Belagavi News In Kannada | News Belgaum

ಆಸ್ತಿ ವಿವಾದ: ನಂದಗಡದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಳಿ ಕೊಡಲ್ ಗ್ರಾಮ ಹದ್ದಿಯಲ್ಲಿರುವ ತೋಟದ ಮನೆಯಲ್ಲಿ  ಗುರುವಾರ ನಡೆದಿದೆ.

ಯಲ್ಲಪ್ಪ ಸಂತಾರಾಮ ಗುರವ (33) ಮೃತ ವ್ಯಕ್ತಿ. ಈ ಕೊಲೆಯನ್ನು ಆಸ್ತಿ ವಿಚಾರವಾಗಿ ಮೃತನ ಸಹೋದರ ಮಾಡಿರುವುದಾಗಿ ತಿಳಿದು ಬಂದಿದೆ. ಆಸ್ತಿ ವಿವಾದದಿಂದ ಸಾಕಷ್ಟು ಕಲಹ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಕುರಿತು ನಂದಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..//////