Belagavi News In Kannada | News Belgaum

ಸವದತ್ತಿ ಯಲ್ಲಮ್ಮ ದೇವಿ ಹಾಗೂ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಹೆಚ್ಚುವರಿ ಬಸ್ ಸೌಲಭ್ಯ

ಬೆಳಗಾವಿ: ಫೆ. 2ರಿಂದ ಫೆ.8 ರವೆರೆಗೆ ನಡೆಯಲಿರುವ ಸವದತ್ತಿ ಯಲ್ಲಮ್ಮಾದೇವಿ ಜಾತ್ರೆ  ಹಾಗೂ ಫೆ. 4 ರಿಂದ 8 ರ ವರೆಗೆ ನಡೆಯಲಿರುವ ಚನ್ನಬಸವೇಶ್ವರ ಉಳವಿ ಜಾತ್ರೆ ಹಾಗೂ ಫೆ.5 ರಿಂದ 8ರ ವರೆಗೆ ನಡೆಯಲಿರುವ ಭಾವೇಶ್ವರಿ ದೇವಿ ಮೋಹನಗಾ ದಡ್ಡಿ ಜಾತ್ರೆ ಅಂಗವಾಗಿ ಬೆಳಗಾವಿ ಕೇಂದ್ರ/ನಗರ ಮತ್ತು ಬೈಲಹೊಂಗಲ ಬಸ್ ನಿಲ್ದಾಣಗಳಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಸಾರ್ವಜನಿಕ ಪ್ರಯಾಣ ಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಸದರಿ ಜಾತ್ರಾ ಅವಧಿಯಲ್ಲಿ ಬೆಳಗಾವಿ ಕೇಂದ್ರ/ನಗರ ಬಸ್ ನಿಲ್ದಾಣ, ಬೈಲಹೊಂಗಲ ಬಸ್ ನಿಲ್ದಾಣ, ಯಲ್ಲಮ್ಮನ ಗುಡ್ಡ, ಉಳವಿ, ಹಾಗೂ ದಡ್ಡಿಯಲ್ಲಿ ಜಾತ್ರಾ ಬಿಂದು ಸ್ಥಾಪಿಸಿ ಕೆ.ಎಸ್.ಟಿ ಪೇದೆ ರವರನ್ನು ನಿಯೋಜಿಸಿ, ವಾಹನಗಳ ಸುಗಮ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಪ್ರಯಾಣ ಕರು ತಂಡಗಳ ರೂಪದಲ್ಲಿ ಪ್ರಯಾಣ ಸಲು ಇಚ್ಚಿಸಿದಲ್ಲಿ, ಸಾಂಧರ್ಬಿಕ ಒಪ್ಪಂದದ ಮೇಲೆ ವಾಹನಗಳನ್ನು ಒದಗಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೋಬೈಲ ಸಂ-7760991625 (ಘ.ವ್ಯ ಬೆಳಗಾವಿ-1) & 7760991627(ಘ.ವ್ಯ ಬೆಳಗಾವಿ-3) ರವರನ್ನು ಸಂಪರ್ಕಿಸಬಹುದು ಎಂದು ವಾಕರಸಾಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿ ಇವರು ತಿಳಿಸಿದ್ದಾರೆ.//////