Belagavi News In Kannada | News Belgaum

ಬಿಜೆಪಿ ಸುಳ್ಳು ಹೇಳುವ ಪಕ್ಷ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ರಾಯಚೂರು: ಬಿಜೆಪಿ ಸುಳ್ಳು ಹೇಳುವ ಪಕ್ಷ, ಇದರಲ್ಲಿ ಯಾವುದೇ ಗೊಂದಲ ಬೇಡ. ಒಂದಲ್ಲ, ಎರಡಲ್ಲ, ನೂರಾರು ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ  ವ್ಯಂಗ್ಯ ವಾಡಿದರು.

ಜಿಲ್ಲೆಯ ದೇವದುರ್ಗ ಹಾಗೂ ಅರಕೇರ ತಾಲೂಕು ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಗಲಗ-ಜಾಲಹಳ್ಳಿ ಹೋಬಳಿ ಮಟ್ಟದ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,  ಜನಕ್ಕೆ ನೀಡಿದ ಭರವಸೆಗಳನ್ನು ಈಡೇರಿಸದೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದಕ್ಕೆ ಅಷ್ಟೇ ಸೀಮಿತವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ ಪ್ರಧಾನಿ ಮೋದಿಯವರು ಎಂಟು ವರ್ಷದಲ್ಲಿ 2 ಲಕ್ಷ ಯುವಕರಿಗೆ ಉದ್ಯೋಗ ನೀಡಲು ಆಗಲಿಲ್ಲ. ಇನ್ನೂ ಬುಲೆಟ್‌  ಟ್ರೆನ್‌ ಯೋಜನೆ ಹೇಳಿಕೆಯಾಗಿಯೇ ಉಳಿದಿದೆ. ಹೀಗಾ ಸುಳ್ಳು ಹೇಳುವ ಪಕ್ಷವನ್ನು ಅಧಿಕಾರದಿಂದ

ದೂರ ಇಡಬೇಕೆಂದು ಕರೆ ನೀಡಿದರು.

 

ಅಚ್ಚೇ ದಿನ್‌ ಬಿಜೆಪಿಗೆ ಅಷ್ಟೇ ಬಂದಿದೆ. ಆದರೆ ಕಾಂಗ್ರೆಸ್‌ ನವರಿಗೆ, ಸಾಮಾನ್ಯ ಜನಕ್ಕೆ ಇದುವರೆಗೆ ಅಚ್ಚೇ ದಿನ್‌ ಬಂದಿಲ್ಲ. ಅಚ್ಚೇ ದಿನ್‌ ಬರಬೇಕಾದರೆ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಾದರೆ 120ಕ್ಕೂ ಹೆಚ್ಚು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ಆಯ್ಕೆ ಮಾಡಬೇಕೆಂದು ತಿಳಿಸಿದರು.

ದೀನ ದಲಿತರು, ಹಿಂದುಳಿದವರು, ಕಾರ್ಮಿಕರು, ರೈತರು ಸೇರಿದಂತೆ ಎಲ್ಲ ವರ್ಗದ ಜನ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಹಲವು ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಹೀಗಾಗಿ ನೀವು ಬೆಂಬಲ ನೀಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ. ನಾಯಕ, ಶಾಸಕ ಅಮರೇಗೌಡ ಬಯ್ಯಾಪುರ್‌ ಸೇರಿದಂತೆ ಅನೇಕ ಜಿಲ್ಲೆಯ ಮುಖಂಡರು ಇದ್ದರು./////