Belagavi News In Kannada | News Belgaum

ಐತಿಹಾಸಿಕ ನಾಡಿನ ಕೀರ್ತಿ ಹೆಚ್ಚಿಸಿದ ಬಾಲೆ

ಬೈಲಹೊಂಗಲದ ಬಾಲ ಪ್ರತಿಭೆ ಅನನ್ಯಾ ಕಬ್ಬಿನ

ಬೈಲಹೊಂಗಲ- ಮೂರು ವರ್ಷ ಎರಡು ತಿಂಗಳ ಬಾಲಕಿ ಅನನ್ಯಾ ಆನಂದ ಕಬ್ಬಿನ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಸೇರಿದ್ದಾಳೆ. ಈ ಮೂಲಕ ಬೈಲಹೊಂಗಲ ನಾಡಿನ ಕೀರ್ತಿ ಹೆಚ್ಚಿಸಿದ್ದಾಳೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಆನಂದ ಮತ್ತು ಕಲ್ಯಾಣಿ ದಂಪತಿ ಮಗಳಾದ ಅನನ್ಯಾ ಕಬ್ಬಿನ ಚಿಕ್ಕ ವಯಸ್ಸಿನಲ್ಲಿಯೇ ಬುದ್ದಿ ಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ.
ಇಂಗ್ಲಿಷ್‍ನಲ್ಲಿ ಪ್ರಾಸ ಪದಗಳು, ವಾರದ ದಿನಗಳು ಹಾಗೂ ತಿಂಗಳುಗಳು ಹೆಸರುಗಳು ಹೇಳುವುದು. ಸಂಸ್ಕøತ ಸ್ತೋತ್ರಗಳನ್ನು ಪಠಿಸುವುದು ವರ್ಣಮಾಲೆಯ ಅಕ್ಷರಗಳನ್ನು ನೆನೆಪಿಸಿಕೊಳ್ಳುವುದು ಅದರ ಅನುವಾದವನ್ನು ಪದಗಳೊಂದಿಗೆ ಹೇಳುವುದು. ಇಂಗ್ಲಿಷ್‍ನಲ್ಲಿ 1 ರಿಂದ 50 ವರೆಗಿನ ಸಂಖ್ಯೆಗಳನ್ನು, ಹಿಂದಿ ಹಾಗೂ ಕನ್ನಡದಲ್ಲಿ 1 ರಿಂದ 10 ವರೆಗೆ ಸಂಖ್ಯೆಗಳನ್ನು ಪಟಪಟನೆ ಹೇಳುತ್ತಾಳೆ. ಇಂಗ್ಲಿಷ್‍ನಲ್ಲಿ ಕ್ರೀಯಾ ಪದಗಳನ್ನು ಹೇಳುವುದರ ಜೊತೆಗೆ ಅವುಗಳ ಅನುಕರಣೆ ಮಾಡುವುದು, ಇಂಗ್ಲಿಷನಲ್ಲಿ ದೇಹದ ಭಾಗಗಳನ್ನು ಹೇಳುವುದರ ಜೊತೆಗೆ ಅವುಗಳನ್ನು ಗುರುತಿಸುತ್ತಾಳೆ.
ಅನನ್ಯಾ ಕಬ್ಬಿನ ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿಯನ್ನು ಗುರಿತಿಸಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸನಲ್ಲಿ ಸ್ಥಾನ ಪಡೆಯುವದರೊಮದಿಗೆ ಚಿಕ್ಕ ವಯಸ್ಸಿನ ಮಕ್ಕಳ ಬುದ್ದಿಶಕ್ತಿ ಗಮನಿಸಿ ಈ ಸಂಸ್ಥೆಗಳು ಅವಳಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.