ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ

ಬೆಂಗಳೂರು: ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಪಟ್ಟಿ ಪ್ರಕಟಿಸಿದೆ. ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದ್ದು, ಅದರಲ್ಲಿ 19 ಪ್ರಶಸ್ತಿ ವಿಶಿಷ್ಟ ಸೇವೆ ಮತ್ತು 1 ಗಣನೀಯ ಸೇವೆಗೆ ಪ್ರಶಸ್ತಿ, 8 ಇತರ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ನೀಡಲಾಗುತ್ತದ್ದು, ಈ ಪದಕ ಎಡಿಜಿಪಿ ಶರತ್ ಚಂದ್ರ ಅವರಿಗೂ ಸಿಕ್ಕಿದೆ. ಇವರು ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸೇರಿದಂತೆ ಸಾಕಷ್ಟು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಇವರದ್ದು ಪ್ರಮುಖ ಪಾತ್ರವಿದೆ. ಹಾಗಾಗಿ ತಮ್ಮ ವೃತ್ತಿ ಜೀವನದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕರ್ನಾಟಕದ ಎಡಿಜಿಪಿ ಶರತ್ ಚಂದ್ರ ಅವರಿಗೆ ಈ ಬಾರಿಯ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗುತ್ತಿದೆ.
ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೋಲೀಸ್ ಸಿಬ್ಬಂದಿ ಹೆಸರು ಈ ಕೆಳಗಿನಂತಿವೆ.
ಕರ್ನಾಟಕದ ADGP ಶರತ್ ಚಂದ್ರ
ಲಾಂಬೂರಾಂ, ಸಿಜಿ, ಹುಬ್ಬಳ್ಳಿ
ನಾಗರಾಜು- ಡಿಎಸ್‌ಪಿ, ಬೆಂಗಳೂರು
ಪದ್ಮರಾಜಯ್ಯ ವೀರೇಂದ್ರ ಕುಮಾರ್- ಡಿಎಸ್‌ಪಿ ಬೆಂಗಳೂರು
ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ ಬೆಂಗಳೂರು
ಸಿದ್ದಲಿಂಗಪ್ಪ ಆರ್ ಪಾಟೀಲ್- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್- ಡಿಎಸ್‌ಪಿ ಬೆಂಗಳೂರು
ಹೆಚ್ ವಿಜಯ- ಡಿಎಸ್‌ಪಿ ಬೆಂಗಳಊರು
ಬಿ. ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್- ಬೆಂಗಳೂರು ಗ್ರಾಮಾಂತರ
ಗಣೇಶ್ ಜನಾರ್ಧನ ರಾವ್- ಇನ್ಸ್‌ಪೆಕ್ಟರ್- ಬೆಂಗಳೂರು
ಆರ್‌ಪಿ ಅನಿಲ್- ಸರ್ಕಲ್ ಇನ್ಸ್‌ಪೆಕ್ಟರ್- ಬೆಂಗಳೂರು
ಮನೋಜ್ ಹೊವಾಲೇ, ಇನ್ಸ್‌ಪೆಕ್ಟರ್- ಬೆಂಗಳೂರು
ಟಿಎ ನಾರಾಯಣ ರಾವ್- ಸ್ಪೆಷಲ್ ARSI, KSRP ಬೆಂಗಳೂರು
ವೆಂಕಟರಮಣಗೌಡ- ARSI, KSRP ಬೆಂಗಳೂರು
ಎಸ್ ಎಂ ಪಾಟೀಲ್- ARSI, KSRP ಬೆಂಗಳೂರು
ಕೆ. ಪ್ರಸನ್ನಕುಮಾರ್- Head Constable, ಬೆಂಗಳೂರು
ಪ್ರಭಾಕರ ಹೆಚ್- Head Constable, ಬೆಂಗಳೂರು
ಬಿಟಿ ವರದರಾಜ- ರಿಸರ್ವ ಪೊಲೀಸ್ Inspector- ಬೆಂಗಳೂರು
ಡಿ. ಸುಧಾ- WHC, SCRB, ಬೆಂಗಳೂರು
ಟಿಆರ್ ರವಿಕುಮಾರ್- CHC, City Control Room ಬೆಂಗಳೂರು