ಡಿಕೆಶಿ ರಾಜಕಾರಣಿಯಾಗಲು ನಾಲಾಯಕ್, ಅವಳೊಬ್ಬಳು ವಿಷಕನ್ಯೆ ? ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಇದೊಂದು ವೈಯಕ್ತಿಕ ಯುದ್ಧ

ಬೆಳಗಾವಿ : ಸಿಡಿಯಲ್ಲಿರುವ ಹುಡುಗಿಯನ್ನ, ಡಿಕೆಶಿ ಸೇರಿದಂತೆ ಕನಕಪುರದ ಗ್ರಾನೈಟ್ ವ್ಯಾಪಾರಿ ಸೇರಿದಂತರೆ ನನ್ನ ವಿರುದ್ದ ಆರೋಪ ಮಾಡಿರುವ ಮೈಸೂರು ಮೂಲದ ಇಬ್ಬರು ಶಾಸಕರನ್ನು ಬಂಧಿಸಿ, ಈ ಕೇಸ್ ನ್ನು ಸಂಬಂಧ ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು.
ಈ ವಿಡಿಯೋ ಪೂರ್ಣ ಗಮನಿಸಿ ರಮೇಶ್ ಜಾರಕಿಹೊಳಿ, ಏನನ್ನ ಹೇಳಿದ್ದಾರೆ ನೀವೇ ಕೇಳಿ
ಇದೊಂದು ವೈಯಕ್ತಿಕ ಯುದ್ಧ: ಬೆಳಗಾವಿ ಖಾಸಗಿಹೋಟೆಲ್ ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವಿನ ಸಂಬಂಧ ಹಾಳಾಗಲು ಆ ಶಾಸಕಿಯೇ ಕಾರಣ. ಮಹಿಳೆಯ ಮೂಲಕ ಡಿ.ಕೆ. ಶಿವಕುಮಾರ್ ತೇಜೋವಧೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಯುದ್ಧ. ಡಿಕೆಶಿ ರಾಜಕಾರಣಿಯಾಗಲು ನಾಲಾಯಕ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಅವರು ನನ್ನ ಬಳಿ 120 ಸಿಡಿಗಳಿವೆ, ಎಲ್ಲವನ್ನು CBI ಗೆ ನೀಡುವೆ . 1985ರಲ್ಲಿ ಶಿವಕುಮಾರ್ ಅವರು ಚಪ್ಪಲಿ ಹಾಕೊಂಡು ಇದ್ದರು. ನಾನು ಆ ವೇಳೇಯಲ್ಲೆಯಲ್ಲಿ ರ್ಯಾಡೋ ವಾಚ್ ಮತ್ತು ಟೀ ಶರ್ಟ್ ಹಾಕೊಂಡು ಇದ್ದೆ. ಸಿಡಿಗೆ ಸಂಬಂಧಪಟ್ಟಂತೆ ಶ್ರವಣ್ ಮತ್ತು ನರೇಶ್ ಅವರನ್ನು ಕೂಡಲೇ ಬಂಧಿಸಬೇಕು ಅಂತ ಹೇಳಿದರು. ಇನ್ನೂ ಡಿಕೆಶಿ ಒಬ್ಬ ಜಂಗ್ಲಿ ಮನುಶ್ಯ ಅಂತ ವ್ಯಂಗ್ಯವಾಡಿದರು.
ಗ್ರಾಮೀಣ ಶಾಸಕಿಯಿಂದ ನಮ್ಮಿಬ್ಬರ ಸಂಬಂಧ ಹಳಸಲು
ನಾನು ಡಿಕೆಶಿ ಅಣ್ಣ ತಮ್ಮಂದಿರ ಹಾಗೇ ಇದ್ದೇವೆ, ನಮ್ಮಿಬ್ಬರ ಸಂಬಂಧ ಹಳಸಲು ಗ್ರಾಮೀಣ ಶಾಸಕಿ ಕಾರಣ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರನ್ನು ಹೇಳದೇ ಕಿಡಿಕಾರಿದರು.
