Belagavi News In Kannada | News Belgaum

“ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮ

ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಬೆಳಗಾವಿ

 

 

ನಗರದ ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮಹಾವಿದ್ಯಾಲಯ ಜನೆವರಿ 18, 2023 ರಂದು ಬೆಳಿಗ್ಗೆ 9.30 ಕ್ಕೆ “ಪರೀಕ್ಷಾ ಪೆ ಚರ್ಚಾ”, ಸ್ಥಳದಲ್ಲೇ ಬಿಡಿಸುವ ಚಿತ್ರಕಲಾ ಸ್ಪರ್ಧೆಯು ಯಶಸ್ವಿಯಾಗಿ ನಡೆಯಿತು. ಬೆಳಗಾವಿ ನಗರ ಮತ್ತು ಜಿಲ್ಲೆಯ 9 ರಿಂದ 12ನೇ ತರಗತಿಯ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಶ್ರೀ. ನರೇಂದ್ರ ಮೋದಿ ಪ್ರಕಟಿಸಿದ ಪರೀಕ್ಷಾ ಯೋಧರ 25 ಮಂತ್ರಗಳ ಮಲ್ಟಿಮೀಡಿಯಾ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಮಂಗಲ ಸುರೇಶ ಅಂಗಡಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಂತೋಷದಿಂದ ಸಿದ್ಧರಾಗಿ ಮತ್ತು ಹಾಜರಾಗುವಂತೆ ಸೂಚನೆ ನೀಡಿ ಶುಭ ಹಾರೈಸಿದರು.

ಗೌರವಾನ್ವಿತ ಪ್ರಧಾನಮಂತ್ರಿ, ಭಾರತ ಸರ್ಕಾರ ಶ್ರೀ ನರೇಂದ್ರ ಮೋದಿಯವರು ನಡೆಸುವ ಮುಂಬರುವ 27ನೇ ಜನವರಿ 2023 ರಂದು “ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮಕ್ಕೆ ಭಾಗವಹಿಸಲು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಮಂಗಲ ಸುರೇಶ ಅಂಗಡಿ ವಹಿಸಿದ್ದರು. ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ರೋಟರಿಯನ್ ಶಿಲ್ಪಾ ಎಚ್. ಕಡಕಭಾವಿ, ಸಚೀನ ಉಪಾಧ್ಯೆ, ಗೌರವ ಅತಿಥಿ, ಡಾ. ಸ್ಪೂರ್ತಿ ಪಾಟೀಲ, ನಿರ್ದೇಶಿಕಿ, ಸುರೇಶ ಅಂಗಡಿ ಶಿಕ್ಷಣ ಸಂಸ್ಥೆ, ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮಹಾವಿದ್ಯಾಲಯ ಪ್ರಾಚಾರ್ಯ ಹೆಚ್. ಎಸ್. ಪಾಟೀಲ, ಸಂಗೀತಾ ದೇಸಾಯಿ, ಪ್ರಾಚಾರ್ಯೆ, ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಉಪಸ್ಥಿತರಿದ್ದರು. ಟಾಪ್ 25, ಟಾಪ್ 10 ಮತ್ತು ಟಾಪ್ 3 ವಿಜೇತರಿಗೆ ಪ್ರಶಸ್ತಿ ನೀಡಿದರು. ಈ ಕಾರ್ಯಕ್ರಮವು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‍ನ ಸಹಭಾಗಿತ್ವದಲ್ಲಿ ನಡೆಯಿತು.