Belagavi News In Kannada | News Belgaum

ಕರೋಶಿ ಗ್ರಾಮದಲ್ಲಿ 6 ಮನೆಗಳ್ಳತನ: 13 ಲಕ್ಷಕ್ಕೂ ಅಧಿಕ ಚಿನ್ನ ಹಾಗೂ ಹಣವನ್ನು ದೋಚಿ‌ ಪರಾರಿಯಾದ ಕಳ್ಳರು

ಕರೋಶಿ ಗ್ರಾಮದಲ್ಲಿ 6 ಮನೆಗಳ್ಳತನ: 13 ಲಕ್ಷಕ್ಕೂ ಅಧಿಕ ಚಿನ್ನ ಹಾಗೂ ಹಣವನ್ನು ದೋಚಿ‌ ಪರಾರಿಯಾದ ಕಳ್ಳರು…ಕರೋಶಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ 6 ಮನೆಗಳಲ್ಲಿ ಕಳ್ಳತನ ಮಾಡಿ, 13 ಲಕ್ಷಕ್ಕೂ ಅಧಿಕ ಚಿನ್ನಾಭರಣ ಹಾಗೂ ಹಣ ದೋಚಿರುವ ಘಟನೆ ಇವತ್ತು ನಸುಕಿನ ಜಾವ ನಡೆದಿದೆ.
ಕಳ್ಳರು‌ ಕರೋಶಿ ಗ್ರಾಮದ ವಿಶಾಲ ಪಾಂಡರೆ ಎಂಬುವವರ ಮನೆಗೆ ನುಗ್ಗಿದ ಖದೀಮರು 7 ಲಕ್ಷ ರೂಪಾಯಿ ಹಾಗೂ 12 ತೊಲ ಚಿನ್ನಾಭರಣ, ಕ್ಷೀರಸಾಗರ ಅವರ ಮನೆ ಒಡೆದು 12 ಸಾವಿರ ರೂಪಾಯಿ ಹಾಗೂ ಅರ್ಧ ತೊಲ ಚಿನ್ನಾಭರಣ ಹಾಗೂ ಈಸೂಫ್ ಪಟೇಲ್ ಅವರ ಅಂಗಡಿ ಮುರಿದು 8 ಸಾವಿರ ರೂ., ತಾನಾಜಿ ಬಾಮನೆ, ಅಶೋಕ್ ಬಾಮನೆ, ಬಾಳು ಗೊರೆ ಅವರ ಮನೆಗೆ ಕನ್ನ ಹಾಕಿದ್ದಾರೆ.ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಿಸಿಟಿವಿಯಲ್ಲಿ ಎರಡು ಕೆಟಿಎಂ ಬೈಕ್‌ಗಳಲ್ಲಿ 6 ಮಂದಿ ಕಾಣಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.