ನನ್ನ ಹೇಳಿಕೆಯನ್ನು ತಿರುಚಿ ಆಡಿಯೋವೊಂದನ್ನು ವೈರಲ್ ಆಗಿದ್ದು, ನಾಳೆ ಏನು ಆದ್ರು ಜಾತಿ ಸಂಘರ್ಷಕ್ಕೆ ಕಾರಣವಾದ್ರೆ ಅದಕ್ಕೆ ಇವರೇ ಕಾರಣ ಅಂತ ತಿಳಿಸಿದರು. ಶುಗರ್ ಕಾರ್ಖನೆಯಲ್ಲಿ ಕೋಟ್ಯಾಂತರ ಅವ್ಯವಾಹರವಾಗಿದ್ದು, ಕಪ್ಪು ಹಣ ಬಿಳಿಯಾಗಿದೆ ಈ ಬಗ್ಗೆ ಸಿಬಿಐ ತನಿಖೆಯಾಗ ಬೇಕು ಅಂತ ಹೇಳಿದರು.
ಆಡಿಯೋದಲ್ಲಿ ದುಬೈ, ಲಂಡನ್ ಗಳ ಮಾತು ಇವೇಯಂತೆ: ನನ್ನ ಹತ್ತಿರ ಸಾವಿರಾರು ಕೋಟಿ ಇದೇ, ದುಬೈನಲ್ಲಿ, ಲಂಡನ್‌ನಲ್ಲಿ ಮನೆ ಇದೇ ಅಂತ ಡಿಕೆಶಿ ಹೇಳಿರುವ ಆಡಿಯೋ ನನ್ನ ಬಳಿ ಅಂತ ಹೇಳಿದರು. ಇದೇ ವೇಳೆ ಮಾಧ್ಯಮದವರು ಯಾರ ಬಳಿ ಅವರು ಮಾತನಾಡಿದ್ದಾರೆ ಅಂಥ ಕೇಳಿದ್ದಕ್ಕೆ , ಅವರ ಗರ್ಲ್‌ಫ್ರೆಂಡ್ ಬಳಿ ಇರಬಹುದು ಅಂತ ಹೇಳಿದರು.
ಈಗ ಆಡಿಯೋವನ್ನು ನಾನು ರಿಲೀಸ್ ಮಾಡುವುದಿಲ್ಲ, ನಾನು ದೆಹಲಿಗೆ ತೆರಳಿ ಸಿಬಿಐ ಡಿಕೆಶಿ ಅಂಡ್ ಟೀಮ್ ಬಂಧಿಸುವಂತೆ ಹೇಳುವಂತೆ ಅವರು ಹೇಳಿದರು. ಸಿಡಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 120 ಮಂದಿಗಳ ಸಿಡಿಗಳನ್ನು ಮಾಡಿಸಿದ್ದಾರೆ ಅಂತ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಳಾಗುವುತ್ತಿರುವುದು ಡಿಕೆಶಿ, ವಿಷಕನ್ಯೆಯಿಂದ ?: ಕಾಂಗ್ರೆಸ್ ಪಕ್ಷ ಹಾಳಾಗುವುತ್ತಿರುವುದು ಡಿಕೆಶಿ, ವಿಷಕನ್ಯೆಯಿಂದ ? ಇಬ್ಬರು ಕುತಂತ್ರದಿಂದ ನನ್ನ ಎರಡು ವರ್ಷ ರಾಜಕೀಯ ಭವಿಷ್ಯ ಹಾಳಾಗಿದೆ ಎಂದ ಅವರು, ನಾನು ಸಹಕಾರಿ ಸಚಿವರಾಗಿದ್ದಾಗ ಡಿಕೆಶಿ ವ್ಯವಹಾರದ 10 ಸಾವಿರ ಕೋಟಿ ರೂ. ಪೈಲ್ ಅನುಮೋದನೆ ಮಾಡದ ಕಾರಣ, ನಮ್ಮಿಬ್ಬರ ನಡುವೆ ಮನಸ್ಸು ಒಡಕ್ಕಾಗಿವೆ. ಇದರ ನಡುವೆ ಗ್ರಾಮೀಣ ಶಾಸಕಿ ಎಂಟ್ರಿ ಕೊಟ್ಟ ಮೇಲೆ ಇಷ್ಟೊಂದ ರಾದಾಂತ ಸೃಷ್ಟಿಯಾಗಿದೆ. ಈ ಕುರಿತು ತನಿಖೆ ಮಾಡಲು ಸಿಬಿಐಗೆ ಒತ್ತಾಯಿಸುವೆ ಎಂದು ಕಿಡಿಕಾರಿದರು.