ಹಾಡುಹಗಲೇ ಅಜ್ಜಿಯ ಕತ್ತುಹಿಚುಕಿ ಮಾಂಗಲ್ಯ ಸರ್ ಕದ್ದ ಖದೀಮರು

ಕಣಗಲಾ:ಹಾಡುಹಗಲೇ ಅಜ್ಜಿಯ ಕತ್ತುಹಿಚುಕಿ ಮಾಂಗಲ್ಯ ಸರ್ ಕದ್ದ ಖದೀಮರು ಪರಾರಿ.ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಹೆದ್ದಾರಿಯೊಂದರಲ್ಲಿ ಚೇನ ಸ್ನ್ಯಾಚರ್ ಖದೀಮರು ಅಜ್ಜಿಯ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ. ಎಂದು ಲಗಮವ್ವಾ ರಾವಸಾಹೇಬ ಕಾಂಬಳೆ ಅಜ್ಜಿ ಹೇಳಿದ್ದಾಳೆ ಮೂಲತಃ ಹುಕ್ಕೇರಿ ತಾಲೂಕಿನ ಕೊಣಕೇರಿ ಗ್ರಾಮದ ಅಜ್ಜಿ ಪ್ರತಿ ಶನಿವಾರ ಸೀಮೆ ಲಕ್ಕವ್ವಾ ದೇವರಿಗೆ ಹೊಗುವ ಅಜ್ಜಿಗೆ ಇಂದು ಕಿರಾತಕ ಕಳ್ಳರು ಅಜ್ಜಿಗೆ ಮಾತನಾಡಿಸಿ ಇಲ್ಲಿ ಕೋಳಿ ಪಾರ್ಮ ಎಲ್ಲಿದೆ ಎಂದು ಕೇಳುತ್ತಾ ನೆಪ ಮಾಡಿ ಅಜ್ಜಿಯ ಕುತ್ತಿಗೆಗೆ ಕೈಹಾಕಿ ಹೊಡಿ ಬಡಿ ಮಾಡಿ ಬಂಗಾರದ ಮಾಂಗಲ್ಯ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಇನ್ನೂ ಮಾಂಗಲ್ಯ ಸರ ಅರ್ದ ತೊಲೆ ಬಂಗಾರ ಕಳುವು ಮಾಡಿಕೊಂಡು ಹೊಡಿ ಬಡಿ ಮಾಡಿ ಹೋಗಿದ್ದಾರೆಂದು ಅಜ್ಜಿ ಮಾದ್ಯಮದ ಮುಂದೆ ಅಳಲು ತೊಡಿಕೊಂಡಿದ್ದಾಳೆ. ಇನ್ನೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ ದೂರು ದಾಖಲಾಗಿಲ್ಲ.