Belagavi News In Kannada | News Belgaum

ಪಿತಾಶ್ರೀ ಪ್ರಜಾಪಿತ ಬ್ರಹ್ಮಬಾಬಾರ ಜನಸೇವೆ ಹಾಗೂ ಸಮಾಜ ಸೇವೆಯ ಕಾರ್ಯ ಶ್ಲಾಘನೀಯ : ನೀಲಕಂಠ ಸ್ವಾಮಿಗಳು

ಬೈಲಹೊಂಗಲ- ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥಾಪಕ ಪಿತಾಶ್ರೀ ಪ್ರಜಾಪಿತ ಬ್ರಹ್ಮಬಾಬಾರ ಜನಸೇವೆ ಹಾಗೂ ಸಮಾಜ ಸೇವೆಯ ಕಾರ್ಯ ಶ್ಲಾಘನೀಯ ಎಂದು ಮೂರು ಸಾವಿರ ಮಠದ ಪೀಠಾಧೀಶ ಪ್ರಭು ನೀಲಕಂಠ ಸ್ವಾಮಿಗಳು ಹೇಳಿದರು.
ಪಟ್ಟಣದ ಇಂಚಲ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜರುಗಿದ ಬ್ರಹ್ಮಾ ಬಾಬಾರವರ 54ನೇ ಸೃತಿ ದಿವಸ ಕರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಮಾಜದ ಉದ್ದಾರಕ್ಕೆ ಬಾಬಾರವರ ಸೇವೆ ಸಲ್ಲಿಸಿದ ಸೇವೆ ಅಪಾರವಾಗಿದೆ,

ಜನರಿಗೆ ಆಧ್ಯಾತ್ಮದ ಬೋಧನೆ ಮಾಡಿ ಜನರಿಗೆ ಭಗವಂತನ ಸಾಕ್ಷಾತ್ಕಾರ ಮಾಡಿರುವ ಬ್ರಹ್ಮಬಾಬಾರವರನ್ನು ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ ಅವರ ತತಾದ್ವರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಉತ್ತಮ ಜೀವನ ನಡೆಸಬೇಕೆಂದು ಸಮಾಜಕ್ಕೆ ಕರೆ ನೀಡಿದರು.

ನೇತೃತ್ವ ವಹಿಸಿದ್ದ ದೊಡವಾಡ ಜಡಿ ಸಿದ್ದೇಶ್ವರ ಶಿವಾಚರ್ಯ ಸ್ವಾಮಿಗಳು ಮಾತನಾಡಿ ಸಮಾಜದಲ್ಲಿ ಬ್ರಹ್ಮಾ ಬಾಬಾರವರು ಸಲ್ಲಿಸಿದ ಸೇವೆ ಅಜರಾಮರ ಮಹಾತ್ಮರ ಸಂತರ ಶರಣರ ಸ್ಮರಣೆ ಮಾಡುವುದು ಪುಣ್ಯಮಯ ಕರ್ಯ ಬಾಬಾರವರ ಆರ್ಶಗಳನ್ನು ಎಲ್ಲರೂ ಪಾಲಿಸಿ ಬದುಕು ಹಸನಾಗಿಸಿ ಜೀವನ ಸರ್ಥಕ ಮಾಡಿಕೊಳ್ಳಬೇಕೆಂದು ನುಡಿದರು.

ಬ್ರಹ್ಮಕುಮಾರಿ ರಾಜಯೋಗಿನಿ ಬಿ ಕೆ ಪ್ರಭಾ ಕರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ನೇಗಿನಹಾಳ ಸಿದ್ಧಾರೂಢ ಮಠದ ಅದೃಶ್ಯಾನಂದ ಸ್ವಾಮಿಗಳು ವೇದಮರ್ತಿ ವೀರೇಶ ಸ್ವಾಮಿಗಳು, ಡಾ.ಮಹಾಂತೇಶ ಆರಾದ್ರಿಮಠ , ವಿಶ್ವನಾಥ ಹಿರೇಮಠ , ಡಾ.ಸಂಗಮೇಶ ಸವದತ್ತಿಮಠ ,ಸಿದ್ದರಾಮ ಶಾಸ್ತ್ರಿಗಳು ವೀರನಗೌಡ ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು.

ಬಸವರಾಜ ತಿಗಡಿ ಸ್ವಾಗತಿಸಿ ವಂದಿಸಿದರು , ನಂತರ ಎಲ್ಲರಿಗೂ ಮಹಾಪ್ರಸಾದ ಜರುಗಿತು ನಗರದ ಗಣ್ಯರು ಬ್ರಹ್ಮಕುಮಾರಿ ಕೇಂದ್ರದ ಸಹೋದರ ಸಹೋದರಿಯರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು