ಎರಡು ಫೈಟರ್ ಜೆಟ್ಗಳ ಡಿಕ್ಕಿ: ಬೆಳಗಾವಿ ಮೂಲದ ಯೋಧ ಹುತಾತ್ಮ

ಬೆಳಗಾವಿ: ಸೇನೆಯ ವಾಯು ವಿಮಾನಗಳಾದ ಸುಖೋಯ್-30 ಮತ್ತು ಮಿರಾಜ್ 2000 ಮಧ್ಯೆ ಡಿಕ್ಕಿ ಹೊಡೆದು ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಇಂದು(ಜ. 28) ಬೆಳಿಗ್ಗೆ 5:30ಕ್ಕೆ ಪತನಗೊಂಡಿವೆ. ಘಟನೆಯಲ್ಲಿ ಇಬ್ಬರು ಪೈಲಟ್ ಪೈಕಿ ಒಬ್ಬ ಪೈಲಟ್ ಹುತಾತ್ಮ ಆಗಿದ್ದಾರೆ. ಆ ಹುತಾತ್ಮ ಯೋಧ ಮೂಲತಃ ಬೆಳಗಾವಿಯ ಗಣೇಶಪುರದ ನಿವಾಸಿ ವಿಂಗ್ ಕಮಾಂಡರ್ ಹನುಮಂತರಾವ್ ಆರ್.ಸಾರಥಿ.
ಯೋಧ ಹನುಮಂತರಾವ್ ಯೋಧ ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹನುಮಂತರಾವ್ ನಿವಾಸಕ್ಕೆ ವಾಯುಸೇನೆ ತರಬೇತಿ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಣೇಶಪುರದ ಸಂಭಾಜೀ ನಗರದ ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ನಿವಾಸಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿಂಗ್ ಕಮಾಂಡರ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಹಿನ್ನೆಲೆ: ಗ್ವಾಲಿಯರ್ ವಾಯುನೆಲೆಯಿಂದ ಯುದ್ಧವಿಮಾನಗಳು ಟೇಕಾಫ್ ಆಗಿದ್ದವು, ವಿಮಾನ ಹಾರಾಟ ಆರಂಭಿಸಿದ 10 ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಖೋಯ್ ಸು -30 ಮತ್ತು ಮಿರಾಜ್ 2000 ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಪತನಗೊಂಡ ನಂತರ ಭಾರತೀಯ ವಾಯುಪಡೆಯ ಪೈಲಟ್ ಸಾವನ್ನಪ್ಪಿದ್ದಾರೆ. Su-30 ನಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಿರಾಜ್‌ನಲ್ಲಿನ ಪೈಲಟ್ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಪತನಗೊಂಡ ವಿಮಾನದ ಅವಶೇಷಗಳು ರಾಜಸ್ಥಾನದ ಭರತ್‌ಪುರ ಮತ್ತು ಮಧ್ಯಪ್ರದೇಶದ ಮೊರೆನಾದಲ್ಲಿ ಪತ್ತೆಯಾಗಿವೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಎರಡು ಯುದ್ಧ ವಿಮಾನಗಳ ನಡುವೆ ವಾಯು ಘರ್ಷಣೆ ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ಐಎಎಫ್ ತನಿಖಾ ನ್ಯಾಯಾಲಯಕ್ಕೆ ಆದೇಶಿಸಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷಗಳ ಉಂಟಾಗಬಾರದು ಎಂದು ಎರಡು ವಿಮಾನಗಳು ತಾಲೀಮು ನಡೆಸಿದೆ ಎಂದು ಹೇಳಿದೆ. ಆದರೆ ಇದೀಗ ತಾಂತ್ರಿಕ ದೋಷ ಕಂಡು ಬಂದಿರಬಹುದು ಎಂದು ಹೇಳಲಾಗಿದೆ. ಸುಖೋಯ್-30 ಯುದ್ಧವಿಮಾನದ ಪೈಲಟ್ನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆ ಸಾಗಿಸಲಾಗಿದೆ.//////