Belagavi News In Kannada | News Belgaum

“ಕಲಿಕಾ ಹಬ್ಬ” ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಸಹಕಾರಿ

ಸವದತ್ತಿ :- “ಮಕ್ಕಳಿಗೆ ಕಲಿಕೆಯ ಜೊತೆಗೆ ಆನಂದವನ್ನು ನೀಡುವ ಕಲಿಕಾ ಹಬ್ಬವು ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ಮಕ್ಕಳು ಇದರಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಲು ಮತ್ತಮ ಅವಕಾಶವಿದ್ದು ಭವಿಷ್ಯಕ್ಕೂ ಕೂಡ ಸಹಾಯಕಾರಿಯಾಗಲಿದೆ” ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ ಇವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸ.ಹಿ.ಪ್ರಾ ಹೆಣ್ಣು ಮಕ್ಕಳ ಶಾಲೆ ನಂ-5 ರಲ್ಲಿ ಆಯೋಜಿಸಿದ್ದ ಸವದತ್ತಿ ಉತ್ತರ ಸಿ.ಆರ್.ಸಿಯ ಕಲಿಕಾ ಹಬ್ಬಕ್ಕೆ ಬೇಟಿ ನೀಡಿದ ಅವರು ಜಗ್ಗಲಗಿ ಬಾರಿಸುವುದರ ಮೂಲಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿ.ಆರ್.ಪಿ ವ್ಹಿ.ಸಿ.ಹಿರೇಮಠ ಹಾಗೂ ಐ.ಇ.ಆರ್.ಟಿ ಶಿಕ್ಷಕರಾದ ವಾಯ್.ಬಿ.ಕಡಕೋಳ, ಎಸ್.ಬಿ.ಬೆಟ್ಟದ ಪುರಸಭೆಯ ಸದಸ್ಯರಾದ ಭಾಗ್ಯಶ್ರೀ ಸಾಲೋನಿ, ಮತ್ತು ಮುಖಂಡರಾದ ಮಲ್ಲೇಶಪ್ಪ ರಾಜನಾಳ ಮತ್ತಿತರÀರು ಸಾಥ್ ನೀಡಿದರು.
ನಗರದ ಪ್ರಭುನ್ನವರ ಓಣಿಯ ಮಲ್ಲಯ್ಯನ ದೇವಸ್ಥಾನದಿಂದ ಕಲಿಕಾ ಹಬ್ಬದ ಅಕ್ಷರ ತೇರಿನ ಜಾಥಾ ಮಾಡಲಾಯಿತು. ತೇರನ್ನು ಮಕ್ಕಳೇ ಏಳೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ಮಲ್ಲಿಕಾರ್ಜುನ ಯುವಕ ಮಂಡಳಿಯ ಜಗ್ಗಲಗಿ ತಂಡ, ರಾಮಲಿಂಗೇಶ್ವರ ದೇವಸ್ಥಾನದ ಡೋಳ್ಳು ತಂಡ, ಸಿ.ಆರ್.ಸಿ ವ್ಯಾಪ್ತಿಯ ಮಕ್ಕಳ ಲಂಬಾಣಿ ಉಡುಗೆ ತಂಡ, ಲೇಜಿಮ್ ತಂಡ, ಕುಂಭ ಕೋಡ ಹೊತ್ತ ವಿದ್ಯಾರ್ಥಿನಿಯರ ತಂಡ ಹಾಗೂ ಜಾನಪದ ನೃತ್ಯ ತಂಡ ಹೀಗೆ ಹಲವರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಕಲಿಕಾ ಹಬ್ಬದ ಜಾಥಾ ಕಾರ್ಯಕ್ರಮವು ಮಲ್ಲಯ್ಯ ದೇವಸ್ಥಾನದಿಂದ ಗಾಂಧಿಚೌಕ, ಆನಿಅಗಸಿ, ಕಡಕೋಳ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಲೆಗೆ ತಲುಪಿತು. ಇದರಲ್ಲಿ ಸಿ.ಆರ್.ಸಿ ವ್ಯಾಪ್ತಿಯ ಸಿ.ಆರ್.ಪಿ ರವಿ ನಲವಡೆ, ಎಲ ಸಂಪನ್ಮೂಲ ಶಿಕ್ಷಕರು, ಪ್ರಾಧಾನಗುರುಗಳು, ಶಿಕ್ಷಕ ಶಿಕ್ಷಕಿಯರು, ಮಕ್ಕಳು ಹಾಗೂ ಸಮೂದಾಯದ ಪಾಲಕ ಪೋಷಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.