ಮುಗಳಖೋಡ ಗ್ರಾಮದ ವ್ಯಕ್ತಿ ನಾಪತ್ತೆ

ಬೆಳಗಾವಿ : ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ವ್ಯಕ್ತಿ ಪುರಂದರ ನಂದೆಪ್ಪ ಹುನ್ನೂರ(50) ಕಾಣೆಯಾಗಿರುತ್ತಾರೆ.
ಇವರು ಡಿಸೆಂಬರ.13, 2022 ರಂದು ಬೆಳಿಗ್ಗೆ 11. ಗಂಟೆಯ ಸುಮಾರಿಗೆ ಮನೆಯ ಕೀಲಿ ಹಾಕಿಕೊಂಡು ಮನೆಯಿಂದ ಹೋದವರು ಮರಳಿ ಮನೆಗೆ ಬರದೇ ಕಾಣೆಯಾಗಿದ್ದಾರೆ ಎಂದು ಇವರ ಮಗ ಹಣಮಂತ ಪುರಂದರ ಹುನ್ನೂರ ಇವರು ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ:
ಈ ವ್ಯಕ್ತಿಯ ಎತ್ತರ 5 ಪೂಟ 01 ಇಂಚು ಇದ್ದು, ಗೋಧಿ ಗೆಂಪು ಮೈ ಬಣ್ಣ, ಕೋಲು ಮುಖ, ಹೊಂದಿರುತ್ತಾರೆ. ತಲೆಯಲ್ಲಿ ಬಿಳಿ ಕೂದಲು ಇದ್ದು, ಕೆಂಪು ಬಣ್ಣದ ಚಕ್ಸ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾರೆ. ಹಾಗೂ ಕನ್ನಡ, ಭಾಷೆ ಮಾತನಾಡುತ್ತಾನೆ. ಬಲಗೈ ಪ್ಯಾರಲೆಸಸ್ [ಪಾಶ್ರ್ವವಾಯು] ಆಗಿ ಸ್ವಾಧೀನ ಕಳೆದುಕೊಂಡಿರುತ್ತದೆ.
ಸದರಿ ವ್ಯಕ್ತಿಯ ಮಾಹಿತಿ ದೊರಕಿದಲ್ಲಿ ಹಾರೂಗೇರಿ ಪೋಲಿಸ್ ಠಾಣೆಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ./////