Belagavi News In Kannada | News Belgaum

ನೇರ ನಿಷ್ಠುರ ದಿಟ್ಟ ವಚನಕಾರ ನಿಜಶರಣ ಅಂಬಿಗರ ಚೌಡಯ್ಯ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ:  ” ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ನೇರ ನಿಷ್ಠುರ ದಿಟ್ಟ ವಚನಕಾರರು,  ನುಡಿದಂತೆ ನಡೆದವರು ನಡೆದಂತೆ ನುಡಿದವರು ಅಂಬಿಗರ ಚೌಡಯ್ಯನವರು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ ಜಾರಕಿಹೊಳಿ ಅವರು  ಹೇಳಿದರು.

 

 

ಇಲ್ಲಿನ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ  ಶನಿವಾರ ಆಯೋಜಿಸಿದ್ದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ  ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಅವರ ವೈಚಾರಿಕತೆ, ವಚನಗಳನ್ನು ಅರಿತುಕೊಳ್ಳಬೇಕಿದೆ. ಕಲ್ಯಾಣ ಕ್ರಾಂತಿಯ ವೇಳೆ ವಚನ ಕ್ರಾಂತಿ ಸೃಷ್ಟಿಕಾರರು.

 

ದೇಶದ ಕಲ್ಯಾಣಕ್ಕಾಗಿ ಬರೆದ ವಚನಗಳು ಬಿಜ್ಜಳನ ಸೈನಿಕರಿಂದ ದಾಳಿ ಒಳಗಾಗಿ ಸುಟ್ಟು ಹೋಗಿವೆ.  ವಚನಗಳು ಉಳಿಯದಿದ್ದರೆ ಬಸವಾದಿ ಶರಣರ ಬಗ್ಗೆ, ಅನುಭವ ಮಂಟಪದ ಬಗ್ಗೆ ಗೊತ್ತಾಗುತ್ತಿರಲಿಲ್ಲ. ವಚನಗಳನ್ನು ಉಳಿಸಲು ಸಾವಿರಾರು ಶರಣರ ಕಗ್ಗೊಲೆಯಾಗಿದೆ. ವಚನ ಸಾಹಿತ್ಯ ಹಾನಿ ಮಾಡಲು ಯಾಕೆ ಮುಂದಾದರು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ  ಯಾರು ನಮ್ಮ ವೈರಿಗಳು ಎಂಬುದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಇನ್ನೂಳಿದ ಇತಿಹಾಸ ನಿಮ್ಮ ಮುಂದೆ ಇದೆ ಅಷ್ಟೆ ಅವುಗಳನ್ನು ತಿಳಿದುಕೊಂಡು ಶರಣ ದಾರಿಯಲ್ಲಿ ಸಾಗಿದಾಗ ಮಾತ್ರ ಕಲ್ಯಾಣ ಕ್ರಾಂತಿ ಆಗುವುದು ಎಂದು ಕಿವಿಮಾತು ಹೇಳಿದರು.

 

ಸರ್ವಧರ್ಮ ಸಮಾನತೆಗಾಗಿ ಶರಣರು ಸಾಕಷ್ಟು ಶ್ರಮಿಸಿದ್ದಾರೆ. ಅವರ ನಿಜವಾದ ಇತಿಹಾಸ ತಿಳಿದುಕೊಳ್ಳುವ ಪ್ರಯತ್ನವಾಗುತ್ತಿಲ್ಲ, ನಿಜ ಹೇಳಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

 

 

 

12 ಶತಮಾನದಲ್ಲಿ ದೊಡ್ಡ ಕ್ರಾಂತಿಯಾಗಿ, ಶರಣರ ವಿಚಾರಧಾರೆಗಳಿಂದ ನಾವು ಬದುಕುತ್ತಿದ್ದೇವೆ. ಬಸವಣ್ಣನವರ, ನಿಜ ಶರಣ ಅಂಬಿಗರ ಚೌಡಯ್ಯನವರ  ವಿಚಾರಗಳೇ  ವಚನ ಸಾಹಿತ್ಯದ ವಿಚಾರಗಳೇ ಸಂವಿಧಾನದಲ್ಲಿದೆ.‌ ಬಹುಶಃ ಅಂಬೇಡ್ಕರ್ ಅವರು‌ ಬಸವಾದಿ‌ ಶರಣರ‌ ವಿಚಾರಗಳಿಂದ ಪ್ರೇರಿತರಾಗಿ ಸಂವಿಧಾ‌ನ‌ ರಚಿಸಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ,   ಗಂಗಾ ಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ‌ ಕುರಂದವಾಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಗಂಗಾಧರ ತಳವಾರ, ಮುಖಂಡರಾದ ಮಲ್ಲಪ್ಪ ಮುರಗೋಡ, ಅಶೋಕ ವಾಲಿಕಾರ, ಎಸ್.ಕೆ.ಗಸ್ತಿ, ಬಸವರಾಜ ಸುಣಗಾರ, ಅಪ್ಪಾಸಾಬ ಪೂಜೇರ ಸೇರಿ ಇನ್ನಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ನಾಗವೇಣಿ ಹೂಲಿಕೇರಿ ನಿರೂಪಿಸಿದರು. ಭರಮಣ್ಣ ಅಮ್ಮಿನಭಾವಿ ವಂದಿಸಿದರು./////