Belagavi News In Kannada | News Belgaum

ಆರ್ಮಿ ಕಮಾಂಡೋ ಜೆ ,,ಎಲ್,, ವಿಂಗ್ ಕ್ಯಾಂಪ್ ಬೆಳಗಾವಿ ಯಲ್ಲಿ ಕೆ ಎಲ್ ಇ ಸಂಗೀತ ಮಹಾವಿದ್ಯಾಲಯ ದಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ.

 

ಬೆಳಗಾವಿ ;ದಿನಾಂಕ 24 ಜನವರಿ ಂದು ಗಣರಾಜ್ಯೋತ್ಸವದ ಅಂಗವಾಗಿ ಬೆಳಗಾವಿ ಕ್ಯಾಂಪಿನಲ್ಲಿರುವ ಆರ್ಮಿ ಕಮಾಂಡರ್ ವಿಂಗ್ ನಲ್ಲಿ
ಕೆ,ಎಲ್,ಇ ಸಂಗೀತ ಮಹಾವಿದ್ಯಾಲಯದ ದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ದೇಶಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮವು ಸುಮಾರು ಒಂದುವರೆ ಗಂಟೆಗಳ ಕಾಲದವರೆಗೆ ನಡೆದು, ಅತ್ಯಂತ ಶುಶ್ರಾವ್ಯವಾಗಿ ಮೂಡಿಬಂದಿತು. ಆರ್ಮಿ ಅಧಿಕಾರಿಗಳ ಹಾಗೂ ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕೆಎಲ್ಇ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ದೇಶಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮವು,, ಎಲ್ಲ ಆರ್ಮಿ ಪದಾಧಿಕಾರಿಗಳ ಉಪಸ್ಥಿತರಿದ್ದ ಎಲ್ಲ ಗಣ್ಯ ಮಾನ್ಯರನ್ನು ಮಂತ್ರಮುಕ್ತರನ್ನಾಗಿ ಮಾಡಿದರು ಹಾಗೂ ಅವರ ಮೆಚ್ಚುಗೆಗೆ ಪಾತ್ರರಾದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜನರಲ್ ಆರ್, ಎಸ್, ಗುರಯ್ಶಾ (ವಿ .ಎಸ್. ಎಮ್. )ಹಾಗೂ ಅವರ ಧರ್ಮಪತ್ನಿ ,,ಹಾಗೂ ಕರ್ನಲ್ ಮನೋಜ ಶರ್ಮಾ,,ಹಾಗೂ ಎಲ್ಲ ಆರ್ಮಿ ಅಧಿಕಾರಿಗಳು ಉಪಸ್ಥಿತರಿದ್ದರು. ಜನರಲ್ ಆರ್ ,ಎಸ್, ಗುರಯ್ಯ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರಪ್ರಥಮ ಬಾರಿಗೆ ಇಂಥ ಒಳ್ಳೆಯ ಕಾರ್ಯಕ್ರಮ ನಮ್ಮ ಆರ್ಮಿ ಕಮಾಂಡೋವಿಂಗ್ ದಲ್ಲಿ ಜರುಗಿದ್ದು ಹಾಗೂ ದೇಶಭಕ್ತಿ ಗೀತೆಗಳನ್ನು ಅತ್ಯಂತ ಸುಶಾವ್ಯವಾಗಿ ಪ್ರಸ್ತುತಪಡಿಸಿದ್ದಾರೆ ,,, ಪ್ರಸ್ತುತ ನಾವೆಲ್ಲ ಆರ್ಮಿ ಪದಾಧಿಕಾರಿಗಳು ದೇಶದ ಸಲುವಾಗಿ ದುಡಿಯುತ್ತಿದ್ದು,, ಈ ಕಾರ್ಯಕ್ರಮದಿಂದ ಮತ್ತಷ್ಟು
ನಮ್ಮನ್ನೆಲ್ಲಾ ದೇಶದ ಬಗ್ಗೆ ಇನ್ನೂ ಹೆಚ್ಚಿಗೆ ಹೆಮ್ಮೆ ಹಾಗೂ ಗೌರವ ಮೂಡಿಸುವಂತೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರಾದ ಡಾ. ಸುನಿತಾ ಪಾಟೀಲ್ ,ಡಾಕ್ಟರ್ ದುರ್ಗಾ ನಾಡಕರಣಿ,, ಉಪಸ್ಥಿತರಿದ್ದರು.ಕ್ಯಾಶ್ಯೋ ಸಾಥಿ ಯಾದವರೇಂದ್ರ ಪೂಜಾರಿ, ತಬಲಾಸಾತಿ ರಾಹುಲ್ ಮಂಡೂಲ್ಕರ್, ಆಕ್ಟೋಪ್ಯಾಡ್ ಸಾಥ ಶ್ರೀವತ್ಸ ಹುದ್ದಾರ್ ಮಾಡಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸ್ವಾತಿ ಹುದ್ಧಾರ ಮಾಡಿದರು.