Belagavi News In Kannada | News Belgaum

ಚುನಾವಣೆಗೆ ಮೊದಲೇ ರಾಜಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಭೇಟಿ

ಧಾರವಾಡ: ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ ಅರವಿಂದ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಫೆಬ್ರವರಿ 26 ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬ್ಲಾಕ್ ಪದಾಧಿಕಾರಿಗಳ ಶಪಥ ಕಾರ್ಯಕ್ರಮ ಇದೆ. ಅದಕ್ಕೆ ಕೇಜ್ರಿವಾಲ್ ಬರುತ್ತಿದ್ದಾರೆ ಎಂದು ತಿಳಿಸಿದರು.

ಫೆಬ್ರವರಿ ಬಳಿಕ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಕೂಡಾ ಅವರು ಬರಲಿದ್ದಾರೆ. ಫೆಬ್ರವರಿ 26ರ ನಂತರ ಕೇಜ್ರಿವಾಲ್ ಅವರ ಟೂರ್ ಪ್ರೋಗ್ರಾಮ್ ಮಾಡುತ್ತಿದ್ದೇವೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕೇಜ್ರಿವಾಲ್ ಅವರ ಕಾರ್ಯಕ್ರಮಗಳು ಇರಲಿದೆ. ಚುನಾವಣೆಗೆ ಮೊದಲೇ ಈ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ನಾನು ಕೂಡಾ 2 ದಿನಗಳಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಸದ್ಯ ಕೇಜ್ರಿವಾಲ್ ಅವರ ತಾತ್ಕಾಲಿಕ ಭೇಟಿಯ ಪಟ್ಟಿ ಮಾಡಿದ್ದೇವೆ. ಅವರು ಯಾವ ದಿನಾಂಕಕ್ಕೆ ಸಿಗುತ್ತಾರೆ ಎಂಬುದನ್ನು ನೋಡಿಕೊಂಡು ಫೈನಲ್ ಪಟ್ಟಿ ಮಾಡುತ್ತೇವೆ ಎಂದು ಆಪ್ ರಾಜ್ಯ ಕಾರ್ಯದರ್ಶಿ ತಿಳಿಸಿದರು.//////