ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ ಸಬ್ ರಿಜಿಸ್ಟರ್

ಬೆಳಗಾವಿ: 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಚಿಕ್ಕೋಡಿ ಸಬ್ ರಿಜಿಸ್ಟರ್ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜೆ.ಪಿ. ಶಿವರಾಜು ಲೋಕಾಯುಕ್ತ ಬಲೆಗೆ ಬಿದ್ದ ಸಬ್ ರಿಜಿಸ್ಟರ್ ಅಧಿಕಾರಿ. ಲೋಕಾಯುಕ್ತ ಎಸ್.ಪಿ. ಯಶೋಧಾ ಒಂಟಗೋಡಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಜಮೀನು ಖಾತೆ ಬದಲಾವಣೆ ಮಾಡುವಾದಾಗಿ ರಾಜು ಎಂಬುವರ ಬಳಿ ಸಬ್ ರಿಜಿಸ್ಟರ್ ಶಿವರಾಜು 30 ಸಾವಿರ ರೂ. ಹಣಕ್ಕೆ ಬೇಡಿಕೆ ಎನ್ನಲಾಗಿದ್ದು, ಸದ್ಯ ಶಿವರಾಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರಾಜು ಎಂಬುವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಇವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಇಂದು ಲೋಕಾಯುಕ್ತ ಅಧಿಕಾರಿಗಳು ಚಿಕ್ಕೋಡಿ ಸಬ್ ರಿಜಿಸ್ಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.///////