Belagavi News In Kannada | News Belgaum

ಫೆ. 12 ರಂದು ಟ್ರಯಥ್ಲಾನ ಮತ್ತು ಡ್ಯುಯಥ್ಲಾನ್ ಸ್ಪರ್ಧೆ

ಬೆಳಗಾವಿ : ಬೆಳಗಾವಿಯ ಸೂಪರ್‍ಬಿಯಿಂಗ ಸ್ಪೋಟ್ರ್ಸ ಅಕಾಡೆಮಿ ಸಂಸ್ಥೆಯ ಆಶ್ರಯದಲ್ಲಿ ಹಾಗೂ ಟ್ರುಥಪ್ಲೋ ಎಜ್ಯುಕೇಶನ À ಟ್ರಸ್ಟ, ಬೆಲಗಾಂ ಪೆಡಲರ್ಸ್ ಕ್ಲಬ, ಬೆಲಗಾಂ ಅಕ್ವೆಟಿಕ್ ಕ್ಲಬ್, ಮತ್ತು ಅಜರೇಕರ ಫೌಂಡೇಶನ ಇವರ ಸಹಯೋದಲ್ಲಿ ಇದೇ ಫೆ 12 ರಂದು ಬೆಳಗಾವಿಯಲ್ಲಿ ಸೂಪರಬಿಯಿಂಗ್-2023 ಟ್ರಯಥ್ಲಾನ ಮತ್ತು ಡ್ಯುಯಥ್ಲಾನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದ ಡಾ. ಕಿರಣ ಖೋತ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಸಹ ಈ ಸ್ಫರ್ಧೆಯನ್ನು ಆಯೋಜಿಸಲಾಗಿದ್ದು ಈ ವರ್ಷ ಸ್ಫರ್ಧೆಯ 2 ನೇ ಆವೃತ್ತಿಯಾಗಿದೆ. ಈ ಸ್ಫರ್ಧೆಯಲ್ಲಿ ಬೆಳಗಾವಿ, ಸೇರಿದಂತೆ ಮಹಾರಾಷ್ಟ್ರ, ಗೋವಾ, ಕೇರಳ, ಗುಜರಾತ ಹಾಗೂ ದೇಶದ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸೂಪರ್‍ಬಿಯಿಂಗ ಸ್ಫರ್ಧೆಯು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಈ ಎರಡು ಸ್ಫರ್ಧೆಯಲ್ಲಿ ಓಡುವುದು, ಸೈಕ್ಲಿಂಗ್, ಸ್ವಿಮಿಂಗ್ ಸ್ಫರ್ಧೆಗಳು ನಡೆಯುತ್ತವೆ. ಈಜುಗಾರಿಕೆ ಸ್ಫರ್ಧೆಗಾಗಿ ಬೆಳಗಾವಿಯ ಕೋಟೆ ಕೆರೆಯನ್ನು ಬಳಸಲಾಗುತ್ತದೆ. ಕೊಟೆ ಕೆರೆಯ ಸುತ್ತುವರಿದ ಭಾಗದಲಿ ರನ್ನಿಂಗ ಮತ್ತು ಸೈಕ್ಲಿಂಗಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಲಾಗುತ್ತಿದೆ. ಇದಕ್ಕಾಗಿ ವಿಶೇಷ ತಯಾರಿಯನ್ನು ಸಹ ಮಾಡಿಕೊಳ್ಳಲಾಗಿದ್ದು, ಸ್ಫರ್ಧಾಳುಗಳಿಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸಲಾಗುವುದೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇನ್ನೋರ್ವ ಸಂಯೋಜಕ ಗಿರೀಶ ದಂಡನ್ನವರ ಅವರು, ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ ಸೂಪರಬಿಯಿಂಗ್ ಟ್ರಯಥ್ಲಾನ ಮತ್ತು ಡ್ಯುಯಥ್ಲಾನ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಬಾರಿಯೂ ಸಹ ಸುಮಾರು 200 ಕ್ಕೂ ಹೆಚ್ಚು ಸ್ಫರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ಕೆಲ ವಿದೇಶಿಯರು ಸಹ ಈ ವರ್ಷದ ಸ್ಫರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆವಿದೆ . ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆ 1 ರೊಳಗಾಗಿ ತಮ್ಮ ಹೆಸರು ನೋಂದಾಯಿಸಬೇಕು ಹೆಚ್ಚಿನ ಮಾಹಿತಿಗಾಗಿ 9980080420 ಇಲ್ಲಿ ಸಂಪರ್ಕಿಸಬಹುದು ಎಂದು ಅವರು ವಿವರಿಸಿದರು.
ಈ ಸ್ಪರ್ಧೆಯಲ್ಲಿ ಜಯ ಗಳಿಸಿದ ಸ್ಪರ್ಧಾಳುಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅದಲ್ಲದೇ ವಿವಿಧ ಹಂತದ ಸ್ಫರ್ಧೆಗಳಲ್ಲಿ ಜಯಗಳಿಸಿದವರಿಗೆ ವಿಶೇಕ ಕೊಡುಗೆಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸ್ಪರ್ಧೆಯ ಸಂಯೋಜಕರಾದ ಡಾ. ಕಿರಣ ಖೋತ, ಆಸ್ಕಿನ ಅಜರೇಕರ, ಸಾಯಿ ಜಾಧವ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.//////