Belagavi News In Kannada | News Belgaum

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ

ಹುಕ್ಕೇರಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ  ಅಹವಾಲು ಸ್ವೀಕರಿಸಿದ ಅಧಿಕಾರಿಗಳು ಅಹವಾಲು ಸ್ವೀಕರಿಸಿದ  ಅಧಿಕಾರಿಗಳುತಹಸೀಲ್ದಾರರ ಗ್ರಾಮವಾಸ್ತವ್ಯ ಸಾರಾಪೂರ ಗ್ರಾಮದಲ್ಲಿ ಹೌದು ಹುಕ್ಕೆರಿ ತಾಲೂಕಿನ ಸಾರಾಪೂರ ಗ್ರಾಮದಲ್ಲಿ ಇಂದು ತಾಲೂಕಾಡಳಿತದಿಂದ ಗ್ರಾಮವಾಸ್ತವ್ಯ ಕಾರ್ಯಕ್ರಮ ನೇರೆವೆರಿಸಿ ಜನರ ಅಹವಾಲುಗಳನ್ನು ಆಲಿಸುವುದರ ಜತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿದೆ
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಉತ್ಸಾಹದಿಂದ ಭಾಗವಹಿಸಿದರು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ತಾಲೂಕು ದಂಡಾಧಿಕಾರಿಗಳಾದ ದೊಡ್ಡಪ್ಪ ಹೂಗಾರ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಸುಮಾರು 2 ತಾಸುಗಳ‌ ಕಾಲ ಗ್ರಾಮದ ಓಣಿ ಓಣಿಗೂ ಭೇಟಿ ನೀಡಿದ ತಹಸೀಲ್ದಾರರು ಜನರ ಸಮಸ್ಯೆಗಳನ್ನು ಆಲಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜನರಿಂದ ಲಿಖಿತ ಹಾಗೂ ಮೌಖಿಕ ಮನವಿಗಳನ್ನು ಪಡೆದು, ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಮಾಶಾಸನ, ಬಸ್ ಸೌಕರ್ಯ, ವಿದ್ಯುಚ್ಛಕ್ತಿ ಸಮಸ್ಯೆ, ವಸತಿ ವಿಷಯಗಳು ಸೇರಿದಂತೆ ಅಹವಾಲುಗಳನ್ನು ಗ್ರಾಮಸ್ಥರು ಸಲ್ಲಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರರಾದ ದೊಡ್ಡಪ್ಪ ಹೂಗಾರ ಕ್ರಷಿ ಇಲಾಖೆ ಅಧಿಕಾರಿ ಮಹಾದೇವ ಪಟಗುಂದಿ ತಾಲೂಕಾ ಪಂಚಾಯತ ಅಧಿಕಾರಿ ಉಮೇಶ ಸಿದ್ನಾಳ ಬಿ ಇ ಒ ಮೊಹನ ದಂಡಿನ ಶಿಶು ಅಭಿವೃದ್ಧಿ ಇಲಾಖೆ ಮಂಜುನಾಥ ಪರಸನ್ನವರ.ಹೀಗೆ ಅನೇಕ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.