಸ್ ಪಕ್ಷದ ಮುಖಂಡ ಮಹ್ಮದರಸೂಲ್ ಮುಲ್ಲಾ ಅವರನ್ನು ಕೆಪಿಸಿಸಿಯ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ ಅಲ್ಪಸಂಖ್ಯಾತ ವಿಭಾಗದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಇಮ್ರಾನ್ ಪ್ರತಾಪ ಗರಿಹಿ ಅವರ ಅನುಮೋದನೆ ಮೇರೆಗೆ ನೇಮಕಾತಿ ಆದೇಶವನ್ನು ಹೊರಡಿಸಲಾಗಿದ್ದು ಅವರು ಇಂದಿನಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಬೇಕೆಂದು ತಿಳಿಸಿದ್ದಾರೆ.//////