Belagavi News In Kannada | News Belgaum

ಶಿರಹಟ್ಟಿಯವರು ನಿಜ ವ್ಯಕ್ತಿತ್ವಕ್ಕೆ ಸಾಕ್ಷಿ: ವೀರಣ್ಣ ಕಲಕೇರಿ

 

ಬೆಂಗಳೂರು: ಬಹು ಸಂಸ್ಕೃತಿಯಲ್ಲಿ ಬಾಳುತ್ತಿರುವ ಸಮಾಜ ಪ್ರಪಂಚಕ್ಕೆ ಮಾದರಿ, ಪ್ರಭುತ್ವ ಯಾವುದಿದ್ದರೇನು ಅದರ ಪ್ರಗತಿಗೆ ಅಲ್ಲಿಯ ಜನರ ವೈವಿಧ್ಯಮಯ ಜೀವನವೇ ಕಾರಣವಾಗುತ್ತದೆ ಎಂದು ವಚನ ಸಾಹಿತಿ ವೀರಣ್ಣ ಕಲಕೇರಿ ಹೇಳಿದರು.

ಯಲಹಂಕದ ಉಪನಗರದ ಸಿಇಎಸ್ ಪ್ಯಾಶನ್ ಸಂಸ್ಥೆಯಲ್ಲಿ ದೂರದರ್ಶನ ನಿವೃತ್ತ ನಿರ್ದೇಶಕರು ರಾಜ್ಯೋತ್ಸವ ಪುರಸ್ಕೃತ ಡಾ. ಜಿ. ಎಮ್. ಶಿರಹಟ್ಟಿಯವರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಸರ್ವ ಧರ್ಮದ ಸಮನ್ವಯದ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ‌ಗೌರವಿಸುವುದರಿಂದ ನಾಡು ನುಡಿ ಹಾಗೂ ನಾಡವರು ಸಹಬಾಳ್ವೆಯ ಮಾದರಿಯಾಗುತ್ತಾರೆ. ನಮ್ಮ ರಾಷ್ಟ್ರ ಸಾವಿರಾರು ವರ್ಷಗಳಿಂದ ಅಳಿವು ಉಳಿದವುಗಳನ್ನು ದಾಟಿ ಮಾದರಿಯಾಗಲು ಕಾರಣ ಇಲ್ಲಿನ ಬಹು ಸಂಸ್ಕೃತಿ. ದೂರದರ್ಶನ ನಿವೃತ್ತ ನಿರ್ದೇಶಕರು ರಾಜ್ಯೋತ್ಸವ ಪುರಸ್ಕೃತ ಡಾ. ಜಿ. ಎಮ್. ಶಿರಹಟ್ಟಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ ಅವರೊಂದು ನಿಜ ವ್ಯಕ್ತಿತ್ವ ಪ್ರತಿರೂಪ ಎಂದ ಅವರು ಆಕಾಶವಾಣಿ ದೂರದರ್ಶನ ಸೇರಿದಂತೆ ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಅವರ ಕೊಡುಗೆಯನ್ನು‌ ಸ್ಮರಿಸುತ್ತಾ ಶಿರಹಟ್ಟಿಯವರಿಗೆ ಮಾದ್ಯಮ ಕ್ಷೇತ್ರದಿಂದ 2022 ನೇ ಸಾಲಿನ ರಾಜ್ಯೋತ್ಸವ ಪುರಸ್ಕಾರ ಲಭಿಸಿದ್ದು ಸಂತಸ ತಂದಿದೆ ಎಂದರು.

ಸಮಾರಂಭದಲ್ಲಿ ಡಾ. ದೇವಿಂದ್ರನ್, ಸಾಮಾಜೀಕ ಕಾರ್ಯಕರ್ತ‌ ಶಿವರಾಜ್ ಹೆಳವರ, ಬಸವರಾಜ್ ಖಾನಾಪೂರ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.