Belagavi News In Kannada | News Belgaum

ಬಿಜೆಪಿ ಪಕ್ಷ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಬೈಲಹೊಂಗಲ: ದೇಶದಲ್ಲಿ ಬಿಜೆಪಿಯಲ್ಲಿ ಕಾರ್ಯಕರ್ತರ ಅವಿರತ ಪರಿಶ್ರಮದಿಂದ ಇಂದು ವಿಶ್ವದಲ್ಲಿ ಬಿಜೆಪಿ ಪಕ್ಷ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಅವರು ಪಟ್ಟಣದ ಗಣಾಚಾರಿ ಸಭಾಭವನದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕರಪತ್ರ ಹಂಚುವದು, ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆಯಬೇಕು, ಪಲಾನುಭವಿಗಳ ಬೇಟಿ ಮಾಡುವದು ಗೋಡೆ ಬರಹ ಬರೆಸಬೇಕು.

ಈ ನಿಟ್ಟಿನಲ್ಲಿ ಚುನಾವಣಾ ಚಾಣಕ್ಯ ಅಮಿತ  ಅವರು ಬೆಟ್ಟಿಯಾಗಲು ಜ28 ರಂದು ಎಮ.ಕೆ.ಹುಬ್ಬಳ್ಳಿಗೆ ಆಗಮಿಸುತ್ತಿರುವ ಕಾರ್ಯಕ್ರಮಕ್ಕೆ ಮತಕ್ಷೇತ್ರದಿಂದ ಸ್ವಯಂ ಸ್ಪೂರ್ತಿಯಾಗಿ 25ಸಾವಿರ ಕಾರ್ಯಕರ್ತರು ಆಗಮಿಸಬೇಕು, ಈ ಸಭೆಗೆ ಲಕ್ಷ ಜನ ಅಗಮಿಸುವ ನಿರೀಕ್ಷೆ ಇದ್ದು 2 ಘಂಟೆಯೊಳಗೆ ಸಭೆಯ ಸ್ಥಳ ತಲುಪಬೇಕು, ಅಲ್ಲಿ ಊಟ, ಕುಡಿಯುವ ನೀರು, ಆಸನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕ್ಷೇತ್ರದ ಸಕ್ರೀಯ ಕಾರ್ಯಕರ್ತರು ಮುತವರ್ಜಿವಹಿಸಬೇಕು.

ರಾಜ್ಯದಲ್ಲಿ 1 ಕೋಟಿ ನೂತನ ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದ್ದು ಬರುವ ವಿಧಾನಸಭೆಯ ಚುನಾವಣೆಯ ತಯಾರಿಗೆ ನಾವೆಲ್ಲ ಸನ್ನದ್ದರಾಗಬೇಕು ಎಂದರು.
ಜಿಲ್ಲಾ ಆಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಬೈಲಹೊಂಗಲ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ತಂತ್ರ ದೆಹಲಿಯ ನಾಯಕರು ಯೋಚಿಸುವಾಗ ನಾವು ಕಾರ್ಯಕರ್ತರು ವಿಶ್ರಮಿಸದೆ ಶ್ರಮವಹಿಸಬೇಕು. ಇಲ್ಲಿ ಶಾಸಕರಾಗುವದು ದೊಡ್ಡದಲ್ಲ ದೇಶದ ಸುಭದ್ರತೆಗಾಗಿ ಬಿಜೆಪಿಯಲ್ಲಿ ಸೇವೆ ಮಾಡುವದರೊಂದಿಗೆ ಬಿಜೆಪಿ ಶಾಸಕರನ್ನ ಅಯ್ಕೆ ಮಾಡುವದು ಕಾರ್ಯಕರ್ತರ ಆಧ್ಯತೆಯಾಗಬೇಕು.

ವಿನಃ ವ್ಯಕ್ತಿಗತ ವಿಚಾರ ಬೇಡ ಕ್ಷೇತ್ರದಲ್ಲಿ ಜಗದೀಶ್ ಮೆಟಗುಡ್ ಅಥವಾ ವಿ.ಆಯ್ ಪಾಟೀಲ ಅವರಿಗೆ ಇವರನ್ನ ಇಬ್ಬರನ್ನು ಬಿಟ್ಟು ಬೇರಯವರಿಗೆ ಟಿಕೆಟ್ ನೀಡಿದರು ಬಿಜೆಪಿ ಗೆಲ್ಲಿಸಲು ಪಣ ತೊಡಬೇಕು ಇದು ಬಿಜೆಪಿಯ ಪಕ್ಷದ ಕಾರ್ಯಕರ್ತರ ನಿಲುವಾಗಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನುವುದನ್ನು ಅರಿತು ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಪತಾಕಿ ಹಾರೊವದು ಖಂಡಿತ ಎಂದರು.
ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಎಫ್.ಎಸ್.ಸಿದ್ದನಗೌಡರ ಮಾತನಾಡಿದರು.

ವೇದಿಕೆಯ ಮೇಲೆ ಜಯಪ್ರಕಾಶ್ ಎಮ್.ಸಿ. ಸುಭಾಶ ಪಾಟೀಲ, ಸಂದೀಪ ದೇಶಪಾಂಡೆ, ರತ್ನಾ ಗೋಧಿ, ಗುರು ಮೆಟಗುಡ್ಡ, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ, ನಿಂಗಪ್ಪ ಚೌಡನ್ನವರ, ಮಹೇಶ ಮನ್ನೂರ ಇದ್ದರು.

ಮಹೇಶ ಹರಕುಣಿ, ಜಗದೀಶ್ ಬೂದಿಹಾಳ, ಲಕ್ಕಪ್ಪ ಕಾರ್ಗಿ, ಮಲ್ಲಿಕಾರ್ಜುನ ದೇಸಾಯಿ, ಸಚಿನ ಪಟಾತ, ರಾಚಪ್ಪ ಮಟ್ಟಿ, ಮೋಹನ ವಕ್ಕುಂದ, ಮಡಿವಾಳಪ್ಪ ಹೋಟಿ, ಗೌಡಪ್ಪ ಹೊಸಮನಿ, ಉಮೇಶ ಲಾಳ, ಸುರೇಶ ಮ್ಯಾಕಲ್, ರಮೇಶ ಯಲ್ಲಪ್ಪಗೌಡರ, ಸಂಜಯ ಗಿರೆಪ್ಪಗೌಡರ, ಬಿ.ಬಿ.ಸಂಗನಗೌಡರ, ಶಂಕರ ಚವಡಣ್ಣವರ,ಕುಮಾರ ಅಂಗಡಿ, ಆಯ್.ಎಲ್.ಪಾಟೀಲ, ಪ್ರಶಾಂತ ಅಮ್ಮಿನಭಾವಿ, ನಾಗಪ್ಪ ಗುಂಡ್ಲೂರ, ಮಾರುತಿ ತಿಗಡಿ ಮುಂತಾದವರು ಪಾಲ್ಗೊಂಡಿದ್ದರು.
ಕುಮಾರ ಬೋರಕನವರ ಸ್ವಾಗತಿಸಿದರು. ವಕೀಲ ದುಂಡೇಶ ಗರಗದ ನಿರೂಪಿಸಿ ವಂದಿಸಿದರು.