Belagavi News In Kannada | News Belgaum

ಯುವಕ ಕೈಹಿಡಿದು ಎಳೆದನೆಂದು ಯುವತಿ ಆತ್ಮಹತ್ಯೆಗೆ ಶರಣು

ಅಥಣಿ: ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆಂದು ಮನನೊಂದ ಯುವತಿ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.

ಸಂಕೋನಟ್ಟಿ ಗ್ರಾಮದ ಸ್ವಪ್ನಾ ಸುಭಾಷ ಹಿಪ್ಪರಗಿ (19) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಂಕೋನಟ್ಟಿ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡರ ಆಕೆಯ ಕೈ ಹಿಡಿದು ಎಳೆದಾಡಿದ ಯುವಕ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸುನೀಲ ಧರಿಗೌಡರ ಜತೆ ಸ್ವಪ್ನಾಳನ್ನು ವಿವಾಹ ಮಾಡಿಕೊಡಿ ಎಂದು ಸುನೀಲ ತಂದೆ-ತಾಯಿ ಈಚೆಗೆ ಯುವತಿಯ ಮನೆಗೆ ಬಂದು ಕೇಳಿದ್ದರು. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ತಂದೆ ಸುಭಾಷ ಹೇಳಿದ್ದರು. ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲನು ಸ್ವಪ್ನಾಳ ಕೈ ಹಿಡಿದು ಎಳೆದಿದ್ದ. ಇದರಿಂದ ಮನನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////