Belagavi News In Kannada | News Belgaum

ಮಹಾನಗರ ಪಾಲಿಕೆಯಲ್ಲಿ 74ನೆಯ ಗಣರಾಜ್ಯೋತ್ಸವ ಆಚರಣೆ…

ಬೆಳಗಾವಿ : ಗುರುವಾರ ಬೆಳಿಗ್ಗೆ 7-45 ರ ಸುಮಾರಿಗೆ ಬೆಳಗಾವಿಯ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ 74 ನೆಯ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು…

ರಾಷ್ಟ್ರಭಕ್ತಿ ಮೂಡಿಸುವಂತೆ ವಿಶೇಷವಾಗಿ ಅಲಂಕೃತವಾದ ಪಾಲಿಕೆಯ ಕಚೇರಿಯು ಎಲ್ಲರನ್ನೂ ಆಕರ್ಷಿಸುವಂತೆ ಕಂಗೊಳಿಸುತ್ತಿತ್ತು..

ಪಾಲಿಕೆಯ ಎಲ್ಲಾ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಿದ್ದು ದ್ವಜಾರೋಹಣಕ್ಕೆ ಸಕಲ ಸಿದ್ಧತೆ ಮಾಡಿಕೊಡಿದ್ದು, ಧ್ವಜಾರೋಹನಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಸರಿಯಾದ ಸಮಯಕ್ಕೆ ಆಗಮಿಸಿ, ಧ್ವಜಾರೋಹಣ ನೆರವೇರಿಸಿದರು…

 

ನಂತರ ಪಾಲಿಕೆ ಆವರಣದಲ್ಲಿ ಇರುವ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಯ ಕಡೆಗೆ ಗಣ್ಯರೆಲ್ಲರು ಸಾಗಿ, ದೀಪ ಬೆಳಗಿಸಿ, ಪುಷ್ಪ ನಮನ ಮಾಡಿದರು…

ಈ ವೇಳೆ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ, ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಕಂದಾಯ ಅಧಿಕಾರಿಯಾದ ಪ್ರಶಾಂತ ಹಣಗಂಡಿ, ಆರೋಗ್ಯ ಅಧಿಕಾರಿ ಸಂಜಯ ಡುಮ್ಮಗೊಳ, ರವಿ ಮಾಸ್ತಿಹೊಳಿಮಠ, ಮಂಜುಶ್ರೀ, ಹಾಗೂ ಪಾಲಿಕೆಯ ಇತರ ಸಿಬ್ಬಂದಿಗಳು ಹಾಜರಿದ್ದರು..