Belagavi News In Kannada | News Belgaum

ಪ್ರೀತಿಸಿ ಕೈ ಕೊಟ್ಟ ಯುವತಿ: ಮನನೊಂದ ಯುವಕ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿ ಆರು ವರ್ಷದ ನಂತರ ಯುವತಿ ಕೈಕೊಟ್ಟಳೆಂದು ಮನನೊಂದು ಯುವಕನೊಬ್ಬ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ.

ಇವರಿಬ್ಬರು ನಾನು ನಿನ್ನಗಾಗಿ, ನೀನು ನನಗಾಗಿ ಎಂದು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಜಗಳ ನಡೆದಿದ್ದು,

ಆರು ವರ್ಷಗಳ ಪ್ರೀತಿಗೆ ಯುವತಿ ಎಳ್ಳು ನೀರು ಬಿಟ್ಟಿದ್ದಾಳೆ . ಇದರಿಂದ ಮನನೊಂದ ಪ್ರಿಯತಮ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ನಗರದ ಉಲ್ಲಾಳ ಉಪನಗರದಲ್ಲಿ ನಡೆದಿದೆ.

ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್(25) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////