ಸಕಲ ಜೀವರಾಶಿಯ ಮೂಲ ಆಧಾರವೇ ಸೂರ್ಯ-ಸುರೇಶಯಾದವ

ಬೆಳಗಾವಿ “ಭಾರತೀಯರು ಅನಾದಿ ಕಾಲದಿಂದಲೂ ಖಗೋಳ ಶಾಸ್ತ್ರದಜ್ಞಾನ ಹೊಂದಿದ್ದರುಎನ್ನುವುದಕ್ಕೆಇಂದುಆಚರಿಸುತ್ತಿರುವರಥಸಪ್ತಮಿಯಾಗಿದೆ. ಭೂಮಿಯ ಮೇಲೆ ವಿವಿಧ ಜೀವರಾಶಿಗಳು ಉದಯಿಸಿ ಪ್ರವರ್ಧಮಾನಕ್ಕೆ ಬರಲು ಮೂಲಶಕ್ತಿಯಾದ ಸೂರ್ಯದೇವನನ್ನುಆರಾಧಿಸುವ ಹಬ್ಬವೇರಥಸಪ್ತಮಿ” ಎಂದು ಸುರೇಶಯಾದವ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಸುರೇಶಯಾದವಅಭಿಪ್ರಾಯ ಪಟ್ಟರು.
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಶ್ರೀಯೋಗ ಹಾಗೂ ಹೆಲ್ತ್-ಕೇರ್ ಸೆಂಟರ್ ಆಯೋಜಿಸಿದ್ದ ರಥಸಪ್ತಮಿ ನಿಮಿತ್ಯ ಸೂರ್ಯನಮಸ್ಕಾರಾಸನಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಅವರು, ” ಮಕರ ಸಂಕ್ರಮಣ ಘಟಿಸಿದ ನಂತರ ಸೂರ್ಯ ಭೂಮಿಯದಕ್ಷಿಣಧ್ರುವತಲುಪಿ ತನ್ನ ಪಥ ಬದಲಿಸಲು ಅಂದಾಜು ಹನ್ನೆರಡರಿಂದ ಹದಿನೈದು ದಿನ ತೆಗೆದುಕೊಳ್ಳುತ್ತಾನೆ.
ಉತ್ತರಾಯಣದಕಾಲದಲ್ಲಿ ನಮ್ಮ ನೆಲದಲ್ಲಿ ಹೊಸ ಕಳೆ ಬಂದು ಬಿಸಿಲಿದ್ದರೂ ಪರಿಸರ ಹಚ್ಚ ಹಸಿರಾಗುತ್ತಾ ಸಾಗುತ್ತದೆ. ಹೀಗಾಗಿ ನಮ್ಮಜೀವನ ಹಾಗೂ ಪರಿಸರ ಸೂರ್ಯನ ಚಲನೆಯನ್ನು ಆಧರಿಸಿ ಸಾಗುತ್ತದೆ. ಯೋಗದೊಂದಿಗೆ ಸೂರ್ಯ ನೇರ ಸಂಬಂಧ ಹೊಂದಿದ್ದು ನಮ್ಮಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿರಥಸಪ್ತಮಿ ಕೇವಲ ಪೂಜೆಗೆ ಸೀಮಿತವಾಗದೆ ಮೂಲ ಉದ್ದೇಶಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದರು.
ಯೋಗಗುರುರಾಜುದೊಡ್ಡಮನಿ ಸೂರ್ಯ ನಮಸ್ಕಾರದ ಮಹತ್ವ ಹೇಳಿದರು.
ಶ್ರೀಯೋಗ ಹಾಗೂ ಹೆಲ್ತ್-ಕೇರ್ ಸೆಂಟರ್ ಪ್ರಿನ್ಸಿಪಾಲೆ ಸಂಧ್ಯಾತಿಮ್ಮಾಪುರ, ಮಾಜಿ ನಗರ ಸೇವಕಿ ಪುμÁ್ಪ ಪಾರ್ವತರಾವ್, ಕಮರ್ಸಿಯಲ್ ಟ್ಯಾಕ್ಸ್ ಅಸಿಸ್ಟಂಟ್ ಕಮಿಷನರ್ ಮಲ್ಲೇಶಪ್ಪ ಹುಣಕುಂಟಿ, ಸಹಾಯಕಕಾರ್ಯ ನಿರ್ವಾಹಕಅಭಿಯಂತರ ಶಾಂತಾರಾಮಎಂಟೆತ್ತಿನವರ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ವ್ಯವಸ್ಥಾಪಕ ಬಸವರಾಜಚನ್ನಯ್ಯನವರ ಸ್ವಾಗತಿಸಿದರು. ವಕೀಲ ಗುರುನಾಥಕೋರಿಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.